Advertisement

ಸಾಧನೆಯ ಬೆನ್ನತ್ತಿ ಸಂಬಂಧ ಕಳೆದುಕೊಳ್ಳಬೇಡಿ

10:16 PM Dec 22, 2019 | mahesh |

ಮನುಷ್ಯ ತಂತ್ರಜ್ಞಾಗಳನ್ನು ಬಳಸುತ್ತಾ ಬಳಸುತ್ತಾ ತಾನು ಒಂದು ಮೆಷಿನ್‌ನಂತಾಗಲು ಆರಂಭಿಸಿದ್ದಾನೆ. ಮನುಷ್ಯನಿಗಿರಬೇಕಾದ ಭಾವನೆ, ಕಾಳಜಿ, ಪ್ರೀತಿ, ಸ್ನೇಹ ಮರೆತು ಮೆಷಿನ್‌ನಂತೆ ರ್ಯನಿರ್ವಹಿಸಲಾರಂಭಿಸಿರುವುದು ದುರಂತಕ್ಕೆ ಬರೆದ ಮುನ್ನಡಿ.

Advertisement

ಒಂದು ಕಂಪೆನಿಯಲ್ಲಿ ಉದ್ಯೋಗಿ ಪ್ರಾಕ್ಟಿಕಲ್‌ ವ್ಯಕ್ತಿ ಎಂದೇ ಹೆಸರುವಾಸಿ. ಆತ ಪ್ರತಿಯೊಂದಕ್ಕೂ ಕಾರಣ ಬಯಸುತ್ತಿದ್ದ. ಮಾತನಾಡಬೇಕಿದ್ದರೆ ಅದಕ್ಕೊಂದು ಕಾರಣ ಬೇಕಿತ್ತು. ತನ್ನ ಜತೆಗಿದ್ದವ ಭಾವನೆ ಅರ್ಥವಾಗದಷ್ಟೂ ಆತ ಪ್ರಾಕ್ಟಿಕಲ್‌ ಮನುಷ್ಯ. ಆತನಿಗೂ ಮೆಷಿನೂ ಯಾವುದೇ ವ್ಯತ್ಯಾಸವಿರಲಿಲ್ಲ. ಕಂಪೆನಿಯಿಂದ ಆತನಿಗೆ ಉತ್ತಮ ಕೆಲಸಗಾರ ಎಂಬ ಬಿರುದೇನೋ ಸಿಕ್ಕಿತ್ತು. ಆದರೆ ಆತನೊಂದಿಗಿದ್ದ ವ್ಯಕ್ತಿಗಳಲ್ಲಿ ಆತನ ಕುರಿತು ಯಾವುದೇ ಉತ್ತಮ ಭಾವನೆ ಇರಲಿಲ್ಲ. ಒಂದು ದಿನ ಆಫೀಸಿಗೆ ಆತನ ಸಹೋದ್ಯೋಗಿಯ ಮಗು ಬಂದಿತ್ತು. ಅದು ಆಫೀಸಿನಲ್ಲೆಲ್ಲ ಓಡಾಡಿ ತನ್ನ ತುಂಟಾಟದಿಂದ ಅಲ್ಲಿದ್ದವರ ಮನ ಕದ್ದಿತ್ತು. ಆದರೆ ಈ ಪ್ರಾಕ್ಟಿಕಲ್‌ ಮನುಷ್ಯನಿಗೆ ಮಾತ್ರ ಮಗು ಜತೆ ಆಟವಾಡುವುದು ಎಂದರೆ ಸಮಯ ಹಾಳು ಎಂದುಕೊಂಡಿದ್ದ. ಆತನಿಗೆ ಮಗುವಿನ ಆಟ ಕಿರಿಕಿರಿ ಅನಿಸುತ್ತಿತ್ತು ಆರಂಭದಲ್ಲಿ. ಆದರೆ ಮಗುವಿನ ಮುಗ್ಧತೆ, ಆಟ ನಿಧಾನವಾಗಿ ಈತನ ಜೀವನ ಕ್ರಮವನ್ನು ಪ್ರಶ್ನಿಸುವಂತಿತ್ತು. ಸಣ್ಣ ಸಣ್ಣ ವಿಷಯದಲ್ಲೂ ಖುಷಿ ಪಡುತ್ತಿದ್ದ ರೀತಿ, ಆಟದಲ್ಲಿ ತಲ್ಲೀನತೆ, ಮಗು ತಾನು ಖುರ್ಚಿಯಲ್ಲಿ ಕುಳಿತುಕೊಳ್ಳಲು ಮಾಡುತ್ತಿದ್ದ ಪ್ರಯತ್ನ ಪ್ರಾಕ್ಟಿಕಲ್‌ ಮನುಷ್ಯನಿಗೆ ತಾನೇನೂ ಬದುಕಿನಲ್ಲಿ ಕಳೆದುಕೊಳ್ಳುತ್ತಿದ್ದೇನೆ ಎಂಬ ಭಾವನೆ ಮೂಡಿಸಿತ್ತು.

