Advertisement

Kind: ಕರುಣೆ ಎಂಬ ಒಡವೆ ತೆಗೆಯದಿರು 

03:46 PM May 20, 2024 | Team Udayavani |

ಕರುಣೆ ಇಲ್ಲದ ಹೆಣ್ಣಿಗೆ ಅಂದ ಚಂದ ಎಷ್ಟಿದ್ದರೇನು ಫ‌ಲ…

Advertisement

ಹೆಣ್ಣಿಗೆ ಕರುಣೆ ಅನ್ನುವುದು ಬದುಕು ನಡೆಸಲು ಬಹು ಮುಖ್ಯವಾದ ಅಂಶವಾಗಿದೆ. ತಾಯಿಯನ್ನು ಕರುಣಾಮಯಿ ಎಂದು ಹೇಳುತ್ತಾರೆ. ಹಾಗೆಂದರೆ ಮಕ್ಕಳಿಗಾಗಿ ಆಕೆ ಏನು ಮಾಡಲು ಕೂಡ ಸಿದ್ಧಳಿರುತ್ತಾಳೆ ಎಂದರ್ಥ.

ಆದರೆ ಈಗ ಕಾಲ ಬದಲಾಗಿದೆ ಸಮಾಜದಲ್ಲಿ ಕನಿಕರ, ಕರುಣೆಗೆ ಬೆಲೆ ಇಲ್ಲದಂತಾಗಿದೆ. ಹಾಗಾಗಿ ಅಭಿವೃದ್ಧಿಯ ಬದಲಾವಣೆ ಕಾಲಕ್ಕೆ ನಮ್ಮ ಮನಸ್ಥಿತಿ ಕೂಡ ಶೀಘ್ರವಾಗಿ ಬದಲಾಗುವುದು ಅನಿವಾರ್ಯ ಎನ್ನಬಹುದು.

ಯಾರೋ ನಮ್ಮ ಬಳಿ ಭಿಕ್ಷೆ ಬೇಡಿದಾಗ ನಮಗೆ ಅವರೆಂದರೆ ಕನಿಕರ ಆಗುವುದಕ್ಕಿಂತಲೂ ಕಿರಿಕಿರಿ ಎನಿಸುತ್ತದೆ. ಹಣ ಇದ್ದರೂ ನೀಡುವ ಮನಸ್ಸು ನಮಗೆ ಬರದು. ಅದಕ್ಕೆ ಮುಖ್ಯ ಕಾರಣ ಯಾಂತ್ರಿಕ ಯುಗದಲ್ಲಿ ಕರುಣೆ ಇಲ್ಲದೆ ಭಾವಹೀನರಾಗಿ ಬದುಕುತ್ತಿರುವುದು ಎನ್ನಬಹುದು.

ಹಳ್ಳಿಭಾಗದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ, ಕರುಣೆ ಮುಂತಾದವುಗಳು ಈಗಲೂ ಜೀವಂತವಾಗಿಯೇ ಇದೆ ಆದರೆ ಇಲ್ಲಿಂದ ನಗರ ಭಾಗಕ್ಕೆ ವಲಸೆ ಹೋದ ಅನೇಕರಿಗೆ ಕರುಣೆ ಇಲ್ಲ ಎಂದು ಹೇಳಬಹುದು. ರಸ್ತೆ ಬದಿಯಲ್ಲಿ ಯಾರೊ ಬಿದ್ದು ಒದ್ದಾಟ ನಡೆಸಿದರೂ ನಾವು ಅವರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಲು ಮುಂದಾಗುತ್ತೇವೆ.

