Advertisement

ಆರ್‌ಸಿಇಪಿ ಒಪ್ಪಂದದ ಬಗ್ಗೆ ಆತಂಕ ಬೇಡ: ನಳಿನ್‌

12:26 AM Nov 02, 2019 | mahesh |

ಸುಳ್ಯ: ಆರ್‌ಸಿಇಪಿ ಒಪ್ಪಂದ ಈಗ ಚರ್ಚೆ ಹಂತದಲ್ಲಿ ಮಾತ್ರ ಇದೆ. ಹಾಗಾಗಿ ಈ ಬಗ್ಗೆ ಹರಿದಾಡುತ್ತಿರುವ ಅಭಿಪ್ರಾಯ, ವರದಿಗಳಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.

Advertisement

ಸುಳ್ಯದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಆರ್‌ಸಿಇಪಿ ಕುರಿತಂತೆ ಕೇಂದ್ರ ಸರಕಾರವು ರೈತ, ಕೃಷಿಕ ಮತ್ತು ಯೂನಿಯನ್‌ ಮುಖಂಡರ ಜತೆ ಚರ್ಚೆ ನಡೆಸಿದೆ. ಈ ಒಪ್ಪಂದವನ್ನು ನೇರವಾಗಿ ಹೇರಿಕೆ ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ. ರೈತ ವಿರೋಧಿ ಯೋಜನೆಯನ್ನು ಸರಕಾರ ಜಾರಿಗೊಳಿಸುವುದಿಲ್ಲ ಎಂದು ನಳಿನ್‌ ಹೇಳಿದರು.

ರಾಜ್ಯದಲ್ಲಿ ಅಡಿಕೆ ಕೃಷಿ ಮಾತ್ರವಲ್ಲದೆ ಹಾಲಿನ ವ್ಯವಹಾರವೂ ಇದೆ. ಈ ಎಲ್ಲ ಸಂಗತಿಗಳನ್ನು ಗಣನೆಯಲ್ಲಿ ಇರಿಸಿಕೊಂಡು ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಈ ಒಪ್ಪಂದ ರೈತ ವಿರೋಧಿಯಾಗಿ ಜಾರಿ ಆಗುವುದಿಲ್ಲ. ಜಾರಿಯಿಂದ ತೊಂದರೆಯಾಗುವ ಸಂದರ್ಭ ಎದುರಾದರೆ ನಾವೆಲ್ಲರೂ ಸೇರಿ ಅದನ್ನು ವಿರೋಧಿಸುತ್ತೇವೆ ಎಂದು ಕಟೀಲು ಉತ್ತರಿಸಿದರು.

ಅಕಾಡೆಮಿ ನೇಮಕ ವಿಚಾರದಲ್ಲಿ ಸಮಸ್ಯೆ
ಮುಖ್ಯಮಂತ್ರಿಗಳ ಉಸ್ತುವಾರಿಯಲ್ಲಿ ಅಕಾಡೆಮಿ ಗಳ ನೇಮಕ ಪ್ರಕ್ರಿಯೆ ನಡೆಯುತ್ತದೆ. ಆಯ್ಕೆ ಸಂದರ್ಭ ಕೆಲವು ಸಮಸ್ಯೆಗಳು ಆಗಿರು ವುದು ನಿಜ. ಈ ಸಮಸ್ಯೆ ಸರಿಪಡಿಸುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಲಾಗು ವುದು ಎಂದು ನಳಿನ್‌ ಹೇಳಿದರು.

ಅಡಿಕೆ ಸಮಸ್ಯೆ ಪರಿಹಾರಕ್ಕೆ ಕ್ರಮ
ಅಡಿಕೆ ಸಮಸ್ಯೆಗೆ ಸಂಬಂಧಿಸಿ ಮುಖ್ಯಮಂತ್ರಿ ಗಳು ಜಿಲ್ಲೆಯ ಎಲ್ಲ ಅಡಿಕೆ ಬಳೆಗಾರರ ಮುಖಂಡರನ್ನು ಕರೆದು ಅಭಿಪ್ರಾಯ ಆಲಿಸಿದ್ದಾರೆ. ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದರು.

Advertisement

ಟಿಪ್ಪು ಬದಲು ಕಲಾಂ ವಿಚಾರ ಸೇರಿಸಲಿ
ಟಿಪ್ಪುವಿನ ಇತಿಹಾಸವನ್ನು ನೋಡಿದಾಗ ಆತನ ಆಕ್ರಮಣಕಾರಿ ಹೋರಾಟ ಬೆಳಕಿಗೆ ಬರುತ್ತದೆ. ನೆತ್ತರಕರೆಯಲ್ಲಿ ಕ್ರೈಸ್ತರ ಮಾರಣಹೋಮ ನಡೆಸಿರುವುದು ಅದಕ್ಕೊಂದು ಸಣ್ಣ ಉದಾಹರಣೆ. ಇಷ್ಟಾಗಿಯೂ ಟಿಪ್ಪುವಿನ ದಿನಾಚರಣೆ ಮಾಡ ಬೇಕು, ಪಠ್ಯದಲ್ಲಿ ಸೇರಿಸಬೇಕೆಂದರೆ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ, ಸಂತ ಶಿಶುನಾಳ ಶರೀಫ ಅವರ ವಿಚಾರಧಾರೆಯನ್ನೂ ಸೇರಿಸಲಿ ಎಂದು ನಳಿನ್‌ ಹೇಳಿದರು.

ಶಾಸಕ ಅಂಗಾರ, ಮಂಡಲ ಸಮಿತಿ ಅಧ್ಯಕ್ಷ ವೆಂಕಟ ವಳಲಂಬೆ, ಸುಬೋಧ್‌ ಶೆಟ್ಟಿ ಮೇನಾಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next