Advertisement

ಇಲ್ಲ ಸಲ್ಲದ ಸುದ್ದಿ ಹರಡಿ ಜನರನ್ನು ಎತ್ತಿ ಕಟ್ಟಬೇಡಿ; ಕೆ.ಎಂ. ಶಿವಲಿಂಗೇಗೌಡ

06:17 PM Apr 08, 2022 | Team Udayavani |

ಅರಸೀಕೆರೆ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ ದುರುಪಯೋಗ ಪಡಿಸಿಕೊಂಡು ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ವೈರಲ್‌ ಮಾಡುವ ಮೂಲಕ ತಮ್ಮ ವಿರುದ್ಧ ಜನರನ್ನು ಎತ್ತಿ ಕಟ್ಟುವ ಸಂಚನ್ನು ರೂಪಿಸಲಾಗುತ್ತಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.

Advertisement

ತಾಲೂಕಿನಲ್ಲಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಸುದ್ದಿಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಬಿಜೆಪಿ ಪಕ್ಷದ ಮುಖಂಡರಾದ ಎನ್‌.ಆರ್‌.ಸಂತೋಷ್‌ ವಿರುದ್ಧ ಶಾಸಕ ಕೆ.ಎಂ. ಶಿವಲಿಂಗೇಗೌಡರು ತಮ್ಮ ಕಾರ್ಯಕರ್ತರಿಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಶಾಸಕರ ಈ ನಡವಳಿಕೆ ತಾವು ವಿರೋಧಿಸಿ ಅವರ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಮುಖಂಡ ಚಂದ್ರಶೇಖರ್‌ ಯಾದವ್‌ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದ ಹಿನ್ನೆಲೆ ನಗರದಲ್ಲಿ ಇಂದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಪರಿಸ್ಥಿತಿ ತಿಳಿಗೊಳಿಸಿದ ಖಾಕಿ ಪಡೆ: ಪೊಲೀಸರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಸಕರ ಮನೆ ಮುಂದೆ ಪ್ರತಿಭಟನೆಗೆ ಮುಂದಾದ ಚಂದ್ರಶೇಖರ್‌ ಯಾದವ್‌ ಅವರನ್ನು ಸಾಧನಾ ಚಿತ್ರಮಂದಿರ ಮುಂಭಾಗದಲ್ಲಿ ತಕ್ಷಣ ವಶಕ್ಕೆ ತೆಗೆದುಕೊಳ್ಳುವ ಮೂಲಕ ಪ್ರತಿಭಟನೆಗೆ ಅವಕಾಶ ನೀಡದೆ ಇದರಿಂದ ಪರಿಸ್ಥಿತಿ ತಿಳಿಯಾಯಿತು.

ದ್ವೇಷ ರಾಜಕಾರಣ ಸಲ್ಲದು: ಮತ್ತೂಂದೆಡೆ ಬಿಜೆಪಿ ಮುಖಂಡರ ಹೇಳಿಕೆಯಿಂದ ಆಕ್ರೋಶಗೊಂಡ ಜೆಡಿಎಸ್‌ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು, ಶಾಸಕರ ಮನೆ ಮುಂದೆ ಜಮಾಯಿಸಿದರು. ತಮ್ಮ ಬೆಂಬಲಕ್ಕೆ ನಿಂತ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಶಾಸಕ ಶಿವಲಿಂಗೇಗೌಡ ಮಾತನಾಡಿದರು. ಅರಸೀಕೆರೆ ಕ್ಷೇತ್ರದ ಜನತೆ ಆತ್ಯಂತ ಶಾಂತಿಪ್ರಿಯರು. ದ್ವೇಷದ ರಾಜ ಕಾರಣ ಯಾವುದೇ ಪಕ್ಷದ ಮುಖಂಡರು ಇದುವರೆಗೂ ಮಾಡಿಲ್ಲ, ಚುನಾವಣೆ ಫ‌ಲಿತಾಂಶದ ನಂತರ ಎಲ್ಲರೂ ಪಕ್ಷಾತೀತವಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಿ ಸೂಕ್ತ ಸಲಹೆ, ಸಹಕಾರ
ಇದುವರೆಗೆ ನೀಡಿದ್ದಾರೆ.

