Advertisement

ಕಾನೂನಿನ ದುರುಪಯೋಗ ಬೇಡ: ಮಮತಾ ರಾವ್‌

08:50 AM Aug 23, 2017 | Karthik A |

ಬೆಳ್ತಂಗಡಿ: ಕಾನೂನನ್ನು ರಕ್ಷಣೆಗಾಗಿ ಉಪಯೋಗಿಸಿ. ಆದರೆ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬೇಡಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿ ಮಮತಾ ರಾವ್‌ ಹೇಳಿದರು. ಅವರು ಮಂಗಳವಾರ ಇಲ್ಲಿನ ಲಾೖಲ ಸಿರಿ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ  ಪ್ರಜ್ಞಾ ಸಲಹಾ ಕೇಂದ್ರದ ಹೆಣ್ಣು ಮಕ್ಕಳ ಸಂರಕ್ಷಣಾ ಹಕ್ಕುಗಳನ್ನು ಬಲಪಡಿಸುವ ಯೋಜನೆ ವತಿಯಿಂದ ಹೆಣ್ಣು ಮಕ್ಕಳ ಸಂರಕ್ಷಣಾ ಹಕ್ಕುಗಳ ಕಾನೂನಿನ ಅರಿವು ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

Advertisement

ಮಹಿಳೆಗೆ ಪ್ರೀತಿ, ಸಾಂತ್ವನ ಬೇಕು ಹೊರತು ದೌರ್ಜನ್ಯ, ದಬ್ಟಾಳಿಕೆಯಲ್ಲ. ನಿರ್ಬಂಧಗಳನ್ನು ಹೇರಿ ಅವಳ ಪ್ರತಿಭೆಯ ವಿಕಾಸಕ್ಕೆ ಅಡ್ಡಿ ಮಾಡಲಾಗುತ್ತಿದೆ. ಮಹಿಳೆ ಕೇವಲ ಕುಟುಂಬ ಕಲ್ಯಾಣಕ್ಕೆ ಸೀಮಿತಳಲ್ಲ. ದೇಶ ಮುಂದುವರಿಯಲು ಪುರುಷ ಮಾತ್ರ ದುಡಿದರೆ ಸಾಲದು, ಮಹಿಳೆಗೂ ಅವಕಾಶ ದೊರೆಯಬೇಕು ಎಂದರು.

ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಪ್ರಾಂಶುಪಾಲ ಸುರೇಶ್‌ ಸಾಲ್ಯಾನ್‌, ಸಹಶಿಕ್ಷಕರ ತಾಲೂಕು ಸಂಘದ ಸಂಘಟನ ಕಾರ್ಯದರ್ಶಿ ನಾಗರಾಜ್‌ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸಿರಿ ಗ್ರಾಮೀಣಾಭಿವೃದ್ಧಿ ನಿರ್ದೇಶಕಿ ಮನೋರಮಾ ಭಟ್‌ ಭಾಗವಹಿಸಿದ್ದರು.

ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾ| ಆರೋಗ್ಯ ಇಲಾಖೆ, ಶ್ರೀ ಧ.ಗ್ರಾ. ಯೋಜನೆ ಸಹಯೋಗ ನೀಡಿದ್ದವು. ಪ್ರಜ್ಞಾ ಸಲಹಾ ಕೇಂದ್ರದ ಡೆನ್ನಿಸ್‌ ಡಿ’ಸೋಜಾ ನಿರ್ವಹಿಸಿ, ವಿಶಾಲಾಕ್ಷಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next