Advertisement
ಮೊದಲ ಲಾಕ್ ಡೌನ್ ವೇಳೆ ಹೇಗೋ ಸುಧಾರಿಸಿಕೊಂಡಿದ್ದ ಜನರಿಗೆ 2ನೇ ಲಾಕ್‌ಡೌನ್ ಜಾರಿಯಾದ ಬಳಿಕ ಜನಜೀವನ ಬುಡಮೇಲಾಯಿತು. ಎಷ್ಟೋ ಜನ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದರೆ, ಸಾಕಷ್ಟು ಜನರಿಗೆ ವೇತನ ಕೂಡ ಸಿಗದಂಥ ಸ್ಥಿತಿ ಏರ್ಪಟ್ಟಿತು. ಇಂಥ ಹೊತ್ತಲ್ಲಿ ಸರ್ಕಾರ ಬರೋಬ್ಬರಿ 500 ಕೋಟಿ ರೂ. ಪರಿಹಾರ ಘೋಷಿಸಿತು. 3ರಿಂದ 5 ಸಾವಿರ ರೂ. ವರೆಗೂ ಸಹಾಯಧನ ಘೋಷಿಸುವ ಮೂಲಕ ನೆರವಿಗೆ ಬಂದಿತು. ಅದರಲ್ಲಿ ಖಾಸಗಿ ಶಾಲೆಗಳ ಶಿಕ್ಷಕರಿಗೆ 100 ಕೋಟಿ ರೂ. ಪರಿಹಾರ ನೀಡುತ್ತಿರುವುದಾಗಿ ತಿಳಿಸಿತ್ತು.
ಅವ ಧಿಯಲ್ಲಿ ಖಾತೆಗಳಿಗೆ 5 ಸಾವಿರ ರೂ. ಹಾಕಲಾಯಿತು. ಈ ದುಡ್ಡು ಕೆಲವರಿಗೆ ಬಂದರೆ, ಅನೇಕರ ಖಾತೆಗೆ ಬರಲೇ ಇಲ್ಲ. ಜಿಲ್ಲೆಯಲ್ಲಿ ಖಾಸಗಿ ಶಾಲೆಗಳ 4057 ಬೋಧಕ ಸಿಬ್ಬಂದಿ ಹಾಗೂ 1173 ಬೋಧಕೇತರ ಸಿಬ್ಬಂದಿ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಆಧಾರ್ ಜೋಡಣೆಯಾದ ಕಾರಣಕ್ಕೆ 3137 ಬೋಧಕ ಮತ್ತು 902 ಬೋಧಕೇತರ ಸಿಬ್ಬಂದಿ ಅರ್ಜಿ ಊರ್ಜಿತಗೊಂಡಿದ್ದವು. ಉಳಿದಂತೆ ಕಾರಣಾಂತರಗಳಿಂದ ಆಯಾ ಬಿಇಒ ಕಚೇರಿಯಲ್ಲಿ ಕೆಲ ಅರ್ಜಿಗಳು ತಿರಸ್ಕೃತಗೊಂಡರೆ; ಸುಮಾರು 85 ಅರ್ಜಿ ಬಾಕಿ ಉಳಿದಿವೆ. ಆದರೆ, ಅರ್ಜಿ ಊರ್ಜಿತಗೊಂಡ ಫಲಾನುಭವಿಗಳ ಖಾತೆಗೂ ಹಣ ಬಂದಿಲ್ಲ ಎನ್ನುವುದೇ ಸಮಸ್ಯೆ
Related Articles
ಒಂದೇ ಶಾಲೆಯಲ್ಲಿ ಕೆಲಸ ಮಾಡುವ ಒಬ್ಬ ಸಿಬ್ಬಂದಿಗೆ ಸಹಾಯಧನ ಲಭಿಸಿದ್ದರೆ ಇನ್ನೊಬ್ಬರಿಗೆ ಲಭಿಸಿಲ್ಲ. ಇದರಿಂದ ಅವರು ಇಲಾಖೆ ಅ ಧಿಕಾರಿಗಳನ್ನು ವಿಚಾರಿಸಿದರೆ ತಾಂತ್ರಿಕ ದೋಷದಿಂದ ಹೀಗಾಗಿರಬಹುದು. ಬ್ಯಾಂಕ್‌ಗಳನ್ನು ವಿಚಾರಿಸಿ ಎಂದು ಹೇಳಿದ್ದಾರೆ. ಬ್ಯಾಂಕ್‌ನಲ್ಲಿ ವಿಚಾರಿಸಿದರೆ ಆ ರೀತಿ ಹಣ ಬಂದಿಲ್ಲ ಎಂದು ಹೇಳಿದ್ದಾರೆ. ಅದೂ ಅಲ್ಲದೇ ಅನೇಕ ತಿಂಗಳಿಂದ ಶೂನ್ಯ ಹಣ ಇದ್ದ ಕಾರಣ ಕೆಲ ಖಾಸಗಿ ಬ್ಯಾಂಕ್‌ಗಳು ಸೇವಾ ಶುಲ್ಕ ವಿಧಿ ಸಿದ್ದು, ಶಿಕ್ಷಕರಿಗೆ ಹಾಕಿದ ಗೌರವಧನ ಹಣದಲ್ಲಿಯೇ ಕಡಿತಗೊಳಿಸಿ ನೀಡಿವೆ.