Advertisement

ಹೆಣ್ಣಿಗೆ ಇದುವೆ ಒಡವೆ

ಕರುಣೆ ಮಾನವ ಜನಾಂಗಕ್ಕೆ ಒಂದು ವಿಧವಾದ ಭಾವನೆ ಎನ್ನಬಹುದು. ಆದರೆ ಕರುಣೆ ಎನ್ನುವ ವಿಚಾರ ಬಂದಾಗ ತಾಯಿ, ಹೆಣ್ಣು ಎಂಬ ಹೋಲಿಕೆ ಬಳಕೆ ಆಗುವುದನ್ನು  ನಾವು ಕಾಣಬಹುದು.  ಮಕ್ಕಳಿಗೆ ದಾನ ಧರ್ಮದ ಸಂಸ್ಕಾರ ಕಲಿಸುವ ನೆಲೆಯಲ್ಲಿ ತಾಯಿಯಾದವರು ಮೊದಲ ಸ್ಥಾನ ಪಡೆಯುತ್ತಾರೆ. ಮಹಿಳೆ ಮನಸ್ಸು ಮಾಡಿದರೆ  ಉದ್ಯೋಗ ಕ್ಷೇತ್ರದಲ್ಲಿ ತನ್ನ ಸಹಪಾಠಿಗಳಿಗೆ ಅಥವಾ ಸಹೋದ್ಯೋಗಿಗಳ ಜತೆಗೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಂಡು ಆ ಸ್ಥಳವನ್ನು ಅಭಿವೃದ್ಧಿಪಡಿಸಬಲ್ಲಳು.

ತನಗೆ ಸಂಬಂಧ ಇರಲಿ ಇಲ್ಲದಿರಲಿ ನೋವು , ಕಷ್ಟ ಎಂದು ಬಂದಾಗ ಹೆಣ್ಣು ಕರುಣಾಮಯಿ ಆಗುವುದನ್ನು ನಾವು ಕಾಣಬಹುದು. ಹಾಗಾಗಿಯೇ ಕರುಣೆಯೂ ಕೂಡ ಹೆಣ್ಣಿನ ಗುಣ ವೈಶಿಷ್ಟéದ ಒಡವೆ ಎಂದೆ ಹೇಳಲಾಗುವುದು.  ಆದರೆ ಇತ್ತೀಚೆಗೆ  ಕಾಲ ಬದಲಾಗಿದೆ. ಕರುಣೆ ಎಂಬ ಆಭರಣ ಬದಿಗೆ ಸರಿಯುತ್ತಿದೆ ಎಂಬುದು ವಿಪರ್ಯಾಸ.

ಕರುಣೆ ಇದ್ದ ಹೆಣ್ಣು ತಾನು ಮದುವೆಯಾದ ಅನಂತರ ತನ್ನ ಸಂಸಾರದಲ್ಲಿರುವ ಸದಸ್ಯರ ಹೊಟ್ಟೆ ಮತ್ತು ನೆತ್ತಿಯ ರಕ್ಷಿಸುವವಳಾಗಿರಬೇಕು.ಅವಳು ಸಂಸಾರ ಎಂಬ ಸಾಗರವನ್ನು ಧುಮುಕಿದ ನಂತರ ತನ್ನ ಕುಟುಂಬದವರಿಗೆ ಮಾತ್ರ ಹೊಟ್ಟೆ ತುಂಬಿಸುವವಳಾಗದೆ. ಆ ಕುಟುಂಬವನ್ನು ಅರಸಿ ಬಂದವರಲ್ಲಿ ಖುಷಿಯಿಂದ ಮಾತನಾಡಿಸಿ ಹಸಿದು ಬಂದವರಿಗೆ ಅನ್ನವನ್ನು ಹಾಕುವ ಕರುಣಾಮಯಿ ಆಗಿರಬೇಕು. ಹೆಣ್ಣು ಸಂಸಾರದ ಕಣ್ಣು ಆಗಿರಬೇಕು ವಿನಃ… ದೃಷ್ಟಿ ಇದ್ದ ಕುರುಡಿಯಾಗಿರಬಾರದು.

