ಕಲಬುರಗಿ: ಜಿಲ್ಲೆ ಕಳೆದ ವಾರದಿಂದ ಕೊರೊನಾ ಸೋಂಕು ಇಳಿಮುಖವಾಗು ತ್ತಿದೆ. ಕಡಿಮೆ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ, ಈಗಲೇ ಸುರಕ್ಷಿತ ಎಂದು ಭಾವಿಸಿ, ಬೇಜವಾಬ್ದಾರಿ ವರ್ತನೆ ತೋರುವುದು ಸರಿಯಲ್ಲ ಎಂದು ಜಿಲ್ಲಾ ಧಿಕಾರಿ ವಾಸಿರೆಡ್ಡಿ ವಿಜಯಾ ಜೋತ್ಸ್ಯಾ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ದಿನಗಳ ಹಿಂದೆ 1500ಕ್ಕೂ ಅಧಿಕ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈಗ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಆದರೂ, ಯಾರೂ ಕೂಡ ಯಾವುದೇ ಕಾರಣಕ್ಕೂ ಮೈಮರೆಯಬಾರದು ಎಂದರು.
ಲಾಕ್‌ಡೌನ್‌ನಿಂದ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗಿವೆ. ಸದ್ಯ ಒಟ್ಟು 4,674 ಸಕ್ರಿಯ ಪ್ರಕರಣಗಳು ಇವೆ. ಜಿÇÉೆಯ ಗ್ರಾಮೀಣ ಭಾಗದಲ್ಲಿ ಪಾಸಿಟಿವ್ ಪ್ರಕರಣ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ. ಹೀಗಾಗಿ ಸೋಂಕು ನಿಯಂತ್ರಿಸಲು ಸಿಸ್ಟಮ್ಯಾಟಿಕ್ ಪ್ಲ್ಯಾನ್ ಸಿದ್ಧ ಪಡಿಸಲಾಗುತ್ತದೆ ಎಂದು ಹೇಳಿದರು. ಹಳ್ಳಿಗಳಲ್ಲಿರುವ ಸಕ್ರಿಯ ಪ್ರಕರಣಗಳನ್ನು ಪರಿಗಣಿಸಿ ವರ್ಗೀಕರಣ ಮಾಡಲಾಗಿದೆ. ಶೂನ್ಯ ಪ್ರಕರಣ ಇರುವ ಹಳ್ಳಿ, ಒಂದರಿಂದ 19 ಕೇಸ್ ಇರುವ ಹಳ್ಳಿ ಮತ್ತು 20ಕ್ಕಿಂತ ಅ ಧಿಕ ಪಾಸಿಟಿವ್ ಕೇಸ್‌ಗಳಿರುವ ಹಳ್ಳಿಗಳಾಗಿ ಗುರುತಿಸಲಾಗಿದೆ.
ಶೂನ್ಯ ಕೇಸ್ ಗ್ರಾಮಗಳಲ್ಲಿ “ಪ್ರೊಟೆಕ್ಟಿವ್ ಬ್ಯಾರಿಯರ್ಸ್’ ಅಳವಡಿಸಲಾಗಿದೆ. ಇಂತಹ ಹಳ್ಳಿಗಳಲ್ಲಿ ಒಂದೇ ಪ್ರದೇಶ, ಒಂದೇ ನಿರ್ಗಮನದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಗ್ರಾಮದಲ್ಲಿ ಕೊರೊನಾ ಲಕ್ಷಣ ಇರುವವರ ತಪಾಸಣೆ ಮಾಡಿ, ಕೋವಿಡ್ ಕೇರ್ ಸೆಂಟರ್‌ನಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ. 20ಕ್ಕಿಂತ ಹೆಚ್ಚು ಪಾಸಿಟಿವ್ ಇರುವ ಮೂರು ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿದೆ. 1ರಿಂದ 19 ಪಾಸಿಟಿವ್ ಕೇಸ್ ಇರುವ ಗ್ರಾಮಗಳಲ್ಲಿ ಹೋಮ… ಐಸೋಲೇಷನ್‌ನಲ್ಲಿ ಇರುವ ಎಲ್ಲರಿಗೂ ಬೇಕಾದ ವ್ಯವಸ್ಥೆ ಲಭ್ಯವಾಗದ ಕಾರಣ ಕೋವಿಡ್ ಕೇರ್ ಸೆಂಟರ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಮವಾರದ ವರೆಗೆ 260ಕ್ಕಿಂತ ಅಧಿ ಕ ಜನರನ್ನು ಕೋವಿಡ್ ಕೇರ್ ಸೆಂಟರ್‌ಗೆ ಕರೆತರಲಾಗಿದೆ ಎಂದರು. ಸ್ಲಂ ಏರಿಯಾ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ. ಗ್ರಾಮೀಣ ಮಟ್ಟದಲ್ಲಿ ಹೋಂ ಐಸೋಲೇಷನ್‌ನಲ್ಲಿ ಇರುವವರಿಂದ ಮನೆಯವರಿಗೂ ಸೋಂಕು ತಗುಲುವ ಭೀತಿ ಇದೆ. ಒಂದೇ ಬಾತ್‌ರೂಮ್ ಎಲ್ಲರೂ ಬಳಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಗ್ರಾಮೀಣ ಮಟ್ಟದಲ್ಲಿರುವ ಎಲ್ಲ ಸೋಂಕಿತರನ್ನು ಕೇರ್ ಸೆಂಟರ್‌ಗೆ ಕರೆತರಲಾಗುತ್ತಿದೆ ಎಂದು ವಿವರಿಸಿದರು.