Advertisement

ಚುನಾವಣೆ ಬಳಿಕ ವ್ಯಾಪಾರ ಒಪ್ಪಂದಕ್ಕೆ ಸಹಿ?

08:46 AM Feb 20, 2020 | Team Udayavani |

ಹೊಸದಿಲ್ಲಿ/ಅಹಮದಾಬಾದ್‌: ಬಹು ನಿರೀಕ್ಷಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತ ಪ್ರವಾಸದ ವೇಳೆ ಬಹುಕೋಟಿ ಮೌಲ್ಯದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತದೆ. ವರ್ಷಾಂತ್ಯದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಮುಕ್ತಾಯದ ಬಳಿಕ ಮತ್ತು ಅದಕ್ಕೆ ಸಂಬಂಧಿಸಿದ ಪೂರ್ವ ಭಾವಿ ಮಾತು ಕತೆಗಳು ಪೂರ್ತಿಯಾದ ಬಳಿಕ ವ್ಯಾಪಾರ ಒಪ್ಪಂದ ಕೈಗೆತ್ತಿಕೊಳ್ಳುವ ಸಾಧ್ಯತೆ ಗಳು ಇವೆ ಎಂದು ಮೂಲಗಳನ್ನು ಉಲ್ಲೇಖೀಸಿ “ದ ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ.

Advertisement

ಈ ಬಗ್ಗೆ ಅಮೆರಿಕದ ವಾಣಿಜ್ಯ ಸಚಿವಾಲಯದ ಪ್ರತಿನಿಧಿ ರಾಬರ್ಟ್‌ ಲೈಟ್ಜರ್‌ ಕೇಂದ್ರ ಸರಕಾರಕ್ಕೆ ವಿವರಿಸಿದ್ದಾರೆ. ವರ್ಷಾಂತ್ಯದಲ್ಲಿ ಫ‌ಲಿತಾಂಶ ಪ್ರಕಟವಾದ ಬಳಿಕ 2021ರ ಆರಂಭದಿಂದ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲಾಗುತ್ತದೆ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರಕಾರ ಅಮೆರಿಕ ನಮ್ಮ ಸಹನೆಯನ್ನು ಪರೀಕ್ಷಿಸುವಂತಿದೆ. ಶೀಘ್ರದಲ್ಲಿಯೇ ಒಪ್ಪಂದ ಪೂರ್ವ ಮಾತುಕತೆ ಗಳನ್ನು ಮುಗಿಸಲು ಉತ್ಸುಕರಾಗಿದ್ದೇವೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.

ನೋಟಿಸ್‌ ಜಾರಿ: ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಫೆ.24ರಂದು ಏರ್‌ಪೋರ್ಟ್‌ನಿಂದ ಟ್ರಂಪ್‌ ಆಗಮಿಸುವ ಹೆದ್ದಾರಿ ಬಳಿ ಇರುವ ಕೊಳೆಗೇರಿ ನಿವಾಸಿಗಳಿಗೆ ತೆರವು ನೋಟಿಸ್‌ ನೀಡಲಾಗಿದೆ. ಈ ಅಂಶ ವಿವಾದಕ್ಕೆ ಕಾರಣವಾಗಿದೆ. ಭೇಟಿಗೂ ನೋಟಿಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಅಹಮದಾಬಾದ್‌ ಮುನಿಸಿಪಲ್‌ ಕಾರ್ಪೊರೇಷನ್‌ ಹೇಳಿಕೊಂಡಿದೆ. ಸ್ಥಳೀಯ ಆಡಳಿತದ ವತಿಯಿಂದ ಈಗಾಗಲೇ ದೊಡ್ಡಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next