ಭಾವನೆಗಳನ್ನು ಹಂಚಿ
ಖುಷಿ , ದುಃಖಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಆರಂಭಿಸಿ. ಇದರಿಂದ ಜತೆಗಿದ್ದವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇನ್ನೊಬ್ಬರ ಭಾವನೆಗಳಿಗೂ ಕಿವಿಯಾಗಿ. ಹಾಗಾದಾಗ ಮಾತ್ರ ಜೀವನ ಸುಂದರ. ಜೀವನ ಖುಷಿಯಾಗಿರಬೇಕಿದ್ದರೆ ಸಣ್ಣ ಸಣ್ಣ ಕೆಲಸದಲ್ಲೂ ಖುಷಿ ಪಡಲು ಆರಂಭಿಸಿ. ಒಂದೇ ಪ್ರಯತ್ನದಲ್ಲಿ ಗೆಲ್ಲಬೇಕೆಂಬ ಮನಸ್ಸು ಬೇಡ. ಜೀವನದಲ್ಲಿ ಯಶಸ್ಸು ಪಡೆದವರಾರೂ ಒಂದೇ ಪ್ರಯತ್ನದಲ್ಲಿ ಗೆದ್ದವರಲ್ಲ. ಜೀವನದಲ್ಲಿ ಸಾಧಿಬೇಕು. ಅದಕ್ಕಾಗಿ ಎಲ್ಲವನ್ನೂ ತ್ಯಜಿಸಬೇಕು ಎನ್ನುವ ಮನಸ್ಥಿತಿಯಿಂದ ಹೊರಬರಬೇಕು. ಜತೆಗಿದ್ದವರ ಭಾವನೆಗಳಿಗೆ ಬೆಲೆ ನೀಡದ ಕೆಲಸದಲ್ಲಿ ಗೆದ್ದರೂ ವ್ಯರ್ಥ. ಸಾಧಿಸಬೇಕೆನ್ನುವ ಭರದಲ್ಲಿ ಮನುಷ್ಯ ಸಂಬಂಧಗಳನ್ನು ಕಳದುಕೊಂಡರೆ ಸಾಧಿಸಿದ ನಂತರ ಆ ಖುಷಿ ಹಂಚಿಕೊಳ್ಳಲೂ ಜತೆಗೆ ಯಾರೂ ಇರುವುದಿಲ್ಲ. ಸಾಧನೆಯ ಜತೆಗೆ ಮನುಷ್ಯ ಸಂಂಬಂಧಗಳಿಗೂ ಬೆಲೆ ನೀಡಿದರೆ ಸಾಧನೆಗೂ ಅರ್ಥ ಬರುತ್ತದೆ.

ಭಾವನೆಯಿಲ್ಲದ ಮನುಷ್ಯ ಮೆಷಿನ್‌ನಂತೆ
ಮೆಷಿನ್‌ಗಳು ಎಲ್ಲ ಕೆಲಸಗಳನ್ನೂ ಮಾಡಬಹುದು. ಆದರೆ ಅದಕ್ಕೆ ಭಾವನೆಗಳೇ ಇಲ್ಲ. ಇನ್ನೊಬ್ಬರ ನೋವು, ಕಷ್ಟ ಅರ್ಥವಾಗುವುದಿಲ್ಲ. ಭಾವನೆಗಳಿಲ್ಲದ ಮನುಷ್ಯನೂ ಹಾಗೇ. ಇದ್ದೂ ಇಲ್ಲದಂತೆ. ಖುಷಿ, ದುಃಖ ಜೀವನದಲ್ಲಿ ಇಲ್ಲದಿದ್ದರೆ ಆ ಜೀವನ ವ್ಯರ್ಥವಾದಂತೆ.

- ರಂಜಿನಿ ಮಿತ್ತಡ್ಕ

Advertisement
Advertisement

Udayavani is now on Telegram. Click here to join our channel and stay updated with the latest news.

Next