Advertisement

ಪುಣೆ ಬಂಟರ ಭವನದದಲ್ಲಿ ದಾನಿಗಳಿಗೆ ಗೌರವಾರ್ಪಣೆ

04:31 PM Apr 10, 2018 | |

ಪುಣೆ: ಪುಣೆಯಲ್ಲಿನ ಬಂಟ ಸಮಾಜ ಬಾಂಧವರು ಸಂಘಟನೆಯ ಮೂಲಕ ಸಂತೋಷ್‌ ಶೆಟ್ಟಿ ಅವರ ಸಾರಥ್ಯದಲ್ಲಿ ಸುಸಜ್ಜಿತವಾದ ಸಮಾಜದ ಭವನವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿರುವುದು ಬಂಟ ಸಮಾಜ ಹೆಮ್ಮೆ ಪಡುವ ವಿಚಾರವಾಗಿದೆ. ಭವನ ನಿರ್ಮಾಣ ಮಾಡಿಯೇ ಸಿದ್ಧ  ಎಂದು ತೋರಿಸಿಕೊಟ್ಟ ಶ್ರೇಷ್ಠ ನಾಯಕತ್ವದ  ಸಂತೋಷ್‌ ಶೆಟ್ಟಿಯವರ ಅವಿರತ ಶ್ರಮ, ಅವರ ಸಿದ್ಧಿ ಸಾಧನೆಗಳು ಇಲ್ಲಿ ಗಮನಾರ್ಹ. ಸಮಾಜದ ಮೇಲಿನ ಅವರ ಪ್ರೀತಿಯ ದ್ಯೋತಕವಾಗಿ ಈ ಭವನ ನಿರ್ಮಾಣಗೊಂಡು ಸಮಾಜಕ್ಕೋಪ್ಪಿಸುವ ಕಾರ್ಯ ವನ್ನು ದೇವರು ಅವರಿಂದ ಮಾಡಿಸಿದ್ದಾನೆ. ಸಮಾಜದ ಚಾವಡಿಯೆನಿಸಿರುವ ಈ ಭವನ ಬಂಟ ಸಮಾಜವನ್ನು ಒಗ್ಗಟ್ಟಾಗಿಸಿ ಕೊಂಡು ಸಂಘಟನೆಯನ್ನು ಬಲಪಡಿಸುವ ಕಾರ್ಯ ಆಗಬೇಕಾಗಿದೆ.  ನಮ್ಮ ಬಂಟ ಸಂಪ್ರದಾಯಗಳು, ಸಂಸ್ಕೃತಿ, ಸಂಸ್ಕಾರಗಳು, ಆಚಾರ-ವಿಚಾರಗಳನ್ನು, ಧಾರ್ಮಿಕ ನಂಬಿಕೆಗಳನ್ನು ಎಲ್ಲಾ  ಬಂಟರೂ ಅರಿಯಬೇಕಾಗಿದೆ ಎಂದು ಭಾರ್ಗವ ಬೀಡು ಬಾಕೂìರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರು ಆಶೀರ್ವಚನ ನೀಡಿದರು.

