Advertisement

ಕೋವಿಡ್‌ ವಿಚಾರದಲ್ಲಿ ರಾಜಕೀಯ ಮಾಡಬೇಡಿ

06:59 AM May 25, 2020 | Lakshmi GovindaRaj |

ನಾಗಮಂಗಲ: ಕೋವಿಡ್‌ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕಾದ ಶಾಸಕರೇ, ವ್ಯತಿರಿಕ್ತ ಹೇಳಿಕೆ ನೀಡಿ ಸಾರ್ವಜನಿಕರಲ್ಲಿ ಗೊಂದಲ ಹುಟ್ಟಿಸುತ್ತಿರುವುದು ಸರಿಯಲ್ಲ ಎಂದು ಸಚಿವ ನಾರಾಯಣಗೌಡ ತಿರುಗೇಟು ನೀಡಿದರು. ಪಟ್ಟಣದಲ್ಲಿ ತಾಲೂಕು ಟಾಸ್ಕ್ಫೋರ್ಸ್‌ ಸಮಿತಿ ಅಧಿಕಾರಿಗಳಿಂದ ಕೊರೊನಾ ವೈರಸ್‌ ನಿಯಂತ್ರಣ ಮತ್ತು ನಿರ್ವಹಣೆ ಮಾಹಿತಿ ಸಭೆಯಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ಕೊರೊನಾ ನಿಯಂತ್ರಣದ ಸಂಕಷ್ಟ ಪರಿಸ್ಥಿತಿಯಲ್ಲಿ ಸುರೇಶ್‌ಗೌಡ ಏನೆಂದು ನನಗೆ ಗೊತ್ತಿದೆ. ನಿಮ್ಮ ಯಾವುದೋ ಸಮಸ್ಯೆ ಎಲ್ಲೋ ವ್ಯಕ್ತಪಡಿಸಬೇಡಿ, ನೀವು ನಮ್ಮ ಜೊತೆ ಪರ್ಸನಲ್‌ ಆಗಿ ಮಾತನಾಡಿರುವುದನ್ನು ಬ್ಲಾಸ್ಟ್‌ ಮಾಡಬೇಕಾಗುತ್ತದೆ ಎಂದು ಕಿಡಿಕಾರಿದರು. ಕೋವಿಡ್‌ ವಿಚಾರದಲ್ಲಿ ರಾಜಕೀಯ ಮಾಡಬೇಡಿ, ಜಿಲ್ಲಾಡಳಿತ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಮನೆ, ಮಠ ಬಿಟ್ಟು ಅಧಿಕಾರಿಗಳು ದಿನದ 24 ಗಂಟೆಯೂ  ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಹಣದ ಕೊರತೆ ಇಲ್ಲ: ತಾಲೂಕಿನಲ್ಲಿ 60 ಲಕ್ಷ ರೂ. ಹಣವಿದ್ದು, ಅಗತ್ಯವಿರುವಷ್ಟು ಖರ್ಚು ಮಾಡಲಾಗಿದೆ. ಹಣವಿಲ್ಲ ಎನ್ನುವುದು ಶಾಸಕರ ನಿರಾಧಾರ ಹೇಳಿಕೆ. ಅವರನ್ನು ಹೇಳಿ ಕೇಳಿ ಖರ್ಚು ಮಾಡುವ ಅಗತ್ಯವಿಲ್ಲ. ಶಾಸಕರು ಅಗತ್ಯ  ಸಲಹೆ ಸಹಕಾರ ನೀಡಲಿ, ಗೊಂದಲ ಸೃಷ್ಟಿಸುವುದು ಬೇಡ ಎಂದು ಹೇಳಿದರು. ವಾಮ ಮಾರ್ಗದಲ್ಲಿ ಬರಬೇಡಿ: ಮುಂಬೈ ಸೇರಿದಂತೆ ಹೊರ ರಾಜ್ಯಗಳಿಂದ ರಾಜ್ಯಕ್ಕೆ ಅಗಮಿಸುವವರು ವಾಮ ಮಾರ್ಗವನ್ನನುಸರಿಸದೆ, ಸರ್ಕಾರದ  ನಿಯಮಾನುಸಾರವೇ ರಾಜ್ಯ ಪ್ರವೇಶಿಸಬೇಕು.

ಕದ್ದು ಬರುವುದರಿಂದ ಕೋವಿಡ್‌ ಸಮುದಾಯಕ್ಕೂ ಹರಡಿ ಸಮಸ್ಯೆ  ಉಲ್ಬಣವಾಗುತ್ತವೆ. ಹೊರ ರಾಜ್ಯಗಳಲ್ಲಿರುವವರನ್ನು ಹಂತ ಹಂತವಾಗಿ ಕರೆಸಿಕೊಳ್ಳಲಾಗುವುದು. ಯಾರೂ ಆತಂಕ  ಪಡಬೇಡಿ. ಅಲ್ಲಿಯವರೆಗೆ ಎಲ್ಲರೂ ತಾಳ್ಮೆಯಿಂದ ಇರಬೇಕೆಂದು ತಿಳಿಸಿದರು. ಸಭೆಯಲ್ಲಿ ತಹಶೀಲ್ದಾರ್‌ ಅಹಮದ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಧನಂಜಯ, ತಾಪಂನ ಇಒ ಅನಂತ್‌ರಾಜ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next