Advertisement

ಅಮೆರಿಕನ್‌ ರಾಯಭಾರಿ ಕಚೇರಿ ಮೇಲೆ ದಾಳಿ ; ಅಮೆರಿಕ ಎಚ್ಚರಿಕೆ

10:06 AM Jan 02, 2020 | Hari Prasad |

ಇರಾಕ್‌: ಇಲ್ಲಿನ ಬಗ್ಧಾದ್‌ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ರಾಯಭಾರಿ ಕಚೇರಿಯ ಮೇಲೆ ಇರಾಕ್‌ನ ಬಂಡುಕೋರರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇರಾಕ್‌ನಲ್ಲಿ ಅಮೆರಿಕ ವೈಮಾನಿಕ ದಾಳಿ ನಡೆಸಿದಕ್ಕೆ ಪ್ರತಿಯಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.

Advertisement

ಇರಾಕ್‌ನ ಪ್ರತಿ ದಾಳಿಗೆ ಪ್ರತಿಕ್ರಿಯಿಸಿರುವ ಅಮೆರಿಕ ಇರಾನ್‌ಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ನಮಗೆ ಇದೆಯಾದರೂ, ನಾವು ಯುದ್ಧದಂತೆ ಇದನ್ನು ಕೊಂಡು ಹೋಗುವುದಿಲ್ಲ ಎಂದಿದ್ದಾರೆ. ಅದರೆ ಮುಂದೆ ನಮ್ಮ ತಾಳ್ಮೆಯನ್ನು ಪರೀಕ್ಷಿಸಿದರೆ ನಾವು ಸುಮ್ಮನೆ ಇರುವುದಿಲ್ಲ ಎಂದು ವೈಟ್‌ಹೌಸ್‌ ಎಚ್ಚರಿಸಿದೆ.

ಇರಾಕ್‌ನ ಸೇನಾ ನೆಲೆಯೊಂದರ ಮೇಲೆ ನಡೆದ ರಾಕೆಟ್‌ ದಾಳಿಯಲ್ಲಿ ಅಮೆರಿಕದ ನಾಗರಿಕನೊಬ್ಬ ಮೃತ್ಪಟ್ಟಿದ್ದ. ಇದಕ್ಕೆ ಪ್ರತಿಕಾರವಾಗಿ ಕತೈಬ್‌ ಹಿಝ್ಬುಲ್ಲಾ ಬಂಡುಕೋರರ ಮೇಲೆ ದಾಳಿ ನಡೆಸಲಾಗಿತ್ತು. ಇರಾನ್‌ನಲ್ಲಿ ದಾಳಿ ಮತ್ತು ಪ್ರತಿದಾಳಿಗೆ ಅದೇ ರಾಷ್ಟ್ರ ಕಾರಣ ಎಂದು ಟ್ರಂಪ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next