Advertisement

ಅವರು ಎ. 7 ರಂದು ಪುಣೆ ಬಂಟರ ಭವನದ ಉದ್ಘಾಟನ  ಸಮಾರಂಭದ ದಾನಿಗಳ ಸಮ್ಮಾನ ಸಭೆಯಲ್ಲಿ ಲತಾ ಸುಧೀರ್‌ ಶೆಟ್ಟಿ ವೇದಿಕೆಯಲ್ಲಿ ಆಶೀರ್ವಚನ ನೀಡಿ, ಅವರು ಮಾತನಾಡಿ ಭಗವಂತನಿಗೆ ಯಾವುದೇ ಆಡಂಬರದ ಸೇವೆಯ ಅಗತ್ಯವಿಲ್ಲ. ಭಕ್ತಿಯಿಂದ ನಾವು ಮಾಡಿದ ಕಿಂಚಿತ್‌ ಸೇವೆಯಿಂದ ಭಗವಂತ ತೃಪ್ತನಾಗುತ್ತಾನೆ. ಆದರೆ ಇಂದು ನಾವು ಯಾರದೂ ವಿಚಾರಗಳಿಗೆ ನಮ್ಮತನವನ್ನು ಬಲಿಕೊಟ್ಟು ಮೂಢನಂಬಿಕೆಗಳಿಗೆ ಬಲಿಯಾಗುತ್ತಾ ಆಡಂಬರದ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದೇವೆ. ದೈವ ಸ್ಥಾನಗಳಿಗೆ ಬ್ರಹ್ಮ ಕಲಶಗಳನ್ನು ಮಾಡುವ ಸಂಪ್ರದಾಯ ನಮ್ಮದಲ್ಲ. ಆದರೆ ಇಂದು ಬ್ರಹ್ಮಕಲಶವನ್ನು ದೈವಸ್ಥಾನಗಳಿಗೆ ಮಾಡುತ್ತಿದ್ದೇವೆ.  ನಾವು ಹಿರಿಯರು  ಪಾಲಿಸಿಕೊಂಡುಬಂದ  ನಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ, ದೈವ ದೇವರ ಮೂಲ ನಂಬಿಕೆಗಳನ್ನು ಪಾಲಿಸಬೇಕೇ ಹೊರತು ಮೂಢನಂಬಿಕೆಗಳ ದಾಸರಾಗಬಾರದು. ಬಂಟ ಸಮಾಜವನ್ನು ಒಗ್ಗಟಾಗಿಸುವ ಮೂಲ ಉದ್ದೇಶ ನಮ್ಮದಾಗಬೇಕು ಹಾಗೂ ಸಮಾಜದಲ್ಲಿರುವ ಕಷ್ಟದಲ್ಲಿರುವವರ ಕಣ್ಣೊರೆಸುವ ಕೆಲಸ ಆಗಬೇಕಾಗಿದೆ ಎಂದರು.

ಅತಿಥಿಯಾಗಿ ಪಾಲ್ಗೊಂಡ ಎಸ್‌ಎಂ ಶೆಟ್ಟಿ ಶಿಕ್ಷಣ ಸಂಸ್ಥೆಗಳ ಉಪ ಕಾರ್ಯಾಧ್ಯಕ್ಷ ನಿತ್ಯಾನಂದ ಹೆಗ್ಡೆ ಇವರು ಮಾತನಾಡಿ, ಸಂತೋಷ್‌ ಶೆಟ್ಟಿಯವರ  ನಾಯಕತ್ವದ ಗುಣದಿಂದ ಪುಣೆಯಲ್ಲಿ ಸಮಾಜದ ಭವನ ನಿರ್ಮಾಣಗೊಂಡು ವಿಶ್ವದ ಬಂಟರ ಸಾಲಿನಲ್ಲಿ ಪುಣೆ ಬಂಟರ ಸಂಘ ಅಗ್ರಸ್ಥಾನದಲ್ಲಿ ಗುರುತಿಸಿಕೊಳ್ಳಲಿದೆ ಎಂದರು.

ಬೆಳಗಾವಿ ಬಂಟರ ಸಂಘದ ಮಾಜಿ ಅಧ್ಯಕ್ಷ  ವಿಠಲ್‌ ಹೆಗ್ಡೆ ಇವರು ಮಾತನಾಡಿ, ಪೂರ್ವಜನ್ಮದ ಪುಣ್ಯವೆಂಬಂತೆ ಸಂತೋಷ್‌ ಶೆಟ್ಟಿಯವರ ಸಾರಥ್ಯದಲ್ಲಿ ಸಂಘದ ಪದಾಧಿಕಾರಿಗಳ, ಸಮಾಜ ಬಾಂಧವರೆಲ್ಲರ ಸಹಕಾರದೊಂದಿಗೆ ಉತ್ತಮವಾದ ಸುವ್ಯವಸ್ಥಿತ ಭವನವನ್ನು ನಿರ್ಮಿಸುವ ಕಾರ್ಯ ಮಾಡಿರುವುದು ಅಭಿನಂದನೀಯ. ಈ ಮಹತ್ಕಾರ್ಯವನ್ನು ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ ಎಂದು ನುಡಿದರು.