Advertisement

ಶಾಸಕರು ಕ್ಷೇತ್ರದ ಮನೆ ಮಗನಾಗಿದ್ದಾರೆ: ಜೆಡಿಎಸ್‌ ಮುಖಂಡ ಧರ್ಮ ಶೇಖರ್‌ ಮಾತನಾಡಿ, ರಾಜಕಾರಣದಲ್ಲಿ ಪರ-ವಿರೋಧಗಳ ಟೀಕೆ ಟಿಪ್ಪಣಿ, ಚರ್ಚೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಇರಬೇಕೇ ಹೊರತು ಖಾಸಗಿಯಾಗಿ ಆಡುವ ಮಾತುಗಳು ಹಾಗೂ ವೈಯಕ್ತಿಕ ವಿಚಾರ ರಾಜಕಾರಣಕ್ಕಾಗಿ ಬಳಕೆ ಮಾಡಿಕೊಳ್ಳುವುದು ಒಳ್ಳೆಯ ಬೆಳವ ಣಿಗೆಯಲ್ಲ. ಈ ರಾಜಕಾರಣ ಕ್ಷೇತ್ರದಲ್ಲಿ ಹೆಚ್ಚು ದಿನ ನಡೆಯಲ್ಲ. ಅರಸೀಕೆರೆ ಕ್ಷೇತ್ರ ಮಾದರಿ ಕ್ಷೇತ್ರವನ್ನಾಗಿ
ಅಭಿವೃದ್ಧಿಪಡಿಸುವಲ್ಲಿ ಶಾಸಕರ ಪಾತ್ರ ಅಪಾರವಾಗಿದೆ.

