ಬೆಳಗಾವಿ : ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕೋವಿಡ್ ಕಿಟ್ ನನ್ನು ವಿತರಣೆ ಮಾಡುವುದರ ಮೂಲಕ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾನವೀಯತೆಯನ್ನು ಮರೆದಿದ್ದಾರೆ.
ಇದನ್ನೂ ಓದಿ : ಕೋವಿಡ್ 19 : ಗ್ರಾಹಕ ಸ್ನೇಹಿ ಯೋಜನೆಯೊಂದನ್ನು ಘೋಷಿಸಿದ ಜಿಯೋ
ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಂಕ್ಷಿಪ್ತ ಸಭೆಯಲ್ಲಿ ಸ್ವಾಮಿಗಳು ಜಿಲ್ಲಾಧಿಕಾರಿಗಳಿಗೆ ಕೋವಿಡ್ ಕಿಟ್ ಗಳನ್ನು ಹಸ್ತಾಂತರಿಸಿದರು. ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಅವರಿಗೆ 150 ಕೋವಿಡ್ ಕಿಟ್ ಗಳನ್ನು ಹಸ್ತಾಂತರಿಸಿ ಮಾತನಾಡಿದ ಶಿವಾಚಾರ್ಯ ಸ್ವಾಮಿಗಳು, ಜಿಲ್ಲೆಯಲ್ಲಿ 1000 ಕೋವಿಡ್ ಕಿಟ್ಟನ್ನು ನೀಡುವದಲ್ಲದೆ ಹುಕ್ಕೇರಿ ಹಿರೇಮಠದ ಗುರುಶಾಂತೇಶ್ವರ ಜಾತ್ರೆಯನ್ನು ರದ್ದು ಮಾಡಿ ಶ್ರೀ ಮಠದಿಂದ ಕೋವಿಡ್ ರೋಗಿಗಳಿಗೆ ಉಚಿತ ಅಂಬುಲೆನ್ಸ ನೀಡುವುದಾಗಿ ಹೇಳಿದ್ದಾರೆ.
ಇನ್ನು, ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಮಾತನಾಡಿ, ಹುಕ್ಕೇರಿ ಹಿರೇಮಠದ ಶ್ರೀಗಳು ಸದಾ ಸಾಮಾಜಿಕ ಕಾರ್ಯವನ್ನು ಮಾಡುವುದರ ಜೊತೆಗೆ ಈ ಕೋವಿಡ್ ಸಂದರ್ಭದಲ್ಲಿ ಕೋವಿಡ್ ಕಿಟ್ ಗಳನ್ನು ನೀಡಿ ಜನರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಕೋವಿಡ್ ಕಿಟ್ ಸೇವೆಯನ್ನು ಬುಡಾ ಇಂಜಿನಿಯರ್ ಮಹಾಂತೇಶ ಹಿರೇಮಠ ಅವರು ಮಾಡಿದರು .
ಈ ಸಂದರ್ಭದಲ್ಲಿ ವೀರೇಶ ಹಿರೇಮಠ, ಪವನ ಹಿರೇಮಠ , ಈರಣ್ಣಾ ಗಣಾಚಾರಿ , ಮಹಾಂತೇಶ ಹಿರೇಮಠ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ : ಚಿಕ್ಕಮಗಳೂರಿನಲ್ಲೂ ಆಕ್ಸಿಜನ್ ಬಸ್ ಸೇವೆ ಪ್ರಾರಂಭ : ಡಿಸಿಎಂ ಸವದಿ