ಮುಂಬಯಿ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌ ಹೆಗ್ಡೆ, ಸಾಯಿ ಪ್ಯಾಲೇಸ್‌ ಗ್ರೂಪ್‌ ಆಪ್‌ ಹೊಟೇಲ್ಸ… ನ  ಸಿಎಂಡಿ  ರವಿ ಎಸ್‌. ಶೆಟ್ಟಿ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲ್‌, ಮಹಾರಾಜ ಇನಾ#† ಇದರ  ಸಿಎಂಡಿ  ಚಂದ್ರಹಾಸ್‌ ಕೆ. ಶೆಟ್ಟಿ, ಎನ್‌ಬಿಎಸ್‌  ಕಂಪೆನಿಯ  ಸಿಎ  ಎನ್‌. ಬಿ. ಶೆಟ್ಟಿ, ಕೃಷ್ಣಾ ಪ್ಯಾಲೇಸ್‌ ಮುಂಬಯಿ ಇದರ  ಸಿಎಂಡಿ ಕೃಷ್ಣ  ವೈ ಶೆಟ್ಟಿ, ಯುಎಇ ಬಂಟ್ಸ್‌ ನ  ಅಧ್ಯಕ್ಷ ಸರ್ವೋತ್ತಮ್‌ ಶೆಟ್ಟಿ, ಈಸ್ಟ್‌  ವೆಲ್‌ ಅಬೊÕàಬ್ಸ…ì ಪ್ರೈವೇಟ್‌ ಲಿಮಿಟೆಡ್‌ ಇದರ ಸಿಎಂಡಿ ಪ್ರಭಾಕರ ಶೆಟ್ಟಿ, ಹೊಟೇಲ್‌ ಗುರುದೇವ್‌ ಕಲ್ಯಾಣ್‌ನ ಭಾಸ್ಕರ ಶೆಟ್ಟಿ, ನವಿಮುಂಬಯಿ ಮಾಜಿ ನಗರ ಸೇವಕ ಸಂತೋಷ್‌ ಡಿ. ಶೆಟ್ಟಿ, ಪೆನಿನ್ಸುಲಾ ಗ್ರಾÂಂಡ್‌ ಹೊಟೇಲ್‌ ಸಿಎಂಡಿ  ಕರುಣಾಕರ ಶೆಟ್ಟಿ, ಅಜಂತಾ ಕ್ಯಾಟರರ್ಸ್‌ನ ಜಯರಾಮ್‌ ಶೆಟ್ಟಿ, ಹೊಟೇಲ್‌ ಸುಪ್ರೀಮ್‌ ಹೆರಿಟೇಜ್‌ ಸಿಎಂಡಿ ಶಿವರಾಮ ಶೆಟ್ಟಿ ಮತ್ತು  ಮುಂಬಯಿ ಉದ್ಯಮಿ ಸುರೇಶ್‌ ಶೆಟ್ಟಿ ಇವರು ನೂತನ ಭವನದ ನಿರ್ಮಾಣಕ್ಕೆ ಸಂಘದ ಅಭಿವೃದ್ಧಿಗೆ ಶುಭ ಹಾರೈಸಿದರು.

