Advertisement

ಹೆಲ್ಮೆಟ್‌ ನಿರ್ಲಕ್ಷಿಸದಿರಿ: ನಂದೀಶ್‌

05:30 PM Oct 09, 2019 | Suhan S |

ಮಧುಗಿರಿ: ಜೀವ ಉಳಿಸುವ ಹೆಲ್ಮೆಟ್‌ ಯಾರೂ ನಿರ್ಲಕ್ಷಿಸಬಾರದು ಎಂದು ತಹಶೀಲ್ದಾರ್‌ ನಂದೀಶ್‌ ತಿಳಿಸಿದರು. ಪಟ್ಟಣದಲ್ಲಿ ಪೊಲೀಸ್‌ ಇಲಾಖೆಯಿಂದ ಹೆಲ್ಮೆಟ್‌ ಬಳಕೆ ಬಗ್ಗೆ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ಕಾನೂನು ಪಾಲಿಸುವುದು ಮಾತ್ರವಲ್ಲದೆ ಹೆಲ್ಮೆಟ್‌ ಜೀವ ಉಳಿಸಿ ಕುಟುಂಬ ಬೀದಿ ಪಾಲಾಗದಂತೆ ಕಾಪಾಡುತ್ತದೆ. ಹೆಲ್ಮೆಟ್‌ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸಬಾರದು. ಅಪಘಾತವಾದಾಗ ತಲೆಗೆ ಮೊದಲು ಪೆಟ್ಟು ಬೀಳುತ್ತದೆ. ಹಾಗಾಗಿ ಎಲ್ಲರೂ ಹೆಲ್ಮೆಟ್‌ ಧರಿಸಿ ವಾಹನ ಚಲಾಯಿಸಬೇಕು. ಇದ ರಿಂದ ಕಾನೂನು ಪಾಲಿಸಿದಂತಾಗಲಿದ್ದು, ದಂಡದಿಂದ ಪಾರಾಗಬಹುದು ಎಂದರು.

ಡಿವೈಎಸ್ಪಿ ಧರಣೇಶ್‌ ಕುಮಾರ್‌ ಮಾತ ನಾಡಿ, ಹೆಲ್ಮೆಟ್‌ ನಿಮಗಲ್ಲದಿದ್ದರೂ ಕುಟುಂಬದ ನೆಮ್ಮದಿಗಾದರೂ ಧರಿಸಿ ವಾಹನ ಚಲಾಯಿಸಿ. ಇಲ್ಲವಾದರೆ ದಂಡ ವಸೂಲಿ ಮಾಡಲಾಗುತ್ತದೆ ಎಂದು ಎಚ್ಚರಿ ಸಿದರು. ಸಿಪಿಐ ದಯಾನಂದ ಶೇಗುಣಸಿ ಮಾತನಾಡಿ ಜೀವದ ಬೆಲೆ ಹಾಗೂ ಕುಟುಂಬದ ಕಷ್ಟ ತಿಳಿಸಲೆಂದು ಜಾಗೃತಿ ಮೂಡಿಸುವ ಕಾರ್ಯಕ್ಕೆ ಇಲಾಖೆ ಮುಂದಾಗಿದೆ ಎಂದರು.

ಪಿ ಎಸ್ ಐಗಳಾದ ರವೀಂದ್ರ, ಪಾಲಾಕ್ಷ , ಮಂಗಳಗೌರಮ್ಮ, ಎಎಸ್ಸೆ„ಗಳಾದ ರವಿಕುಮಾರ್‌, ತಾರಾಸಿಂಗ್‌, ಶ್ರೀನಿವಾಸ್‌, ಪೇದೆಗಳಾದ ಗಣೇಶ್‌, ನಟರಾಜು, ವಿನಯ್‌ಕುಮಾರ್‌, ಮಧು, ದಿನೇಶ್‌ನಾಯ್ಕ, ತೇಜರಾಜು, ಬೋರೆಗೌಡ, ಗಿರೀಶ್‌, ರಾಮಕೃಷ್ಣಪ್ಪ, ಗೋವಿಂದರಾಜು, ಕಲ್ಲೇಶಪ್ಪ, ಮಂಜುನಾಥ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next