Advertisement

ಸಚಿವಾಲಯ, ಇಲಾಖೆಗಳಲ್ಲಿ ನಿಮ್ಮ ಸಂಬಂಧಿಗಳ ನೇಮಕ ಬೇಡ; ಸಚಿವರಿಗೆ ಮೋದಿ

10:12 AM Aug 30, 2019 | Team Udayavani |

ನವದೆಹಲಿ:ಸಚಿವಾಲಯಗಳಲ್ಲಿ ಅಥವಾ ಸಂಬಂಧಿತ ಇಲಾಖೆಗಳಲ್ಲಿ ನಿಮ್ಮ ಆಪ್ತ ಸಂಬಂಧಿಗಳನ್ನು ನೇಮಕ ಮಾಡಿಕೊಳ್ಳಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನಡೆದ ಸಚಿವರ ಸಭೆಯಲ್ಲಿ ಸೂಚನೆ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವರ ಸಭೆಯಲ್ಲಿ ಮಾತನಾಡಿದ್ದು, ನಾವು ಅನಾವಶ್ಯಕವಾಗಿ ಮಾಧ್ಯಮಗಳು ಹಾಗೂ ಸಾರ್ವಜನಿಕವಾಗಿ ಮುಜುಗರಕ್ಕೀಡಾಗಬಾರದು. ಈ ಹಿನ್ನೆಲೆಯಲ್ಲಿ ಅತೀ ಹತ್ತಿರದ ಸಂಬಂಧಿಗಳನ್ನು ಸಚಿವಾಲಯದ ಸಲಹೆಗಾರರನ್ನಾಗಿ ಅಥವಾ ಇತರ ಸ್ಥಾನಗಳಿಗೆ ನೇಮಿಸಿಕೊಳ್ಳಬೇಡಿ ಎಂದು ಸೂಚಿಸಿದ್ದಾರೆಂದು ಮೂಲಗಳು ಹೇಳಿವೆ.

ನಮ್ಮ ಆಡಳಿತ ಕಾರ್ಯವೈಖರಿ ವೇಗವಾಗಲು ಮತ್ತು ಹೆಚ್ಚು ಅಭಿವೃದ್ಧಿ ಮೂಲಕ ಕೇಂದ್ರ ಬಿಂದುವಾಗುವತ್ತ ಗಮನ ಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಮತ್ತು ರಾಜ್ಯ ಖಾತೆ ಸಚಿವರ ನಡುವಿನ ಸಂಬಂಧ ಹೆಚ್ಚು ಉತ್ತಮವಾಗಬೇಕಾಗಿದೆ ಎಂದು ಮೋದಿ ಸಲಹೆ ನೀಡಿದ್ದಾರೆ.

ನಿಮ್ಮ, ನಿಮ್ಮ ಸಚಿವಾಲಯದ ಉನ್ನತ ಮಟ್ಟದ ಅಧಿಕಾರಿಗಳ ಜತೆ ಹೆಚ್ಚು, ಹೆಚ್ಚು ಸಂವಹನ ನಡೆಸುತ್ತಿರಬೇಕು. ಅದೇ ರೀತಿ ಮೇಲು ಹಂತದಿಂದ ಕೆಳಹಂತದವರೆಗೂ ಸಚಿವಾಲಯದ ಅಧಿಕಾರಿಗಳ ನಡುವಿನ ಸಂವಹನ ಉತ್ತಮಗೊಳ್ಳಬೇಕಾಗಿದೆ. ನಿರ್ದೇಶಕರು, ಸಹಾಯಕ ಕಾರ್ಯದರ್ಶಿಗಳು ಕೂಡಾ ನಿಮ್ಮ ತಂಡದ ಭಾಗ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next