Advertisement

ಹಾಲುಮತ ಸಂಸ್ಕೃತಿ ವೈಭವ ದಾಸೋಹಕ್ಕೆ 101 ಪಾಕೇಟ್ ಅಕ್ಕಿ ದೇಣಿಗೆ

07:26 PM Jan 11, 2022 | Team Udayavani |

ಗಂಗಾವತಿ: ರೇವಣಸಿದ್ದೇಶ್ವರ ಮಹಾ ಸಂಸ್ಥಾನ ಕನಕಗುರುಪೀಠ ಕಾಗಿನೆಲೆಯ ಶಾಖಾ ಮಠ  ತಿಂಥಿಣಿ ಬ್ರೀಜ್ಡ್ ನಲ್ಲಿ ಜ.12,13 ಮತ್ತು 14 ರಂದು ಆಯೋಜಿಸಿರುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದ ದಾಸೋಹಕ್ಕೆ ಗಂಗಾವತಿ ಹಾಲುಮತ ಕುರುಬ ಸಮಾಜದ ವತಿಯಿಂದ 101 ಪಾಕೇಟ್ ಅಕ್ಕಿಯನ್ನು ಕಳುಹಿಸಲಾಯಿತು.

Advertisement

ಮೂರು ದಿನಗಳ ಕಾಲ ಹಾಲುಮತ ಕುರುವ ಸಮಾಜದ ಶೈಕ್ಷಣಿಕ, ಧಾರ್ಮಿಕ, ಆರ್ಥಿಕ ಸಾಮಾಜಿಕ ಚಿಂತನೆ ಹಾಗೂ ರಾಜಕೀಯ ಸ್ಥಿತಿಗತಿ ಕುರಿತು ಚಿಂತನ ಮಂಥನ ಜರುಗಲಿದ್ದು ರಾಜ್ಯದ ವಿವಿಧೆಡೆಯಿಂದ ಸಮಾಜ ಬಾಂಧವರು ಆಗಮಿಸಲಿದ್ದು ನಿರಂತ ದಾಸೋಹಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಅಕ್ಕಿಯನ್ನು ಕಳಿಸಲಾಯಿತು.

ಈ ಸಂದರ್ಭದಲ್ಲಿ ಹಾಲುಮತ ಕುರುಬ ಸಮಾಜದ ಅಧ್ಯಕ್ಷ ವಿಠಲಾಪೂರ ಯಮನಪ್ಪ ಮಾತನಾಡಿ, ಹಾಲುಮತ ಕುರುಬ ಸಮಾಜ ಶತಮಾನಗಳಿಂದ ತನ್ನದೇ ಇತಿಹಾಸ ಹೊಂದಿದೆ. ಕಾಶಿವಿಶ್ವನಾಥ ದೇಗುಲ ಅಭಿವೃದ್ಧಿ ಆನೆಗೊಂದಿ-ಹಂಪಿ ಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮತ್ತು ದೇಶದ ಅಭಿವೃದ್ಧಿಯಲ್ಲಿ ಹಾಲುಮತ ಕೊಡುಗೆ ಅಪಾರವಾಗಿದೆ. ಪೂಜ್ಯ ಸಿದ್ದರಾಮಾನಂದಪುರಿ ಸ್ವಾಮಿಗಳ ನೇತೃತ್ವದಲ್ಲಿ ಹಾಲುಮತ ಸಂಸ್ಕೃತಿ ವೈಭವ  ಕಾರ್ಯಕ್ರಮದಲ್ಲಿ ರಾಜ್ಯ ದೇಶ ಹಾಗೂ ಸಮಾಜದ ಕುರಿತು ಚಿಂತನ ಮಂಥನ ಜರುಗಲಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ದಾಸೋಹಕ್ಕಾಗಿ 101 ಪಾಕೇಟ್ ಅಕ್ಕಿಯನ್ನು ಕಳಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಸಣ್ಣಕ್ಕಿ ನೀಲಪ್ಪ, ಕೆ.ನಾಗೇಶಪ್ಪ, ಕೆ.ವೆಂಕಟೇಶ, ಅಶೋಕಗೌಡ, ಯಮನೂರಪ್ಪ, ಶಾಮಣ್ಣ ಅಡ್ಡಿ, ಬಸವರಾಜ ಬಕ್ಕಂಡಿ, ಸಂಗಟಿ ಬಸವರಾಜ, ಸಿಂಗನಾಳ ಬಿ.ವೆಂಕಟೇಶ, ಮಲ್ಲಿಕಾರ್ಜುನ ಜಂತಗಲ್, ರಾಮಕೃಷ್ಣ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next