Advertisement

ಪತ್ರಕರ್ತರಿಂದ ನೆರೆ ಸಂತ್ರಸ್ತರಿಗೆ ದೇಣಿಗೆ

03:30 PM Aug 18, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ ದೃಶ್ಯ ಹಾಗೂ ಮುದ್ರಣ ಮಾಧ್ಯಮದ ಪತ್ರ ಕರ್ತರು ಶನಿವಾರ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ವ್ಯಾಪಾರ ಸ್ಥರಿಂದ, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದರು.

Advertisement

ನಗರದ ಪತ್ರಕರ್ತರ ಭವನ ಆವರಣ ದಿಂದ ಆರಂಭಗೊಂಡ ದೇಣಿಗೆ ಸಂಗ್ರಹ ಬಿಬಿ ರಸ್ತೆ, ಬಜಾರ್‌ ರಸ್ತೆ, ಮಹಾಕಾಳಿ ರಸ್ತೆ, ಗಂಗಮ್ಮ ಗುಡಿ ರಸ್ತೆ, ಎಂ ರಸ್ತೆಯ ಮುಖಾಂತರ ಸಾಗಿ ಸಾರ್ವಜನಿಕರಿಂದ, ವರ್ತಕರಿಂದ ಸಂಘ, ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸಲಾಯಿತು.

ನೆರೆ ಸಂತ್ರಸ್ತರಿಗೆ ನೆರವಾಗಲು ಆಸಕ್ತಿ ಇರುವ ಸಾರ್ವಜನಿಕರು ಅಗತ್ಯ ದಿನಸಿ ಪದಾರ್ಥಗಳು, ಉಡುಪುಗಳು ಮತ್ತಿತರ ಅಗತ್ಯ ದಿನಬಳಕೆಯ ವಸ್ತುಗಳನ್ನು ನಗ ರದ ಪತ್ರಕರ್ತರ ಭವನಕ್ಕೆ ತಲುಪಿಸ ಬಹು ದಾಗಿದೆ. ಈಗಾಗಲೇ ಪತ್ರಕರ್ತರ ಮನ ವಿಗೆ ಸ್ಪಂದಿಸಿ ಜಿಲ್ಲಾ ಕೇಂದ್ರದ ಸಮಾಜ ಸೇವಕರು, ವರ್ತಕರು ಅಕ್ಕಿ, ಬೇಳೆ, ರವೆ, ಎಣ್ಣೆ, ಬಟ್ಟೆಗಳು, ಕುಡಿಯುವ ನೀರಿನ ಬಾಟಲುಗಳನ್ನು ಪತ್ರಕರ್ತರ ಭವನಕ್ಕೆ ತಲುಪಿಸಿದ್ದಾರೆ. ದೇಣಿಗೆ ಸಂಗ್ರಹ ಕಾರ್ಯ ಕ್ರಮದಲ್ಲಿ ಹಲವು ಪತ್ರಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next