Advertisement

ಹೂಡಿಕೆಗೆ ಹಿಂಜರಿಯದಿರಿ: ನಿರ್ಮಲಾ

09:55 AM Oct 15, 2019 | mahesh |

ಹೊಸದಿಲ್ಲಿ: ಇಂಧನ ಕ್ಷೇತ್ರದಲ್ಲಿನ ಅದರಲ್ಲೂ ವಿಶೇಷವಾಗಿ ಪುನರ್‌ ನವೀಕರಿ ಸಬಲ್ಲ ಇಂಧನ ಕ್ಷೇತ್ರದಲ್ಲಿನ ಗುತ್ತಿಗೆ ಮಾದರಿಯ ಒಪ್ಪಂದಗಳನ್ನು ಭಾರತ ಸರಕಾರ ಗೌರವಿಸುತ್ತದೆ. ಹಾಗಾಗಿ, ಈ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವವರು ಹಿಂಜರಿಯಬೇಕಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ಸೆರಾ ವೀಕ್‌ನ ಇಂಡಿಯಾ ಎನರ್ಜಿ ಫೋರಂ ಸಮ್ಮೇಳನದಲ್ಲಿ ಮಾತನಾಡಿದ ಅವರು, “”2022ರ ಹೊತ್ತಿಗೆ ಭಾರತವನ್ನು 175 ಗಿಗಾ ವ್ಯಾಟ್‌ನಷ್ಟು ವಿದ್ಯುತ್‌ ಉತ್ಪಾದಿಸುವ ರಾಷ್ಟ್ರವನ್ನಾಗಿಸುವ ಗುರಿಯನ್ನು ಸರಕಾರ ಹೊಂದಿದೆ. ಮುಂದಿನ ಮೂರು ವರ್ಷಗಳಲ್ಲಿ ಭಾರತೀಯ ಇಂಧನ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೂಡಿಕೆ ನಿರೀಕ್ಷಿಸಲಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ. ಇತ್ತೀಚೆಗೆ, ಆಂಧ್ರಪ್ರದೇಶದಲ್ಲಿ ಪುನರ್‌ನವೀಕರಿಸಬಹುದಾದ ಇಂಧನ ಕ್ಷೇತ್ರ ದಲ್ಲಿ ಹೂಡಿಕೆ ಮಾಡಿರುವ ಕೆಲವು ಖಾಸಗಿ ಸಂಸ್ಥೆಗಳಿಗೆ ವಿದ್ಯುತ್‌ ಶುಲ್ಕ ವಿಚಾರ ದಲ್ಲಿ ಸರಕಾರ ಹಾಗೂ ಆ ಸಂಸ್ಥೆಗಳ ನಡುವೆ ತಿಕ್ಕಾಟ ಏರ್ಪಟ್ಟಿತ್ತು. ಇದರಿಂದ ಭಾರತೀಯ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಕಂಪನಿಗಳು ಹಿಂದೇಟು ಹಾಕಬಹುದು ಎಂಬ ಭೀತಿ ಆವರಿಸಿತ್ತು. ಈ ಹಿನ್ನೆಲೆಯಲ್ಲಿ, ನಿರ್ಮಲಾ ಅಭಯ ಹಸ್ತ ನೀಡಿದ್ದಾರೆ.

ದೊಡ್ಡ ಮೊತ್ತದ ಸಾಲ ವಿಲೇವಾರಿ: ಅ.1ರಿಂದ 9ರವರೆಗೆ ವಿವಿಧ ಬ್ಯಾಂಕುಗಳು ನಡೆಸಿದ ಸಾಲ ಮೇಳದಲ್ಲಿ 81,781 ಕೋಟಿ ರೂ. ಮೊತ್ತದ ಸಾಲ ವಿತರಿಸ ಲಾಗಿದೆ ಎಂದು ವಿತ್ತ ಕಾರ್ಯದರ್ಶಿ ರಾಜೀವ್‌ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next