Advertisement
ನಮಗೆ ಸುಮಾರು ಒಂದು ವರ್ಷಕ್ಕೂ ಅಧಿಕ ಕಾಲ ವೇತನವೇ ಸಿಕ್ಕಿಲ್ಲ. ಸರ್ಕಾರ ಸಹಾಯಧನ ನೀಡುತ್ತದೆ ಎಂದಾಗ ಎಷ್ಟಾದರೂ ಸರಿ ಅನುಕೂಲವಾಗಲಿದೆ ಎಂದು ಹಣ ಖರ್ಚು ಮಾಡಿಕೊಂಡು ಕೆಎಸ್‌ಎಟಿಯಲ್ಲಿ ನೋಂದಣಿ ಮಾಡಿದ್ದೇವೆ. ಆದರೆ, ನಮ್ಮ ಶಾಲೆಯಲ್ಲೇ ಬೇರೆಯರ ಖಾತೆ ಹಣ ಜಮಾಗೊಂಡಿದ್ದು, ನನ್ನ ಖಾತೆಗೆ ಬಂದಿಲ್ಲ. ವಿಚಾರಿಸಿದರೆ ಸರಿಯಾದ ಸ್ಪಂದನೆ ಕೂಡ ಸಿಗುತ್ತಿಲ್ಲ. ಕನಿಷ್ಟ ಪಕ್ಷ ಇಲಾಖೆಯಾದರೂ ಈ ಬಗ್ಗೆ ಪರಿಶೀಲಿಸಿ ಹಣ ಎಲ್ಲಿ ಹೋಗಿದೆ ಎಂಬುದನ್ನು ತಿಳಿಸಬೇಕಿದೆ.ನೊಂದ ಖಾಸಗಿ ಶಾಲೆ ಶಿಕ್ಷಕ ಇದು ನಮ್ಮ ಇಲಾಖೆ ಸಮಸ್ಯೆಯಲ್ಲ. ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿದ ಶಿಕ್ಷಕರಿಗೆ ಹಣ ಲಭಿಸಿದೆ. ಎಲ್ಲ ಬಿಇಒಗಳಿಗೆ ಶೇ.100ಕ್ಕೆ ನೂರರಷ್ಟು ನೋಂದಣಿ ಪ್ರಕ್ರಿಯೆ ಮುಗಿಸಲು ನಿರ್ದೇಶನ ನೀಡಲಾಗಿತ್ತು. ಫಲಾನುಭವಿಗಳು ಬ್ಯಾಂಕ್ ಖಾತೆಗಳ ವಿವರ ಸರಿಯಾಗಿ ನೀಡದಿದ್ದರೆ, ಇಲ್ಲ ಏನಾದರೂ ತಾಂತ್ರಿಕ ತೊಂದರೆ ಇದ್ದರೆ ಹಣ ಬಂದಿರಲಿಕ್ಕಿಲ್ಲ.
ವೃಷಭೇಂದ್ರಯ್ಯ,
ರಾಯಚೂರು ಡಿಡಿಪಿಐ *ಸಿದ್ದಯ್ಯಸ್ವಾಮಿ ಕುಕನೂರು