Advertisement

ಪಕ್ಷದಿಂದ ಕುಟುಂಬ ಒಡೆಯಲು ಬಿಡೆ: ಮೊಮ್ಮಗನಿಗೆ ಅಜ್ಜ ಖಡಕ್‌ ಎಚ್ಚರಿಕೆ!

02:49 PM Jul 07, 2017 | Team Udayavani |

 ಮೈಸೂರು: ಸೂಟ್‌ಕೇಸ್‌ ತಂದವರಿಗೆ ಜೆಡಿಎಸ್‌ನಲ್ಲಿ ಸೀಟು ಎಂಬ ಹೇಳಿಕೆ ನೀಡಿ ಇರಿಸು ಮುರಿಸು ಉಂಟು ಮಾಡಿದ ಮೊಮ್ಮಗ ಪ್ರಜ್ವಲ್‌ಗೆ ಅಜ್ಜ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಖಡಕ್‌ ಎಚ್ಚರಿಕೆ ನೀಡಿದ್ದಾರೆ. 

Advertisement

ಪದ್ಮನಾಭನಗರದ ನಿವಾಸದಲ್ಲಿ  ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ನನಗೆ ಪ್ರಜ್ವಲ್‌ ಹೇಳಿಕೆ ತುಂಬಾ ನೋವು ಎಂದಿದೆ. ನಾನು ಎಂದಿಗೂ ಬ್ರೀಫ್ ಕೇಸ್‌ ಸಂಸ್ಕೃತಿ ತೋರಿದವನಲ್ಲ. ಚುನಾವಣೆ ವೇಳೆ ಬಡ್ಡಿಗೆ ಹಣ ತಂದು ಕೆಲಸ ಮಾಡಿದ್ದೇನೆ ಎಂದರು 

ಶಿಸ್ತು ಇಲ್ಲದೆ ಇದ್ದರೆ ಮಗ ಆದರೇನು,ಮೊಮ್ಮಗ ಆದರೇನು, ಶಿಸ್ತು ಕ್ರಮ  ಕೈಗೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಇಂಥಹದ್ದನ್ನೆಲ್ಲಾ ಹಲವು ನೋಡಿದ್ದೇನೆ ಎಂದರು. 

ಬೆಳೆಯುವ ಆಸೆ ಇದೆ ಆದ್ರೆ ಉಚಾಯಿಸಿ ಮಾತನಾಡಿದ್ರೆ ಟಿಕೇಟ್‌ ಕೊಡ್ತಾರಾ ಎಂದು ಪ್ರಶ್ನಿಸಿದರು. ಇದೇ ವೇಳೆ ಪ್ರಜ್ವಲ್‌ ಹಿಂದೆ ಮುಂದೆ ಇರುವವರಲ್ಲಿ ಕೆಲವರು ಸರಿಯಿಲ್ಲ ಅವರಿಗೆ ಬೇರೆ ಉದ್ದೇಶ ಇದ್ದಂತಿದೆ ಎಂದು ಕಿಡಿ ಕಾರಿದರು.

ಮಗನ ಹೇಳಿಕೆ ಪರಿಗಣಿಸಬೇಡಿ !

Advertisement

  ಶುಕ್ರವಾರ  ಚಾಮುಂಡಿ ಬೆಟ್ಟದಲ್ಲಿ ಪತ್ನಿ ಸಮೇತ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ  ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ ಡಿ ರೇವಣ್ಣ ‘ಮಗನ ಹೇಳಿಕೆ ಗಂಭೀರವಾಗಿ ಪರಿಗಣಿಸಬೇಡಿ ಎಂದುಹೇಳಿಕೆ ನೀಡಿದ್ದಾರೆ.’ಪ್ರಜ್ವಲ್‌ ಹೇಳಿದ್ದಾನಲ್ಲ, ಪಕ್ಷದಲ್ಲಿ ದೇವೇಗೌಡರ ಮಾತು ಮತ್ತು ಕುಮಾರಸ್ವಾಮಿ ಮಾತೇ ಅಂತಿಮ. ಅವರ ಮಾತನನ್ನು ಯಾರೂ ಮೀರುವುದಿಲ್ಲ ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಮುಂದೆ  ಜೆಡಿಎಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದರು. 

ಸೂಟ್‌ಕೇಸ್‌ ಸಂಸ್ಕೃತಿ ನಮ್ಮದಲ್ಲ

ಗುರುಮಠಕಲ್‌ನಲ್ಲಿ  ಪ್ರಜ್ವಲ್‌ ಹೇಳಿಕೆ ಕುರಿತಾಗಿ ತಿರುಗೇಟು ನೀಡಿದ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ  ಮಧು ಬಂಗಾರಪ್ಪ  ನಮ್ಮ ಪಕ್ಷದಲ್ಲಿ ಸೂಟ್‌ಕೇಸ್‌ ಸಂಸ್ಕೃತಿ ಇಲ್ಲ. ಹಾಗೇ ಇದ್ದಿದ್ದರೆ ಚುನಾವಣಾ ಫ‌ಲಿತಾಂಶ ಬೇರೆಯೇ ಇರುತ್ತಿತ್ತು. 
 
ಖಾಲಿ ಸೂಟ್‌ಕೇಸೊ ಯಾವುದೋ ಗೊತ್ತಿಲ್ಲ ಹೇಳಿಕೆ ಬಗ್ಗೆ ಪ್ರಜ್ವಲ್‌ ಬಳಿ ಸ್ಪಷ್ಟನೆ ಕೇಳಿದ್ದೇನೆ ಎಂದರು. 

ಜೆಡಿಎಸ್‌ನಲ್ಲಿ ನಿಷ್ಠೆಯಿಂದ ಕೆಲಸ ಮಾಡುವವರಿಗೆ ಹಿಂದಿನ ಸೀಟು, ಸೂಟ್‌ಕೇಸ್‌ ತಂದವರಿಗೆ ಮುಂದಿನ ಸಾಲಿನಲಿ ಕೂರಿಸುತ್ತಾರೆ’ ಎಂದು ಹೇಳುವ ಮೂಲಕ ಜೆಡಿಎಸ್‌ ಯುವ ಮುಖಂಡ, ಮಾಜಿ ಸಚಿವ ಎಚ್‌ ಡಿ ರೇವಣ್ಣ ಪುತ್ರ ಪ್ರಜ್ವಲ್‌ ಅವರು ತಮ್ಮ ಪಕ್ಷದ ವರಿಷ್ಠರ ವಿರುದ್ಧವೇ ಗುರುವಾರ ಹುಣಸೂರಿನಲ್ಲಿ ವಾಗ್ಧಾಳಿ ನಡೆಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next