Advertisement

ಸಂಘದ  ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಗೌರವ ಕೋಶಾಧಿಕಾರಿ ವೈ. ಚಂದ್ರಹಾಸ ಶೆಟ್ಟಿ, ಉಪಾಧ್ಯಕ್ಷರಾದ ರಾಮಕೃಷ್ಣ ಶೆಟ್ಟಿ, ಮಾಧವ ಆರ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಸಂಧ್ಯಾ ವಿ. ಶೆಟ್ಟಿ  ಉಪಸ್ಥಿತರಿದ್ದರು. ವಿಶ್ವ ಸಂತೋಷ ಭಾರತಿ ಶ್ರೀಪಾದರನ್ನು ಅಧ್ಯಕ್ಷ ಸಂತೋಷ್‌ ಶೆಟ್ಟಿ ಹಾಗೂ ದಿವ್ಯಾ ಎಸ್‌. ಶೆಟ್ಟಿ    ಗೌರವಿಸಿದರು. ಪಿಂಪ್ರಿ – ಚಿಂಚಾÌಡ್‌  ಬಂಟರ ಸಂಘದ ವತಿಯಿಂದ  ಸಂತೋಷ್‌ ಶೆಟ್ಟಿ ದಂಪತಿಗಳನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮವನ್ನು ಮುಂಬಯಿಯ  ಕಲಾಸಂಘಟಕ ಕರ್ನೂರು ಮೋಹನ್‌ ರೈ  ಹಾಗೂ  ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಸಂತೋಷ್‌ ಶೆಟ್ಟಿ ಸ್ವಾಗತಿಸಿ ಉಪಾಧ್ಯಕ್ಷ ರಾಮಕೃಷ್ಣ ಶೆಟ್ಟಿ ವಂದಿಸಿದರು. 

ಸಂಸ್ಕೃತಿ ಬೆಳೆಸುವಲ್ಲಿ ಸಹಕಾರಿಯಾಗಲಿ: ಆಸ್ರಣ್ಣ 
ಶ್ರೀ  ಕ್ಷೇತ್ರ ಕಟೀಲಿನ ಅನಂತಪದ್ಮನಾಭ ಆಸ್ರಣ್ಣರು ಆಶೀರ್ವಚನ ನೀಡುತ್ತಾ, ಪುಣೆ ಯಲ್ಲಿ ಬಂಟ ಸಮಾಜ ಬಾಂಧವರ ಸಾಂಸ್ಕೃತಿಕ ಭವನವೊಂದು ನಿರ್ಮಾಣಗೊಂಡು ಸಮಾಜಕ್ಕೊಪ್ಪಿಸುವ ಕಾರ್ಯ ನಿಜವಾಗಿಯೂ ಆ ಭಗವಂತನಿಗೆ ತೃಪ್ತಿದಾಯಕ ಕಾರ್ಯ ವಾಗಿದೆ. ನಿಸ್ವಾರ್ಥ ಭಾವದಿಂದ ಅಧ್ಯಕ್ಷನ ಜವಾಬ್ದಾರಿಯಲ್ಲಿ ಕುಳಿತು ಇಡೀ ಸಮಾಜದ ಉದ್ಧಾರದ ಕನಸನ್ನು ಹೊತ್ತು ತಪಸ್ಸನ್ನು ಮಾಡಿ ಹಿರಿ ಕಿರಿಯರೆಲ್ಲರ ಸಲಹೆ ಸಹಕಾರಗಳನ್ನು ಪಡೆದುಕೊಂಡು ಸಾಮಾನ್ಯ ಕಾರ್ಯಕರ್ತನಂತೆ ದುಡಿದು ಸಂತೋಷ್‌ ಶೆಟ್ಟಿಯವರು  ಮಾಡಿದ ಕಾರ್ಯ ಅಭಿನಂದನೀಯ. ಅಂತೆಯೇ ದೇವರ ಬಿಂಬಗಳೊಂದಿಗೆ ಗುರುಗಳ ಸ್ಮರಣೆಯನ್ನು ಹಾಗೂ ಸಮಾಜದ ಅಭ್ಯುದಯದ ಸಾಧಕರನ್ನೂ ಇಲ್ಲಿ ಅನಾವರಣಗೊಳಿಸಿ ಉತ್ತಮ ರೀತಿಯಿಂದ ನಿರ್ಮಿಸಿದ ಈ ಭವನದ ನಿರ್ಮಾಣ ಭವಿಷ್ಯದಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಹಕಾರಿಯಾಗಲಿ ಎಂದರು.

