Advertisement

ಕೋವಿಡ್‌ ಪರೀಕ್ಷೆಗೆ ಹಿಂಜರಿಕೆ ಬೇಡ: ಡಿಸಿ ಬೀಳಗಿ

07:23 PM Sep 25, 2020 | Suhan S |

ಹರಿಹರ: ಕೋವಿಡ್‌-19 ಪರೀಕ್ಷೆ ಮಾಡಿಸಿಕೊಳ್ಳಲು ಯಾರೊಬ್ಬರೂ ಹಿಂಜರಿಯಬಾರದು. ಸೋಂಕಿನ ಅಲ್ಪ ಲಕ್ಷಣಗಳು ಕಂಡು ಬಂದರೂ ತಪ್ಪದೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

Advertisement

ನಗರದ ಗುತ್ತೂರಿನ ಕೋವಿಡ್‌ ಕೇರ್‌ ಸೆಂಟರ್‌ಗೆ ಗುರುವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸರಕಾರದಿಂದ ಉಚಿತ ಪರೀಕ್ಷೆಯ ವ್ಯವಸ್ಥೆ ಮಾಡಲಾಗಿದೆ. ಹತ್ತಿರವಿರುವ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪಾಸಿಟಿವ್‌ ಬಂದಿದ್ದರೆ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ಅಥವಾ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯಬೇಕು. ಅಗತ್ಯವಿದ್ದರೆ ಆಸ್ಪತ್ರೆಗೂ ದಾಖಲಾಗಬೇಕು. ಮನೆಯಿಂದ ಹೊರಕ್ಕೆಬರುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದರು. ಕೋವಿಡ್‌ ಸೆಂಟರ್‌ನಲ್ಲಿನ ಸಿಬ್ಬಂದಿಯೊಂದಿಗೆ ಮಾತನಾಡಿದ ಅವರು, ರೋಗಿಗಳಿಗೆ ಬಿಸಿನೀರು, ತಾಜಾ ಆಹಾರ, ಸೂಕ್ತ ಔಷ ಧಗಳನ್ನು ನೀಡಬೇಕು ಎಂದು ಸೂಚಿಸಿದರು.

ನಂತರ ನದಿ ಪ್ರವಾಹ ನುಗ್ಗಿದ್ದ ಗಂಗಾನಗರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಪ್ರವಾಹ ಇಳಿದಿದೆ, ಈಗ ನಿಶ್ಚಿಂತೆಯಿಂದ ಇರಬಹುದು ಎಂದರು. ಸ್ಥಳೀಯರು ಮಾತನಾಡಿ, ಸಾರ್‌, ಪ್ರತಿ ಮಳೆಗಾಲದಲ್ಲಿ ಪ್ರವಾಹದಿಂದ ನಾವು ಗಂಜಿ ಕೇಂದ್ರದ ಪಾಲಾಗುತ್ತೇವೆ. ನಮಗೆ ವಸತಿ ವ್ಯವಸ್ಥೆ ಮಾಡಿ ಕೊಡಿ ಎಂದು ಕೋರಿದರು. ಜಮೀನು ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿ ವಿತರಿಸುವ ನಿವೇಶನಗಳನ್ನು ನಿಮಗೂ ದೊರೆಯುವಂತೆ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ತಹಶೀಲ್ದಾರ್‌ ರಾಮಚಂದ್ರಪ್ಪ, ಪೌರಾಯುಕ್ತೆ ಎಸ್‌. ಲಕ್ಷ್ಮೀ, ಎಇಇ ಎಸ್‌. ಎಸ್‌. ಬಿರಾದಾರ್‌, ನೌಷಾದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next