ತಾನು ಅತ್ತೆ ಎಂಬ ಅಧಿಕಾರ ಪಡೆದ ಅನಂತರ ತನ್ನ ಮನೆಗೆ ಬಂದ ಸೊಸೆ ತನ್ನ ಅಕ್ಕ ಅಥವಾ ತಂಗಿಯ ಮಗಳೆಂದು ಭಾವಿಸಿ, ಅವಳು ನನ್ನ ಮಗಳೆಂದು ತಿಳಿದು ಆ ಇಬ್ಬರು ಮಾತೆಯರು ಹೊಂದಿಕೊಂಡು ಜೀವನದ ಬಂಡಿಯನ್ನು ನಡೆಸಿದರೆ ಸಂಸಾರದಲ್ಲಿ ನೆಮ್ಮದಿ ಉಕ್ಕಿ ಖುಷಿ ತುಂಬಿ ತುಳುಕುತ್ತದೆ.

ಆದರೆ ಅದೇ ಅತ್ತೆಗೆ ಕರುಣೆ ಇಲ್ಲದಿದ್ದರೆ ಸೊಸೆಯ ಮೇಲೆ ದಬ್ಟಾಳಿಕೆ ಮಾಡಬಲ್ಲಳು.. ಆದರೆ ಸೊಸೆಗೆ ಕರುಣೆ ಇಲ್ಲದಿದ್ದಲ್ಲಿ ಒಂದು ಮನೆಯನ್ನು ಇಬ್ಭಾºಗ ಮಾಡಿ ತನ್ನ ಗಂಡನನ್ನು ಸಾಕಿಸಲುಹಿದ ಅತ್ತೆ ಮಾವನನ್ನು ಅವರಿಂದ ದೂರ ಮಾಡಬಲ್ಲಳು. ಇದೇ ರೀತಿ ಪುರುಷರು ಕೂಡ ಸ್ತ್ರೀ ಎಂದರೆ ಅಬಲೆ ಎಂಬ ಭಾವನೆಯಲ್ಲಿ ಕೀಳಾಗಿ ಕಾಣುತ್ತಾರೆ. ಈ ಧೋರಣೆ ಕೂಡ ತಪ್ಪು. ಸಮಾಜ ಎಂದ ಮೇಲೆ ನಾವೆಲ್ಲ ಸಮಾನರು. ಅಲ್ಲಿ ಪ್ರೀತಿಯ ಬೆಲ್ಲ ಹಂಚುವ ಜೊತೆಗೆ ನೋವಿನ ಬೇವನ್ನು ಹಂಚಿ ತಿನ್ನುವ ಗುಣ ನಮ್ಮಲ್ಲಿ ಬೆಳೆಯಬೇಕು.

ಆದ್ದರಿಂದ ನಿಮ್ಮಿಂದ ಆದರೆ ನೀವು ಮಾಡುವ ಕೆಲಸದಲ್ಲಿ ಒಳ್ಳೆಯ ಉದ್ದೇಶ ಇರಲಿ ನಾವು ಮಾಡುವ ಕೆಲಸದಲ್ಲಿ ಒಳ್ಳೆತನ ಇದ್ದರೆ, ನಮಗೂ ಒಳ್ಳೆಯದೇ ಆಗುತ್ತದೆ. ಹಸಿದು ಬಂದವರಿಗೆ ಅನ್ನ ಹಾಕುವ ಸ್ತ್ರೀಯರನ್ನು, ಅನ್ಯರ ಒಳಿತಿಗಾಗಿ ಧೈರ್ಯದಿಂದ ಮುನ್ನುಗ್ಗುವ ಸ್ತ್ರೀಯರನ್ನು, ನಮ್ಮ ಸಂಸ್ಕೃತಿಯನ್ನು ಬೆಳೆಸಿ ಉಳಿಸುವ ಸ್ತ್ರೀಯರನ್ನು ನಾವು ಎಂದಿಗೂ ಅವರನ್ನು ಗೌರವಿಸೋಣ..!

– ಭರತ್‌ ವಾಸು ನಾಯ್ಕ…

ಮಾಳಂಜಿ, ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next