ಮಾಡಿದರು. ಉಪ ಚುನಾವಣೆ ಹಿನ್ನೆಲೆಯಲ್ಲಿ ನಂಜನಗೂಡು ಕ್ಷೇತ್ರದ ದೇಬೂರು, ಶಿರಮಳ್ಳಿ, ಕುರಿಹುಂಡಿ, ಚಂದ್ರವಾಡಿ, ಹಾಡ್ಯ, ಹಂಚೀಪುರ ಗ್ರಾಮಗಳಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸಪ್ರಸಾದ್ ಪರ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು. ಚುನಾವಣಾ ಬಿಸಿ ಇನ್ನೂ ಶುರುವಾಗಿಲ್ಲ. ವಿಧಾನಮಂಡಲ ಅಧಿವೇಶನ ಮುಗಿದ ಮೇಲೆ ಸಿದ್ದರಾಮಯ್ಯ ಮತ್ತವರ ಇಡೀ ಸಂಪುಟವೇ ಎರಡೂ ಕ್ಷೇತ್ರಗಳಲ್ಲಿ ಠಿಕಾಣಿ ಹೂಡುತ್ತಾರೆ. ಹಣಬಲ, ಜಾತಿಯ ವಿಷಬೀಜ
ಬಿತ್ತಿ ಚುನಾವಣೆಯಲ್ಲಿ ಗೆಲ್ಲಲು ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
Advertisement
ಬೆಂಕಿ ಮಹದೇವುಗೆ ಕಪಾಳಕ್ಕೆ ಹೊಡೆದು ಅಪಮಾನ ಮಾಡಿದ್ದ ಸಿದ್ದರಾಮಯ್ಯ ಈಗ ಅನುಕಂಪದ ಮೇಲೆ ಮತಕೇಳಲುಬರುತ್ತಿದ್ದಾರೆ. ಹಿರಿಯ ದಲಿತ ನಾಯಕರಾದ ಪ್ರಸಾದ್ ನಮ್ಮ ಜತೆ ಬಂದಿರುವಾಗ ಅವರನ್ನು ಗೆಲ್ಲಿಸದಿದ್ದರೆ, ರಾಜ್ಯದಲ್ಲಿ ಯಾವ ರೀತಿ ತಲೆ ಎತ್ತಿಕೊಂಡು ಓಡಾಡಲಿ, ಸಣ್ಣಪುಟ್ಟ ಬೇಸರಗಳನ್ನು ಬದಿಗಿಟ್ಟು ಪ್ರಸಾದ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
Related Articles
ಎಂ.ಕೃಷ್ಣ ಅವರಂಥ ನಾಯಕರು ಕಾಂಗ್ರೆಸ್ ಪಕ್ಷದ ವಿದ್ಯಮಾನಗಳಿಂದ ರೋಸಿ ಬಿಜೆಪಿ ಸೇರಿದ್ದಾರೆ.
ಅದೇ ಹಾದಿಯಲ್ಲಿ ಸಿದ್ದರಾಮಯ್ಯ ಸಂಪುಟದ ಹಲವರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ, ಇನ್ನೂ ಒಂದು ವರ್ಷ ಅಧಿಕಾರಾವಧಿ ಇರುವುದರಿಂದ ಈಗಲೇ ಪಕ್ಷ ಬಿಡಲಾಗದೆ ಸುಮ್ಮನಿದ್ದಾರೆ. ಜೆಡಿಎಸ್‌ನಿಂದಲೂ ಹಲವರು ಬಿಜೆಪಿಗೆ ಬರುವವರಿದ್ದಾರೆ. ಆದರೆ, ರಾಜಕೀಯ ಸೂಕ್ಷ್ಮತೆಗಳ ಕಾರಣಕ್ಕೆ ನಮ್ಮ ಸಂಪರ್ಕದಲ್ಲಿರುವವರ ಹೆಸರನ್ನು ಈಗಲೇ ಬಹಿರಂಗಪಡಿಸುವುದಿಲ್ಲ ಎಂದರು. ಬಿಜೆಪಿ ತೊರೆಯುವವರ ಪಟ್ಟಿ ನಮ್ಮ ಬಳಿ ಇದೆ ಎಂಬ ಗೃಹ ಸಚಿವ ಪರಮೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ ಸದಾನಂದಗೌಡ, ಗೃಹ ಸಚಿವರಾಗಿರುವ ನಿಮ್ಮ ಬಳಿಯೇ ಇಂಟಲಿಜೆನ್ಸ್
ಕೂಡ ಇದೆ. ಹಾಗಿದ್ದರೆ, ನಿಮ್ಮ ಪಟ್ಟಿಯಲ್ಲಿ ಎಸ್.ಎಂ.ಕೃಷ್ಣ, ಜಯಪ್ರಕಾಶ್ ಹೆಗ್ಡೆ, ದಿನಕರ ಶೆಟ್ಟಿ ಅವರ ಹೆಸರು ಕೂಡ ಇತ್ತಾ ಎಂದು ಪ್ರಶ್ನಿಸಿದರು.
Advertisement