Advertisement
ಹೆದರುವ ಅಗತ್ಯವಿಲ್ಲಕೋವಿಡ್ 19 ಭೀತಿಯಿಂದ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ತುರ್ತು ಸೇವೆ ಹೊರತು ಪಡಿಸಿ ಇತರೆ ಸೇವೆಯನ್ನು ರದ್ದುಪಡಿಸಲಾಗಿದೆ. ಇದರಿಂದ ಭಯಗೊಂಡ ರೋಗಿಗಳು ತುರ್ತು ಸೇವೆಗೂ ಆಸ್ಪತ್ರೆಗಳಿಗೆ ತೆರಳದೆ ಮನೆಯಲ್ಲೇ ಇರುವುದರಿಂದ ಅಪಾಯ ಆಹ್ವಾನಿಸುತ್ತಿರುವ ಘಟನೆಗಳು ವರದಿಯಾಗುತ್ತಿವೆ.
ಜಿಲ್ಲೆಯಲ್ಲಿ ಮಣಿಪಾಲ ಕಸ್ತೂರ್ಬಾ, ಆದರ್ಶ ಆಸ್ಪತ್ರೆ, ಗಾಂಧಿ ಆಸ್ಪತ್ರೆ, ನ್ಯೂಸಿಟಿ, ಹೈಟೆಕ್ ಆಸ್ಪತ್ರೆಯಲ್ಲಿ ಪ್ರಸ್ತುತ ತುರ್ತು ಪರಿಸ್ಥಿತಿಯಲ್ಲಿ ಒಪಿಡಿ ಮತ್ತು ವೈದ್ಯಕೀಯ ಸೇವೆಗೆಳು ಕಾರ್ಯನಿರ್ವಹಿಸುತ್ತಿವೆ. ತುರ್ತು ಸರ್ಜರಿ
ಲಾಕ್‌ಡೌನ್ ಪರಿಣಾಮ ಖಾಸಗಿ ಆಸ್ಪತ್ರೆಗಳಿಗೆ ರಾಜ್ಯದ ವಿವಿಧ ಕಡೆಯಿಂದ ಆಗಮಿಸುತ್ತಿದ್ದ ರೋಗಿಗಳು ಸಂಖ್ಯೆ ಕಡಿಮೆಯಾಗಿದೆ. ತುರ್ತು ವೈದ್ಯಕೀಯ ಅಗತ್ಯಗಳಿಗೆ ಮಾತ್ರ ಜಿಲ್ಲೆ ಗಡಿಗಳಲ್ಲಿ ಆಸ್ಪತ್ರೆಗೆ ರೋಗಿಗಳನ್ನು ಬಿಟ್ಟುಕೊಳ್ಳಲಾಗುತ್ತಿದೆ. ಎಮರ್ಜೆನ್ಸಿ ಸರ್ಜರಿ ರೋಗಿಗಳಿಗೆ ಸೂಚನೆ ನೀಡಿ ಆಸ್ಪತ್ರೆಗೆ ಕರೆಸಲಾಗುತ್ತಿದೆ. ಉಳಿದ ಸರ್ಜರಿಗಳನ್ನು ಮುಂದೂಡಲಾಗಿದೆ.
Related Articles
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಆದರ್ಶ ಆಸ್ಪತ್ರೆ, ಗಾಂಧಿ, ಹೈಟೆಕ್, ನ್ಯೂಸಿಟಿ, ಮಿತ್ರ, ಲಲಿತ್, ಡಾ| ಎ.ವಿ.ಬಾಳಿಗಾ ದೊಡ್ಡಣಗುಡ್ಡೆ ಆಸ್ಪತ್ರೆಗಳಲ್ಲಿಯೂ ರೋಗಿಗಳ ಸಂಖ್ಯೆ ಇಳಿಮುಖವಾಗಿದ್ದು, ಸರ್ಜರಿ, ಮೊದಲಾದ ವೈದ್ಯಕೀಯ ಚಟುವಟಿಕೆ ಶೇ.70ಕ್ಕೆ ತಗ್ಗಿದೆ. ಆಸ್ಪತ್ರೆಗಳು ಟೆಲಿ ಮೆಡಿಸನ್ ವ್ಯವಸ್ಥೆ ಮೂಲಕ ವೈದ್ಯರೊಂದಿಗೆ ಸಮಾಲೋಚಿಸುವ ವ್ಯವಸ್ಥೆಯನ್ನು ಮಾಡುತ್ತಿವೆ.
Advertisement
ಆಸ್ಪತ್ರೆಯಲ್ಲಿ ತುರ್ತು ಒಪಿಡಿ ಸೇವೆಗಳಿಗೆ ಅವಕಾಶ ನೀಡಲಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳನ್ನು ಮೊದಲಿಗೆ ಸ್ಕ್ರೀನಿಂಗ್ ಒಳಪಡಿಸಲಾಗುತ್ತಿದೆ. ಕೊರೊನಾ ಲಕ್ಷಣ ಕಂಡು ಬಂದವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತದೆ. ಉಳಿದವರಿಗೆ ಅಗತ್ಯವಿರುವ ಚಿಕಿತ್ಸೆ ನೀಡಲಾಗುತ್ತಿದೆ. ತುರ್ತು ಒಪಿಡಿ ಸೇವೆ ಬಯಸುವವರು ಬರಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷé ಬೇಡ.– ಡಾ| ಜಿ.ಎಸ್. ಚಂದ್ರಶೇಖರ್,
ವೈದ್ಯಕೀಯ ನಿರ್ದೇಶಕ, ಆದರ್ಶ ಆಸ್ಪತ್ರೆ. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಕೆಲವೊಂದು ಹೊರರೋಗಿ ವಿಭಾಗಗಳು ಬೆಳಗ್ಗೆ 8.30ರಿಂದ ಅಪರಾಹ್ನ 1 ಗಂಟೆವರೆಗೆ ಸೇವೆಗೆ ಲಭ್ಯವಾಗಲಿವೆ. ರೋಗಿ ತಾತ್ಕಾಲಿಕ ಜ್ವರದ ಚಿಕಿತ್ಸಾಲಯಕ್ಕೆ ಭೇಟಿ ನೀಡಬೇಕು. ಅನಂತರ ಸಂಬಂಧಪಟ್ಟ ವಿಭಾಗಗಳಿಗೆ ಕಳುಹಿಸಲಾಗುವುದು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮುಖಗವಸು (ಮಾಸ್ಕ್) ಧರಿಸಬೇಕು.
-ಡಾ| ಅವಿನಾಶ ಶೆಟ್ಟಿ ,
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ.