Advertisement
ಇದು ಕೆಲವು ತಿಂಗಳುಗಳ ಹಿಂದಿನ ಮಾತು. ಚೈನಾದಲ್ಲಿ ಆರಂಭವಾದ ಟಿಕ್‌ಟಾಕ್ ಆಗತಾನೆ ಭಾರತದಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿತ್ತು. ಅಂದು ನಾನೆಲ್ಲೋ ಸಂಬಂಧಿಕರಲ್ಲಿಗೆ ಹೋಗಿದ್ದೆ. ಆಗ ಕೆಲವರು ಟಿಕ್‌ಟಾಕ್‌ನ ಬಗೆಗೆ ಮಾತನಾಡುತ್ತಿದ್ದರು ಮತ್ತು ಒಬ್ಬರು ನನ್ನಲ್ಲಿಯೂ ಟಿಕ್‌ಟಾಕ್ ಜಾಲತಾಣದ ಬಗ್ಗೆ ಮಾತನಾಡಲು ತೊಡಗಿದರು. ವಾಟ್ಸಾಪ್, ಫೇಸ್‌ಬುಕ್ ಮುಂತಾದವುಗಳ ಸಾಮಾನ್ಯ ಬಳಕೆದಾರನಾಗಿದ್ದ ನಾನು ಅದುವರೆಗೆ ಟಿಕ್‌ಟಾಕ್ ಎಂಬ ಹೆಸರು ಕೇಳಿಯೇ ಇರಲಿಲ್ಲ. ಅಂತೆಯೇ ಅದರ ಬಗೆಗೆ ಜ್ಞಾನ ಇಲ್ಲ ಎಂಬ ಪ್ರತಿಕ್ರಿಯೆ ನನ್ನಿಂದ ಬಂತು. ಆ ದಿನ ನಾನು ಕೊಂಚ ಮಟ್ಟಿಗೆ ಅಪಹಾಸ್ಯಕ್ಕೊಳಗಾಗಿದ್ದು ಮಾತ್ರ ಸುಳ್ಳಲ್ಲ. ಇಂದಿನ ಜನರೇಶನ್‌ನಲ್ಲಿದ್ದರೂ ಟಿಕ್ ಟಾಕ್ ಬಗ್ಗೆ ಕೇಳಿಲ್ಲವೇ ಎಂಬ ಮಾತುಗಳು ಕೇಳಿ ಬಂತು. ಮತ್ತೆ ಕ್ರಮೇಣ ಟಿಕ್‌ಟಾಕ್ ಇನ್ನಷ್ಟು ಜನಪ್ರಿಯವಾಯಿತು. ಟಿಕ್‌ಟಾಕ್‌ನ ಅನಾಹುತಗಳ ಕುರಿತು ದಿನಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾಗುತ್ತಿದ್ದವು. ಕೆಲವರ ಒತ್ತಾ ಯವಿದ್ದರೂ ನಾನು ಟಿಕ್‌ಟಾಕ್‌ನ ಬಳಕೆದಾರನಾಗದೆ ಉಳಿದೆ. ಆನಂತರ ಆ ಜಾಲತಾಣವು ಒಮ್ಮೆ ನಿಷೇಧದ ಕತ್ತ ರಿಗೆ ಸಿಲುಕಿ ಪುನಃ ಬಂದಿದ್ದು ಈಗ ಇತಿಹಾಸ.
ದ್ವಿತೀಯ ಎಂ. ಎ., ಮಂಗಳಗಂಗೋತ್ರಿ, ಮಂಗಳೂರು