Advertisement

ನೆರೆ ಸಂತ್ರಸ್ತರಿಗೆ 25 ಟನ್‌ ಅಕ್ಕಿ ದೇಣಿಗೆ

10:44 AM Aug 25, 2019 | Team Udayavani |

ಚಿಕ್ಕೋಡಿ: ಕೋಲಾರ ಜಿಲ್ಲೆಯ ಮಾಲೂರ ವಿಧಾನಸಭೆ ಕ್ಷೇತ್ರದ ಶಾಸಕ ಕೆ.ವೈ. ನಂಜೇಗೌಡರು ಚಿಕ್ಕೋಡಿ ತಾಲೂಕಿನ ನೆರೆ ಸಂತ್ರಸ್ತರಿಗೆ 25 ಟನ್‌ ಅಕ್ಕಿ ಹಾಗೂ ಅಗತ್ಯ ಸಾಮಗ್ರಿಗಳನ್ನು ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಸಿ. ಲಕ್ಷ್ತ್ರೀನಾರಾಯಣ ಹೇಳಿದರು.

Advertisement

ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಉಂಟಾಗಿದ ನೆರೆ ಹಾವಳಿ ಸಂತ್ರಸ್ತರಿಗೆ ಅನುಕೂಲವಾಗಲು ಶಾಸಕ ನಂಜೇಗೌಡರು ಚಿಕ್ಕೋಡಿ ಮತ್ತು ಬಾದಾಮಿ ತಾಲೂಕಿನ ಸಂತ್ರಸ್ತರಿಗೆ 25 ಟನ್‌ ಅಕ್ಕಿ ಹಾಗೂ ಅಗತ್ಯ ಸಾಮಗ್ರಿಗಳನ್ನು ಕಳಿಸಿದ್ದಾರೆ. ಈಗಾಗಲೇ ಅಕ್ಕಿ ಮತ್ತು ಮನೆಯ ಸಾಮಗ್ರಿಗಳನ್ನು ಆಯಾ ಸಂತ್ರಸ್ತರಿಗೆ ಮುಟ್ಟಿಸುವ ಕೆಲಸವನ್ನು ಸ್ಥಳೀಯ ಕಾಂಗ್ರೆಸ್‌ ಬ್ಲಾಕ್‌ ಪದಾಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದರು.

ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಸಮಿತಿ ಸದಸ್ಯ ವಿಜಯ ನರಸಿಂಹ ಮಾತನಾಡಿ, ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಮತ್ತು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಸಂತ್ರಸ್ತರ ಸಂಕಷ್ಟ ದೂರು ಮಾಡಲು ಸತತ ಶ್ರಮಿಸುತ್ತಿದ್ದು, ಇಲ್ಲಿಯ ಸಂತ್ರಸ್ತರಿಗೆ ಅನುಕೂಲವಾಗಲು ಶಾಸಕ ನಂಜೇಗೌಡರು ಅಕ್ಕಿ ಮತ್ತು ವಿವಿಧ ಸಾಮಗ್ರಿಗಳನ್ನು ದೇಣಿಗೆ ನೀಡಿದ್ದಾರೆ. ಎಲ್ಲರೂ ಸಂತ್ರಸ್ತರ ಬದುಕು ಕಟ್ಟಿಕೊಡಲು ಪ್ರಯತ್ನ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ ಕುಲಕರ್ಣಿ, ಯುವ ಕಾಂಗ್ರೆಸ್‌ ಅಧ್ಯಕ್ಷ ನವೀನಕುಮಾರ, ಪುರಸಭೆ ಸದಸ್ಯ ಸಾಭೀರ ಜಮಾದಾರ, ಅನಿಲ ಮಾನೆ, ಗುಲಾಬ ಬಾಗವಾನ, ಪೀರೋಜ ಕಲಾವಂತ, ಮುದ್ದಸರ ಜಮಾದಾರ, ರವಿ ಮಾಳಿ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next