Advertisement

Successful; ದೇಶೀ ನಿರ್ಮಿತ ಯುದ್ಧ ಟ್ಯಾಂಕ್‌ ಛೇದನ ಕ್ಷಿಪಣಿ ವ್ಯವಸ್ಥೆ ಪರೀಕ್ಷೆ ಯಶಸ್ವಿ

12:51 AM Apr 15, 2024 | Team Udayavani |

ಹೊಸದಿಲ್ಲಿ: ದೇಶಿಯವಾಗಿ ಅಭಿವೃದ್ಧಿಪಡಿಸಿದ ಮಾನ ವರೇ ಸಾಗಿಸಲು ಸಾಧ್ಯವಾಗುವ ಯುದ್ಧ ಟ್ಯಾಂಕ್‌ ಧ್ವಂಸ ಕ್ಷಿಪಣಿಯನ್ನು ಭಾರತೀಯ ಸೇನೆ ಯಶಸ್ವಿಯಾಗಿ ರವಿವಾರ ಪರೀಕ್ಷೆ ನಡೆಸಿದೆ. ಪೋಖಾÅನ್‌ ಫೀಲ್ಡ್‌ ಫೈರಿಂಗ್‌ ರೇಂಜ್‌ನಲ್ಲಿ ಈ ಅತ್ಯಾಧುನಿಕ ತಂತ್ರಜ್ಞಾನದ ಟ್ಯಾಂಕ್‌ ವಿರೋಧಿ ಮಾರ್ಗದರ್ಶಿ ಕ್ಷಿಪಣಿ ಶಸ್ತ್ರಾಸ್ತ್ರ ವ್ಯವಸ್ಥೆಯ ಪರೀಕ್ಷೆ ನಡೆಸಲಾಗಿದೆ ಎಂದು ರಕ್ಷಣ ಸಚಿವಾಲಯ ತಿಳಿಸಿದೆ.

Advertisement

ಡಿಆರ್‌ಡಿಒ ಈ ವ್ಯವಸ್ಥೆಯನ್ನು ವಿನ್ಯಾಸ, ಅಭಿವೃದ್ಧಿ ಪಡಿಸಿದ್ದು ಹಗಲು ಮತ್ತು ರಾತ್ರಿ ವೇಳೆ ಕಾರ್ಯಾಚ ರಣೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಸಾಧನೆ ಗಾಗಿ ಭಾರತೀಯ ಸೇನೆ ಮತ್ತು ಡಿಆರ್‌ಡಿಒವನ್ನು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅಭಿನಂದಿಸಿದ್ದಾರೆ. ಪರೀಕ್ಷೆ ಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದನ್ನು ಶೀಘ್ರ ಸೇನೆಗೆ ಸೇರ್ಪಡೆಗೊಳಿಸುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next