Advertisement

ಕಲಬುರಗಿಯಲ್ಲಿ ಕತ್ತೆ ಹಾಲು ಮಾರಾಟ

12:23 PM Dec 09, 2021 | Team Udayavani |

ಕಲಬುರಗಿ: ಮಹಾರಾಷ್ಟ್ರದಿಂದ ನಗರಕ್ಕೆ ಹತ್ತು ಕತ್ತೆಗಳೊಂದಿಗೆ ಬಂದಿರುವ ವೆಂಕಟೇಶ ಪಿರಾಜಿ ಲಾಲಪಾಂಡೆ ಎನ್ನುವವರು ಕತ್ತೆಗಳ ಹಾಲಿನ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಿ ಕಫ, ಕೆಮ್ಮು, ಹೊಟ್ಟೆನೋವು ಇದ್ದವರಿಗೆ ಕುಡಿಸುತ್ತಿದ್ದಾರೆ.

Advertisement

ಒಂದು ಕಪ್‌ ಇಲ್ಲವೇ ಅರ್ಧ ಕಪ್‌ ಹಾಲನ್ನು ಕುಡಿದರೆ ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ ಎನ್ನುವ ಅವರು, ನಗರದ ಆಳಂದ ರಸ್ತೆಯ ಚೆಕ್‌ ಪೋಸ್ಟ್‌ ಹತ್ತಿರ ಸುಲ್ತಾನಪುರಕ್ಕೆ ಹೋಗುವ ವರ್ತುಲ ರಸ್ತೆ ಪಕ್ಕದಲ್ಲಿ ಕತ್ತೆಗಳೊಂದಿಗೆ ವಾಸ್ತವ್ಯ ಹೂಡಿದ್ದಾರೆ.

ಮಕ್ಕಳಿಗೆ ಕತ್ತೆ ಹಾಲು ಕುಡಿಸಿದರೆ ಬೆಳವಣಿಗೆಗೆ ಪೂರಕ ಎನ್ನುವ ಕಾರಣಕ್ಕೆ ಅನೇಕ ಪಾಲಕರು ತಮ್ಮ ಮಕ್ಕಳಿಗೆ ಈ ಹಾಲು ಕುಡಿಸಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next