ನನ್ನೊಬ್ಬನಿಂದ ಈ ಕಾರ್ಯ ನಡೆದಿಲ್ಲ: ಸಂತೋಷ್‌ ಶೆಟ್ಟಿ 
ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ  ಅವರು ಮಾತನಾಡಿ,  ಕೇವಲ ನನ್ನೊಬ್ಬನಿಂದ ಈ ಕಾರ್ಯ ನಡೆದಿಲ್ಲ. ದಿ| ಗುಂಡೂರಾಜ್‌ ಶೆಟ್ಟಿ, ಜಗನ್ನಾಥ ಶೆಟ್ಟಿಯವರುಗಳ ಕೊಡುಗೆಯೊಂದಿಗೆ  ಈ ಭವನದ ಸಂಪೂರ್ಣ ಶ್ರೇಯವನ್ನು ಸಂಘದ ಪದಾಧಿಕಾರಿಗಳಿಗೆ, ಹಿರಿಯರಿಗೆ, ಮಾತಾಪಿತರ  ಪಾದಗಳಿಗೆ, ಮಹಾದಾನಿಗಳ ಚರಣಾರವಿಂದಕ್ಕೆ ಸಮರ್ಪಿಸು ತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ವಿಲ್ಲದಿದ್ದರೆ ನಾನು ಏನೂ ಮಾಡಲು ಸಾಧ್ಯವಿರುತ್ತಿರಲಿಲ್ಲ. ಅದರಲ್ಲೂ ಮುಖ್ಯವಾಗಿ ಮುಂಬಯಿ ನಗರದ ಮಹಾದಾನಿಗಳು ಪುಣೆಯ ಬಂಟರಿಗೆ ಭವನಕ್ಕೆ ಸುಮಾರು 7 ಕೋ. ರೂ. ದೇಣಿಗೆ ನೀಡಿರುವುದು ಅವರ ಸಮಾಜದ ಮೇಲಿನ ಅವರ ಪ್ರೀತಿಗೆ ಸಾಕ್ಷಿಯಾಗಿದ್ದು ನನಗೆ ದೊಡ್ಡ ಶಕ್ತಿಯನ್ನು ನೀಡಿದೆ ಎಂದರು.

ಈ ಸುಂದರವಾದ ಭವನ ನಿರ್ಮಿಸಿ ಸಮಾಜಕ್ಕೊಪ್ಪಿಸಿ ಮುಂದೆ ಸಮಾಜದ ಉದ್ಧಾರ ಬಯಸಿ ಜವಾಬ್ದಾರಿಯಿಂದ ಸಮಾಜ ಸೇವೆ ಮಾಡುವಂತಾದರೆ ಸಂಘದ ಉದ್ದೇಶ ಈಡೇರಿದಂತೆ. ಈ ಭವನ ನಿರ್ಮಿಸಲು ಸಂತೋಷ ಶೆಟ್ಟಿ ಹಾಗೂ ಪದಾಧಿಕಾರಿಗಳ ಶ್ರಮ, ದಾನಿಗಳ, ಮಾಜಿ ಅಧ್ಯಕ್ಷರ ಪ್ರೋತ್ಸಾಹ ಅಗಣಿತವಾಗಿದೆ. ಭವಿಷ್ಯದಲ್ಲಿ ಯುವ ಪೀಳಿಗೆಯಲ್ಲಿ ನಮ್ಮ ಭಾಷೆ, ಸಂಸ್ಕಾರವನ್ನು ಬೆಳೆಸುವಲ್ಲಿ ಇದು ಪೂರಕವಾಗಲಿ 
ಪದ್ಮನಾಭ ಎಸ್‌. ಪಯ್ಯಡೆ (ಅಧ್ಯಕ್ಷರು:  ಬಂಟರ ಸಂಘ ಮುಂಬಯಿ).

