Advertisement

Ayodhya Ram: ರಾಜಕೀಯಕ್ಕೆ ರಾಮನ ಬಳಸದಿರಿ: ಭಾಗವತ್‌ಗೆ ರಾವತ್‌ ತಿರುಗೇಟು

10:16 PM Jan 14, 2025 | Team Udayavani |

ಮುಂಬೈ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದಾಗ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂಬ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿಕೆಗೆ ಶಿವಸೇನೆ(ಯುಬಿಟಿ) ಸಂಸದ ಸಂಜಯ್‌ ರಾವತ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಆರೆಸ್ಸೆಸ್‌ ಮುಖ್ಯಸ್ಥರು ಸಂವಿಧಾನದ ನಿರ್ಮಾತೃ ಅಲ್ಲ, ಭಗವಾನ್‌ ರಾಮನನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರದು ಎಂದು ಹೇಳಿದ್ದಾರೆ.

Advertisement

“ಶತಮಾನಗಳಿಂದ ಶತ್ರುಗಳ ದಾಳಿಗೆ ತುತ್ತಾಗಿದ್ದ ಭಾರತವು ಅಯೋಧ್ಯೆ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನಡೆದ ದಿನ ನೈಜ ಸ್ವಾತಂತ್ರ್ಯವನ್ನು ಪಡೆಯಿತು’ ಎಂದು ಸೋಮವಾರ ಭಾಗವತ್‌ ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ರಾವತ್‌, “ಭಾಗವತ್‌ ಗೌರವಾನ್ವಿತ ವ್ಯಕ್ತಿ. ಆದರೆ, ಅವರು ಸಂವಿಧಾನ ರಚನಾಕಾರರಲ್ಲ. ರಾಮ್‌ ಲಲ್ಲಾ ಪ್ರತಿಷ್ಠಾಪನೆ ನಿಜಕ್ಕೂ ದೇಶಕ್ಕೆ ಹೆಮ್ಮೆಯ ಕ್ಷಣ. ಆದರೆ, ಅಂದೇ ದೇಶ ಸ್ವತಂತ್ರವಾಯಿತು ಎನ್ನುವುದು ಸರಿಯಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.