Advertisement
ಸ್ವೇಹ ಜೊವಿ ಬಳಗದ ಸೋನಾಲಿಕ ಟ್ಯಾಕ್ಟರ್ ನ ಡೀಲರ್ ಗಳಾದ ಕುಡಿನೀರು ಮುದ್ದನಹಳ್ಳಿ ದಿಲೀಪ್ ರವರು ಶಾಸಕ ಸ್ನೇಹಜೀವಿ ಎಚ್ ಪಿ ಮಂಜುನಾಥ್ ರವರ ನೇತೃತ್ವದಲ್ಲಿ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ಕೊರೋನಾ ಸೋಂಕಿತರಿಗೆ ನೆರವಾಗುವಂತೆ ಎರಡು ಆಕ್ಸಿಜನ್ ಸಿಲಿಂಡರ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
Related Articles
Advertisement
ಈ ಸಂದರ್ಭದಲ್ಲಿ ಶಾಸಕರಾದ ಸ್ನೇಹಜೀವಿ H.P. ಮಂಜುನಾಥ್ ಮಾತನಾಡಿ ನನ್ನ ಸ್ನೇಹಜೀವಿ ಬಳಗದವರು ನನ್ನೊಂದಿಗೆ ತಾಲೂಕಿನಲ್ಲಿ ಸಂಕಷ್ಟಕ್ಕೊಳಗಾಗಿರುವ ಜನರ ನೆರವಿಗೆ ಧಾವಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ತಾಲೂಕಿನ ಜನತೆಯು ಬಹಳ ಎಚ್ಚರಿಕೆಯಿಂದ ತಮ್ಮ ಆರೋಗ್ಯದ ಕಡೆ ಗಮನ ನೀಡಿ ಸಾಮಾಜಿಕ ಅಂತರದೊಂದಿಗೆ ಮುಖಕ್ಕೆ ಮಾಸ್ಕ್ ಧರಿಸಿಕೊಳ್ಳಬೇಕು. ತಮ್ಮ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ತಕ್ಷಣವೇ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ಮನವಿ ಮಾಡಿದ್ದಾರೆ.
ಈ ವೇಳೆ ತಹಸೀಲ್ದಾರ್ ಬಸವರಾಜ್, ಇ.ಒ. ಗಿರೀಶ್ ತಾಲೂಕು ಆರೋಗ್ಯ ಅಧಿಕಾರಿ ಕೀರ್ತಿ ಕುಮಾರ್ ನಗರಸಭೆ ಅಧ್ಯಕ್ಷ ಅನುಷಾರಾಗು ಸೇರಿದಂತೆ ಇತರರು ಭಾಗಿಯಾಗಿದ್ದರು.
ಇದನ್ನೂ ಓದಿ: ಭೂಮಿ ಕಬಳಿಸಲು ಬೃಹತ್ ಬಂಡೆ ಸೀಳಿದ ಖದೀಮರು: ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ, ಪ್ರಾಧಿಕಾರ