ಹೆಂಗಸರ ಬಗ್ಗೆ ಇರುವ ಜೋಕ್‌ಗಳಲ್ಲಿ, ಅವರ ಮಾತು, ಶಾಪಿಂಗ್‌ನ ನಂತರದ ಸ್ಥಾನ ಡ್ರೈವಿಂಗ್‌ಗೆ. ಯಾರಾದರೂ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಿದ್ದರೆ, ಲೆಫ್ಟ್ ಇಂಡಿಕೇಟರ್ ಹಾಕಿ ರೈಟ್‌ಗೆ ಹೋಗುತ್ತಿದ್ದಾರೆ, “ಪಕ್ಕಾ, ಲೇಡಿನೇ ಓಡಿಸ್ತಿರೋದು’ ಅಂತ ಭಾವಿಸುತ್ತಾರೆ ಗಂಡಸರು. ಆದರೆ, ವಾಸ್ತವ ಬೇರೆಯೇ ಇದೆ. ಇಂಗ್ಲೆಂಡ್‌ನ “ಕನ್‌ಫ್ಯೂಸ್ಡ್ ಡಾಟ್‌ಕಾಮ್’ ವೆಬ್‌ಸೈಟ್‌ನ ಅಧ್ಯಯನದ ಪ್ರಕಾರ, ಗಂಡಸರಿಗಿಂತ ಹೆಂಗಸರೇ ಉತ್ತಮ ಡ್ರೈವರ್‌ಗಳಂತೆ! ಆ ಅಧ್ಯಯನದಲ್ಲಿ ಕಂಡುಬಂದ ವಿಚಾರಗಳು ಏನೇನು ಗೊತ್ತೇ? 2018ರಲ್ಲಿ, ಇಂಗ್ಲೆಂಡ್‌ನಲ್ಲಿ ದಾಖಲಾದ 6 ಲಕ್ಷ ಮೋಟಾರು ವಾಹನ ಅಪರಾಧಗಳ ಪೈಕಿ ಶೇ.79ರಷ್ಟನ್ನು ಗಂಡಸರೇ ಮಾಡಿದ್ದರಂತೆ! ರಸ್ತೆ ನಿಯಮಗಳನ್ನು ಮುರಿಯುವುದರಲ್ಲಿ, ನಿರ್ಲಕ್ಷದಿಂದ ವಾಹನ ಚಲಾಯಿಸುವುದರಲ್ಲಿ ಗಂಡಸರೇ ಮುಂದೆ. ಅಷ್ಟೇ ಅಲ್ಲ, ಕಳೆದ ವರ್ಷ ವಾಹನ ವಿಮೆಯನ್ನು ಪಡೆದವರಲ್ಲೂ ಮಹಿಳೆಯರಿಗಿಂತ ಪುರುಷರೇ ಜಾಸ್ತಿ ಇದ್ದಾರಂತೆ. ಈಗ ಹೇಳಿ, ಸುಮ್‌ಸುಮ್ನೆ ಹೆಂಗಸರ ಮೇಲೆ ಗೂಬೆ ಕೂರಿಸೋದು ತಪ್ಪು ತಾನೇ?