Advertisement

Tax Issue ಭಾರತಕ್ಕೆ ದುಬಾರಿ ತೆರಿಗೆಯ ಬೆದರಿಕೆಯೊಡ್ಡಿದ ಡೊನಾಲ್ಡ್‌ ಟ್ರಂಪ್‌

07:49 PM Aug 21, 2023 | Team Udayavani |

ವಾಷಿಂಗ್ಟನ್‌:ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮತ್ತೊಮ್ಮೆ ಭಾರತಕ್ಕೆ ಹೆಚ್ಚುವರಿ ತೆರಿಗೆಯ ಬೆದರಿಕೆಯೊಡ್ಡಿದ್ದಾರೆ. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವೇನಾದರೂ ಗೆದ್ದು ಅಧಿಕಾರ ಹಿಡಿದರೆ, ಭಾರತದ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದಾಗಿ ಘೋಷಿಸಿದ್ದಾರೆ.

Advertisement

ಟ್ರಂಪ್‌ ಅವರು ತಮ್ಮ ಆಡಳಿತಾವಧಿಯಲ್ಲಿ, ಭಾರತವನ್ನು “ತೆರಿಗೆಗಳ ರಾಜ’ ಎಂದು ಕರೆದಿದ್ದರು. ಅಲ್ಲದೇ, ಭಾರತವು ಸಮಾನ ಮತ್ತು ಸಮಂಜಸವಾಗಿ ತನ್ನ ಮಾರುಕಟ್ಟೆಯನ್ನು ಅಮೆರಿಕಕ್ಕೆ ಮುಕ್ತಗೊಳಿಸುತ್ತಿಲ್ಲ ಎಂದು ಆರೋಪಿಸಿದ್ದ ಅವರು, 2019ರ ಮೇ ತಿಂಗಳಲ್ಲಿ ಭಾರತದ ಆದ್ಯತಾ ಮಾರುಕಟ್ಟೆಯ ಸೌಲಭ್ಯವನ್ನು ತೆಗೆದುಹಾಕಿದ್ದರು.

ಈಗ ಮತ್ತೊಂದು ಬಾರಿಗೆ ಅಧ್ಯಕ್ಷರಾಗಲು ಹವಣಿಸುತ್ತಿರುವ ಟ್ರಂಪ್‌, ಚುನಾವಣಾ ಪ್ರಚಾರ ಸಭೆಗಳಲ್ಲಿ ಮತ್ತೆ ಭಾರತದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಹರ್ಲೆ ಡೇವಿಡ್‌ಸನ್‌ ಮೋಟಾರ್‌ಸೈಕಲ್‌ ಸೇರಿದಂತೆ ಅಮೆರಿಕದ ಹಲವು ಉತ್ಪನ್ನಗಳ ಮೇಲೆ ಭಾರತವು ಅತಿಯಾದ ತೆರಿಗೆ ವಿಧಿಸುತ್ತಿದೆ. ಶೇ.100, 150, 200ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಭಾರತದಲ್ಲಿ ತಯಾರಾದ ಬೈಕುಗಳನ್ನು ಅವರು ಅಮೆರಿಕಕ್ಕೆ ತಂದು ಯಾವುದೇ ತೆರಿಗೆ, ಶುಲ್ಕವಿಲ್ಲದೇ ಮಾರಾಟ ಮಾಡುತ್ತಾರೆ. ಆದರೆ, ಹರ್ಲೆ ಬೈಕುಗಳನ್ನು ಭಾರತದಲ್ಲಿ ನಾವು ಮಾರಾಟ ಮಾಡುವುದಿದ್ದರೆ ದುಬಾರಿ ತೆರಿಗೆ ತೆರಬೇಕು. ಇದೆಂಥಾ ನ್ಯಾಯ? ಹೀಗಾಗಿ, ಮುಂದಿನ ಬಾರಿ ನಾವೇನಾದರೂ ಅಧಿಕಾರಕ್ಕೆ ಬಂದರೆ, ಭಾರತದ ಉತ್ಪನ್ನಗಳಿಗೂ ನಾವು ದುಬಾರಿ ತೆರಿಗೆ ವಿಧಿಸುವುದು ಖಚಿತ ಎಂದಿದ್ದಾರೆ ಟ್ರಂಪ್‌.

Advertisement

Udayavani is now on Telegram. Click here to join our channel and stay updated with the latest news.

Next