Advertisement

ಕತ್ತೆಯೊಂದಕ್ಕೆ ಸಿನಿಮಾದಲ್ಲಿ ನಟಿಸಿದ್ದಕ್ಕೆ ಲಕ್ಷಗಟ್ಟಲೆ ಸಂಭಾವನೆ !

09:25 AM Jul 13, 2022 | Team Udayavani |

ಚೆನ್ನೈ: ದೊಡ್ಡ ದೊಡ್ಡ ಸಿನಿಮಾ ಸ್ಟಾರ್‌ಗಳು ಕೋಟಿಗಟ್ಟಲೆ ಸಂಭಾವನೆ ಪಡೆದಿದ್ದ ವಿಚಾರ ಕೇಳಿ ಚಿತ್ರ ರಸಿಕರು ಹುಬ್ಬೇರಿಸಿರಬಹುದು. ಆದರೆ, ಕತ್ತೆಯೊಂದಕ್ಕೆ ಸಿನಿಮಾದಲ್ಲಿ ನಟಿಸಿದ್ದಕ್ಕೆ ಲಕ್ಷಗಟ್ಟಲೆ ಸಂಭಾವನೆ ಸಿಕ್ಕಿರುವುದನ್ನು ನಾವೆಲ್ಲಾದರೂ ಕೇಳಿದ್ದೀವಾ? ಅಂಥದ್ದೊಂದು ಪ್ರಸಂಗ ನಡೆದಿರುವುದು ನಮ್ಮ ಭಾರತದಲ್ಲೇ, ಪಕ್ಕದ ತಮಿಳುನಾಡಿನಲ್ಲೇ!

Advertisement

ತಮಿಳು ನಟ, ನಿರ್ದೇಶಕ ಆರ್‌. ಪಾರ್ಥಿಬನ್‌ರವರ ಹೊಸ ಚಿತ್ರವಾದ “ಇರವಿನ್‌ ನಿಳಲ್‌’ ಚಿತ್ರದಲ್ಲಿ ಕತ್ತೆಯೊಂದಕ್ಕೆ ವಿಶೇಷವಾದ ಪಾತ್ರವಿದೆ. ಹಾಗಾಗಿ, ಕತ್ತೆಯೊಂದನ್ನು ಇದಕ್ಕೆ ಬಳಸಿಕೊಳ್ಳಲಾಗಿದ್ದು ಅದಕ್ಕೆ 8.5 ಲಕ್ಷ ರೂ. ಸಂಭಾವನೆ ನೀಡಲಾಗಿದೆ!

ಭಾರತದಲ್ಲಿ ಸಿನಿಮಾಕ್ಕೆ ಬಳಸಿಕೊಳ್ಳುವ ಪ್ರಾಣಿಗಳಿಗೆ (ಪ್ರಾಣಿಗಳ ಮಾಲೀಕರಿಗೆ) ನೀಡುವ ಸಂಭಾವನೆ ತೀರಾ ಕಡಿಮೆ. ಕೆಲವು ಪ್ರಾಣಿಗಳಿಗೆ ಮಾತ್ರ ಹೆಚ್ಚು ಸಂಭಾವನೆ ಸಿಕ್ಕಿದೆ. ಈಗ ಪಾರ್ಥಿಬನ್‌ ಚಿತ್ರದಲ್ಲಿ ನಟಿಸಿರುವ ಕತ್ತೆಯೂ ಆ ಪಟ್ಟಿಗೆ ಸೇರ್ಪಡೆಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next