ಇವರು ಶಾಸಕರು ಮಾತ್ರ ಅಲ್ಲ ಕ್ಷೇತ್ರದ ಪ್ರತಿಯೊಬ್ಬರ ಮನೆಯ ಮಗನಾಗಿದ್ದರೆ. ಇಂತವರ ವಿರುದ್ಧ ಮಾತನಾಡುವಾಗ ಸ್ವಲ್ಪ ಯೋಚಿಸಿ ಮಾತನಾಡಬೇಕು. ಇಲ್ಲದೆ ಹೋದರೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇನ್ನು ಮುಂದೆ ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸುಳ್ಳು ಸುದ್ದಿಗೆ ಸೊಪ್ಪು ಹಾಕಲ್ಲ: ನಗರಸಭೆ ಸದಸ್ಯ ಎಂ. ಸಮಿವುಲ್ಲಾ ಮಾತನಾಡಿ, ಶಾಸಕ ಕೆ.ಎಂ. ಶಿವಲಿಂಗೇಗೌಡರು ಒಬ್ಬ ವ್ಯಕ್ತಿಯಲ್ಲ ಅವರು ಒಂದು ಶಕ್ತಿಯಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಹಾಗಾಗಿ ಜನತೆ ಕೂಡ ಚುನಾವಣೆಯಿಂದ ಚುನಾವಣೆಗೆ ಹೆಚ್ಚು ಬಹುಮತ ನೀಡಿ ಗೆಲ್ಲಿಸುತ್ತಿದ್ದಾರೆ. ಇವರ ಜನಪ್ರಿಯತೆ ಸಹಿಸದೆ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ತಾಣಗಳಲ್ಲಿ ಸುಳ್ಳು ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸದಿದ್ದರೆ ಕ್ಷೇತ್ರದ ಜನತೆಯೇ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಹುಚ್ಚೇಗೌಡ, ತಾಲೂಕು ಜೆಡಿಎಸ್‌ ಕಾರ್ಯಾಧ್ಯಕ್ಷ ಅಡವಿ ಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಎಚ್‌ .ಟಿ.ಶಿವಮೂರ್ತಿ ಜೆಡಿಎಸ್‌ ಮುಖಂಡರಾದ ಜಿ.ಎಸ್‌. ಹನುಮಪ್ಪ, ಬಂಡಿಗೌಡ ರಾಜಣ್ಣ, ಹರತನಹಳ್ಳಿ ಜಯಣ್ಣ ನಗರಸಭೆ ಮಾಜಿ ಅಧ್ಯಕ್ಷ ಮೋಹನ್‌ ಕುಮಾರ್‌ ಮಾತನಾಡಿ ಬಿಜೆಪಿ ಮುಖಂಡರ ವರ್ತನೆ ಖಂಡಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್‌ನ ಚುನಾಯಿತ ಜನಪ್ರತಿನಿಧಿಗಳು ಮತ್ತು ಮುಖಂಡರು ಹಾಗೂ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವಾಮಮಾರ್ಗದ ಆಟ ನಡೆಯಲ್ಲ
ಇತ್ತೀಚೆಗೆ ಈ ಕ್ಷೇತ್ರದ ಶಾಸಕ ಸ್ಥಾನದ ಆಕಾಂಕ್ಷಿಯಾಗಿ ಪದಾರ್ಪಣೆ ಮಾಡಿರುವ ವ್ಯಕ್ತಿಯೊಬ್ಬರು ನನ್ನ ಜನಪ್ರಿಯತೆ ಸಹಿಸದೆ ನನ್ನ ವಿರುದ್ಧ ಅಮಾಯಕರನ್ನು ಬಳಸಿಕೊಂಡು ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಗದ್ದಲ ಮಾಡಿಸುವುದು, ಸಾಮಾಜಿಕ ಜಾಲತಾಣ ದುರ್ಬಳಕೆ ಮಾಡಿಕೊಂಡು ಸಮಾಜದಲ್ಲಿನ ಶಾಂತಿ ಸುವ್ಯವಸ್ಥೆ ಹಾಳು ಮಾಡಿ, ಪರಿಸ್ಥಿತಿ ಲಾಭ ಪಡೆದು ಶಾಸಕನಾಗುವ ಹಗಲು ಕನಸು ಕಾಣುತ್ತಿದ್ದಾರೆ.

ಆದರೆ, ಈ ಕ್ಷೇತ್ರದ ಜನತೆ ಪ್ರಜ್ಞಾವಂತರಿದ್ದಾರೆ. ರಾಂಪುರದ ರಸ್ತೆ ವಿಚಾರದಲ್ಲಿ ಗಲಾಟೆ ಮಾಡಿಸಿ ದ್ಯಾರು? ನಗರಸಭೆ ಜೆಡಿಎಸ್‌ ಚುನಾಯಿತ ಸದಸ್ಯರನ್ನು ಪಕ್ಷಾಂತರ ಮಾಡಿಸಿ, ಅವರ ಅನರ್ಹತೆಗೆ ಕಾರಣಕರ್ತರು ಯಾರು? ಅಲ್ಲದೆ ತಮ್ಮ ಸ್ವಪಕ್ಷದಲ್ಲಿಯೇ ಗುಂಪುಗಾರಿಕೆ ನಡೆಸುತ್ತಿರುವವರ ಬಗ್ಗೆ ಮತದಾರರು ಗಮನಿಸುತ್ತಿದ್ದಾರೆ. ಈ ರೀತಿಯ ವಾಮ ಮಾರ್ಗದ ರಾಜಕಾರಣಕ್ಕೆ ಈ ಕ್ಷೇತ್ರದ ಜನತೆ ಎಂದಿಗೂ ಮಣೆ ಹಾಕುವುದಿಲ್ಲ. ಇದಕ್ಕೆಲ್ಲ ಮುಂದಿನ ಚುನಾವಣೆ ಫ‌ಲಿತಾಂಶವೆ ಸಾಕ್ಷಿಯಾಗಲಿದೆ ಎಂದು ಶಾಸಕ ಶಿವಲಿಂಗೇಗೌಡ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next