Advertisement

ದೇಶದ “ಆಭರಣ’ಮಾರಬೇಡಿ: ಏರ್‌ಇಂಡಿಯಾ ಯೂನಿಯನ್‌

10:25 AM Dec 22, 2019 | Team Udayavani |

ನವದೆಹಲಿ: ಸಾಲದ ಶೂಲಕ್ಕೆ ಸಿಲುಕಿ ಭಾರೀ ನಷ್ಟ ಅನುಭವಿಸುತ್ತಿರುವ ಏರ್‌ ಇಂಡಿಯಾ ಮಾರಾಟದ ತಾರ್ಕಿಕ ಘಟ್ಟ ತಲುಪಿದೆ. ಏತನ್ಮಧ್ಯೆ, ಪೈಲಟ್‌ಗಳನ್ನು ಒಳಗೊಂಡ ಏರ್‌ ಇಂಡಿಯಾದ 6 ಒಕ್ಕೂಟಗಳು, “ಏರ್‌ಇಂಡಿಯಾ ದೇಶದ ಆಭರಣ. ರಾಷ್ಟ್ರೀಯತೆಯ ಸಂಕೇತವಾಗಿರುವ ಇದನ್ನು ಮಾರಾಟ ಮಾಡುವುದು ಬೇಡ’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿವೆ.

Advertisement

ಕಳೆದ ಮೂರು ವರ್ಷಗಳಿಂದ ಏರ್‌ ಇಂಡಿಯಾ ಲಾಭದತ್ತ ಸಾಗುತ್ತಿದೆ. ಆದರೆ, ಭಾರೀ ಪ್ರಮಾಣದ ಸಾಲದ ಹೊರೆ ಇರುವುದರಿಂದ ವಾರ್ಷಿಕ 4 ಸಾವಿರ ಕೋಟಿ ರೂ.ಗಳನ್ನು ಸಾಲಕ್ಕೆ ಪಾವತಿಸಲಾಗುತ್ತಿದೆ. ಈ ಸಾಲ ಮನ್ನಾ ಮಾಡಬೇಕು ಹಾಗೂ ಏರ್‌ಇಂಡಿಯಾ ನಿರ್ವಹಣೆಗೆ ವೃತ್ತಿಪರ ಆಡಳಿತ ಮಂಡಳಿ ಸ್ಥಾಪಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ, ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪಿ.ಎಸ್‌.ಖರೋಲಾ, ಏರಿಂಡಿಯಾ ಸಿಎಂಡಿ ಅಶ್ವನಿ ಲೋಹಾನಿ ಅವರಿಗೆ ಪತ್ರ ಬರೆಯಲಾಗಿದೆ.

2020ರ ಮಾರ್ಚ್‌ 31ರೊಳಗೆ ಏರ್‌ ಇಂಡಿಯಾದ ಪೂರ್ಣ ಬಂಡವಾಳ ಹಿಂತೆಗೆತಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಗಡುವು ವಿಧಿಸಿದ್ದಾರೆ. ಈ ಮೂಲಕ ಏರ್‌ಇಂಡಿಯಾ ಇತಿಹಾಸ ಪುಟಕ್ಕೆ ಸೇರಲು ಅಂತಿಮ ಘಟ್ಟ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next