Advertisement

ಭಾರತ, ಚೀನ ನಡುವೆ ಗಡಿಯೇ ಇಲ್ಲ ಎಂದಿದ್ದ ಟ್ರಂಪ್‌!

10:59 AM Jan 18, 2020 | Hari Prasad |

ವಾಷಿಂಗ್ಟನ್‌: ‘ಭಾರತ ಮತ್ತು ಚೀನ ನಡುವೆ ಗಡಿಯೇ ಇಲ್ಲ!’ ಅಮೆರಿಕ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಜತೆ ಮಾತನಾಡುವಾಗ ಅಮೆರಿಕ ಅಧ್ಯಕ್ಷ ಟ್ರಂಪ್‌ ನೀಡಿದ್ದ ಇಂಥದ್ದೊಂದು ಅಸಂಬದ್ಧ ಹೇಳಿಕೆ ಸಹಿತ ಟ್ರಂಪ್‌ ಅವರ 3 ವರ್ಷಗಳ ಆಡಳಿತದಲ್ಲಿ ಅವರು ಕೈಗೊಂಡಿರುವ ತಪ್ಪು ನಿರ್ಧಾರಗಳು ಹಾಗೂ ಮಾಡಿಕೊಂಡಿರುವ ಎಡವಟ್ಟುಗಳನ್ನು ಸೇರಿ ಸಲ್ಪಟ್ಟಿರುವ ಪುಸ್ತಕವೊಂದು ಹೊರಬಂದಿದೆ.

Advertisement

‘ಎ ವೆರಿ ಸ್ಟೇಬಲ್‌ ಜೀನಿಯಸ್‌’ ಎಂಬ ಹೆಸರಿನ ಈ ಪುಸ್ತಕವನ್ನು ‘ದ ವಾಷಿಂಗ್ಟನ್‌ ಪೋಸ್ಟ್‌’ ದೈನಿಕದಲ್ಲಿ ಕೆಲಸ ಮಾಡಿದ ಫಿಲಿಪ್‌ ರುಕರ್‌ ಹಾಗೂ ಕೆರೋಲ್‌ ಡಿ ಲಿಯೊನಿಂಗ್‌ ಎಂಬ ಪತ್ರಕರ್ತರಿಬ್ಬರು ಬರೆದಿದ್ದಾರೆ.

ಇದರಲ್ಲಿ ಟ್ರಂಪ್‌ ಅವರು ತಮ್ಮ ಅವಿವೇಕದಿಂದಾಗಿ ಕುತರ್ಕಗಳಿಂದಾಗಿ, ಸ್ವಾರ್ಥ ಸಾಧನೆಗಾಗಿ ಅನೇಕ ತಪ್ಪುಗಳನ್ನು ಮಾಡಿದ್ದಾಗಿ ಹೇಳಲಾಗಿದೆ. ಪ್ರಧಾನಿ ಮೋದಿ ಸಮ್ಮುಖದಲ್ಲೇ “ನೇಪಾಲ ಮತ್ತು ಭೂತಾನ್‌ ಎರಡೂ ಭಾರತದ ಭಾಗಗಳಾಗಿವೆ ಎಂಬುದು ನನಗೆ ಗೊತ್ತು’ ಎಂದೂ ಟ್ರಂಪ್‌ ಹೇಳಿದ್ದರು. ಅಲ್ಲದೆ, ಈ ಎರಡೂ ದೇಶಗಳನ್ನು ‘ನಿಪ್ಪಲ್‌ ಮತ್ತು ಬಟನ್‌’ ಎಂದು ಸಂಬೋಧಿಸಿದ್ದರು. ಟ್ರಂಪ್‌ ಹೇಳಿಕೆಗಳನ್ನು ನೋಡಿ ಮೋದಿ ನಿಬ್ಬೆರಗಾಗಿದ್ದರು ಎಂದೂ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next