ವಾಷಿಂಗ್ಟನ್: ಭಾರತ ಮತ್ತು ಪಾಕ್ ನಡುವಣ ಯಾವುದೇ ದ್ವಿಪಕ್ಷೀಯ ಮಾತುಕತೆ ಫಲಪ್ರದವಾಗಬೇಕಾದರೆ ಪಾಕಿ ಸ್ಥಾನವು ಮೊತ್ತಮೊದಲಾಗಿ ತನ್ನ ನೆಲದಲ್ಲಿ ಹುಟ್ಟಿಕೊಂಡು ಕಾರ್ಯಾ ಚರಿಸುತ್ತಿರುವ ಭಯೋತ್ಪಾದನೆ ಯನ್ನು ದಮನ ಮಾಡಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾಕೀತು ಮಾಡಿದ್ದಾರೆ.
ಫೆ. 24 ಮತ್ತು 25ರಂದು ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಈ ಪ್ರವಾಸ ಹತ್ತಿರವಾಗುತ್ತಿರುವಂತೆಯೇ ಅಮೆರಿಕದಿಂದ ಪಾಕಿಸ್ಥಾನಕ್ಕೆ ಈ ಸಂದೇಶ ರವಾನೆಯಾಗಿರುವುದು ಮಹತ್ವ ಪಡೆದಿದೆ.
ಶ್ವೇತಭವನದಿಂದ ಅಧಿಕಾರಿಯೊಬ್ಬರು ಈ ಪ್ರಕಟನೆ ಹೊರಡಿಸಿದ್ದಾರೆ.
ಕಾಶ್ಮೀರ ಸಮಸ್ಯೆ ಕುರಿತ ಮಾತುಕತೆಗೆ ಟ್ರಂಪ್ ಮಧ್ಯಸ್ಥಿಕೆ ವಹಿಸುವರೇ ಎಂಬ ಪ್ರಶ್ನೆಗೆ ಉತ್ತರಿಸಿದ ಈ ಹಿರಿಯ ಅಧಿಕಾರಿ, ಭಾರತ -ಪಾಕ್ ನಡುವಣ ಉದ್ವಿಗ್ನತೆಯನ್ನು ಶಮನ ಮಾಡುವ ನಿಟ್ಟಿನಲ್ಲಿ ಅಧ್ಯಕ್ಷರು ಈ ಕಿವಿಮಾತು ಹೇಳಿದ್ದಾರೆ. ಇದು ಎರಡೂ ದೇಶಗಳ ನಡುವಿನ ಭಿನ್ನಾಪ್ರಾಯ ನಿವಾರಣೆಗೆ ಪೂರಕವಾಗುವ ಸಾಧ್ಯತೆಯೂ ಇದೆ ಎಂದು ತಿಳಿಸಿದ್ದಾರೆ.
ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಟ್ರಂಪ್ ಪ್ರಸ್ತಾವ
ಭಾರತ ಭೇಟಿ ವೇಳೆ ಟ್ರಂಪ್ ಅವರು ಪ್ರಧಾನಿ ಮೋದಿ ಜತೆ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚಿಸಲಿದ್ದಾರೆ ಎಂದೂ ಶ್ವೇತಭವನ ಪ್ರಕ ಟಿಸಿದೆ. ಭಾರತದ ಪ್ರಜಾತಾಂತ್ರಿಕ ಸಂಪ್ರದಾಯ ಮತ್ತು ಸಾಂಸ್ಥಿಕ ವ್ಯವಸ್ಥೆ ಬಗ್ಗೆ ಅಮೆರಿಕ ಅಪಾರ ಗೌರವ ಹೊಂದಿದೆ. ಈ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಟ್ರಂಪ್-ಮೋದಿ ನಡುವೆ ಮಾತುಕತೆಗಳು ನಡೆಯಲಿವೆ ಎಂದು ಪ್ರಕಟನೆಯಲ್ಲಿ ಉಲ್ಲೇಖೀಸಲಾಗಿದೆ.