ಸಮಾಜದ ಎಲ್ಲರನ್ನು ಸಂಪರ್ಕಿಸಿ ದೇಣಿಗೆ ಸಂಗ್ರಹಿಸಿ ಈ ಭವನವನ್ನು ಅತ್ಯುತ್ತಮವಾಗಿ ನಿರ್ಮಿಸಿದ್ದೀರಿ. ಯಾವುದೇ ಭೇದ ಮಾಡದೆ ಸಮಾಜದ ಅತಿ ಬಡವನಿಗೂ ಇದರ ಸೇವೆ ಸಿಗುವಂತಾಗಬೇಕು 
 ಸುಧಾಕರ ಹೆಗ್ಡೆ  (ಸಿಎಂಡಿ : ತುಂಗಾ ಗ್ರೂಪ್‌ ಆಫ್  ಹೊಟೇಲ್ಸ್‌).

ಸಮಾಜದ ಭವನ ನಿರ್ಮಿಸಿ ಸಮಾಜದ ಉತ್ತಮ ನಾಯಕನಾಗಿ ಸಂತೋಷ್‌ ಶೆಟ್ಟಿಯವರು ಹೊರಹೊಮ್ಮಿ¨ªಾರೆ. ಇಲ್ಲಿ ಮಹೋನ್ನತ ಕೊಡುಗೆ ನೀಡಿದ ಜಗನ್ನಾಥ ಶೆಟ್ಟಿಯಂತಹ ದಾನಶೂರ ಕರ್ಣನಂತಹ ವ್ಯಕ್ತಿ ಇನ್ನೆಲ್ಲೂ ಸಿಗಲು ಸಾಧ್ಯವಿಲ್ಲ. ಇಲ್ಲಿ ದಾನ ನೀಡಿದ ದಾನಿಗಳನ್ನು ಮರೆಯದೆ ಗೌರವವನ್ನು ನೀಡುವ ಕೆಲಸವಾಗಲಿ 
 ಬಿ. ವಿವೇಕ್‌  ಶೆಟ್ಟಿ 
(ಸಿಎಂಡಿ : ವಿಸ್ವಾತ್‌ ಕೆಮಿಕಲ್ಸ ಲಿಮಿಟೆಡ್‌ ಮುಂಬಯಿ).

ಇಂದು ಪುಣೆ ಬಂಟರ ಹೃದಯದಲ್ಲಿ  ಸಂತೋಷದ, ಸಮಾಜಕ್ಕೆ ಹೆಮ್ಮೆಯನ್ನು ತಂದಿತ್ತ ದಿನವಾಗಿದೆ. ಪ್ರಾಮಾಣಿಕತೆ, ಉತ್ತಮ ನಾಯಕತ್ವ ಇಲ್ಲಿ ಕೆಲಸಮಾಡಿದೆ. ಸಮಾಜ ಅಭಿವೃದ್ಧಿ ಹೊಂದಲು ಸಾಂಸ್ಕೃತಿಕ ಕೇಂದ್ರ ಅಗತ್ಯವಾಗಿದೆ 
 ಆನಂದ್‌ ಎಂ. ಶೆಟ್ಟಿ  
(ಸಿಎಂಡಿ : ಆರ್ಗಾನಿಕ್‌ ಪ್ಲಾಸ್ಟಿಕ್ಸ್‌ ಪ್ರೈವೇಟ್‌  ಲಿಮಿಟೆಡ್‌).

ಇಚ್ಛಾಶಕ್ತಿ ಇದ್ದರೆ ಅಧ್ಯಕ್ಷನಾಗಿ ಏನು ಮಾಡಲು ಸಾಧ್ಯ ಎಂಬುವುದನ್ನು  ಸಂತೋಷ್‌ ಶೆಟ್ಟಿ ತೋರಿಸಿ ಕೊಟ್ಟಿ¨ªಾರೆ. ನಮ್ಮ ಮಕ್ಕಳಿಗೆ ಸಮಾಜದ ಮೇಲೆ ಪ್ರೀತಿ ಯಿರುವಂತೆ ಸಂಸ್ಕಾರ ನೀಡಬೇಕಾಗಿದೆ 
 ಸದಾನಂದ ಶೆಟ್ಟಿ  (ಅಧ್ಯಕ್ಷರು: ವರ್ಲ್ಡ್  ಬಂಟ್ಸ್‌  ವೆಲ್ಫೆàರ್‌ ಟ್ರಸ್ಟ್‌).

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next