Advertisement

ಡೊಮಿನಿಕನ್‌ ರಿಪಬ್ಲಿಕ್‌: ಕೋವಿಡ್ ಸೋಂಕು ಜಯಿಸಿದ್ದ  ಅಬಿನಾಡರ್‌ ನೂತನ ಅಧ್ಯಕ್ಷ

02:54 PM Jul 07, 2020 | mahesh |

ಸ್ಯಾಂಟೊ ಡೊಮಿಂಗೊ: ಕೋವಿಡ್ ವೈರಸ್‌ನ ಅಟ್ಟಹಾಸದ ನಡುವೆ ನಡೆದ ಡೊಮಿನಿಕನ್‌ ರಿಪಬ್ಲಿಕ್‌ನ ಅಧ್ಯಕ್ಷ ಚುನಾವಣೆಯಲ್ಲಿ ವಿರೋಧ ಪಕ್ಷದ ಅಭ್ಯರ್ಥಿ ಸ್ವತಃ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಲೂಯಿಸ್‌ ಅಬಿನಾಡರ್‌ ಅವರು ಗೆಲ್ಲುವುದು ಖಚಿತವಾಗಿದೆ. ಹೊಸ ನಾಯಕ ಮತ್ತು ಶಾಸಕಾಂಗದ ರಚನೆಗಾಗಿ ಮತದಾರರು ಭಾರೀ ಸಂಖ್ಯೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದರು. ಇದೀಗ ಶೇಕಡಾ 60ರಷ್ಟು ಮತಗಳನ್ನು ಎಣಿಸಲಾಗಿದ್ದು ಅಬಿನಾಡರ್‌ ಭರ್ಜರಿ ಮುನ್ನಡೆಯಲ್ಲಿದ್ದು ಗೆಲ್ಲುವುದು ಖಚಿತವಾಗಿದೆ.

Advertisement

ವಿರೋಧ ಪಕ್ಷವಾದ ಮಾಡರ್ನ್ ರೆವೆಲೂಷನರಿ ಪಾರ್ಟಿ (ಪಿಆರ್‌ಎಂ)ವನ್ನು ಪ್ರತಿನಿಧಿಸಿದ 52ರ ಹರೆಯದ ಅಬಿನಾಡರ್‌ ಈಗಾಗಲೇ ಶೇಕಡಾ 53ರಷ್ಟು ಮತವನ್ನು ಪಡೆದಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಅವರು ಗೆಲ್ಲುವುದು ಖಚಿತವಾಗಿದೆ. ಆಡಳಿತಾರೂಢ ಡೊಮಿನಿಕನ್‌ ಲಿಬರೇಶನ್‌ ಪಾರ್ಟಿ (ಪಿಎಲ್‌ಡಿ)ಯ 59ರ ಹರೆಯದ ಗೋನ್ಸಾಲೊ ಕ್ಯಾಸ್ಟಿಲ್ಲೊ ಅವರು ಶೇಕಡಾ 37ರಷ್ಟು ಮತಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಆರು ಮಂದಿ ಸ್ಪರ್ಧೆಯಲ್ಲಿದ್ದು ಅಬಿನಾಡರ್‌ ಮತ್ತು ಕ್ಯಾಸ್ಟಿಲ್ಲೊ ಅವರಿಬ್ಬರ ನಡುವೆ ಸ್ಪರ್ಧೆ ಕೇಂದ್ರೀಕೃತವಾಗಿದೆ.

ನಾವೀಗ ಹೊಸಭರವಸೆಯೊಂದಿಗೆ ಭಯವನ್ನು ಹೋಗಲಾಡಿಸಿದ್ದೇವೆ ಮತ್ತು ದೃಢವಿಶ್ವಾಸದಿಂದ ಸಂಶಯಗಳನ್ನು ದೂರ ಮಾಡಿದ್ದೇವೆ ಎಂದು ಅಬಿನಾಡರ್‌ ತನ್ನ ಬೆಂಬಲಿಗರಿಗೆ ತಿಳಿಸಿದರು. ಚುನಾವಣೆಗೆ ಮೂರುವರೆ ತಿಂಗಳಿರುವಾಗ ಸ್ವತಃ ಅಬಿನಾಡರ್‌ ಮತ್ತು ಅವರ ಪತ್ನಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಆಬಳಿಕ ಚೇತರಿಸಿಕೊಂಡು ಮತ್ತೆ ಪ್ರಚಾರಕ್ಕೆ ಇಳಿದಿದ್ದರು. ಅವರ ಪ್ರಮುಖ ಎದುರಾಳಿ ಸ್ವಲ್ಪ ಹೊತ್ತಿನ ಬಳಿಕ ಸೋಲನ್ನು ಒಪ್ಪಿಕೊಂಡಿದ್ದಾರೆ.

ಈ ಹಿಂದೆ ಎರಡು ಬಾರಿ ನಾಲ್ಕು ವರ್ಷಗಳ ಅವಧಿ ಪೂರೈಸಿದ್ದ 68ರ ಹರೆಯದ ಮದಿನಾ ಅವರು ಮತ್ತೆ ಚುನಾವಣೆ ಎದುರಿಸಲು ಬಯಸಿದ್ದರು. ಆದರೆ ಈ ಸಂಬಂಧ ಸಾಂವಿಧಾನಿಕ ಬದಲಾವಣೆಗೆ ಸಾಕಷ್ಟುಬೆಂಬಲ ಸಿಗದ ಕಾರಣ ಅವರು ಸ್ಪರ್ಧಿಸಲು ಸಾಧ್ಯವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next