Advertisement
ವೀಸಾ ಸೇವೆಗಳ ಉಪಸಹಾಯಕ ಕಾರ್ಯದರ್ಶಿ ಜ್ಯೂಲಿ ಸ್ಟಫ್ಟ್ ಈ ಕುರಿತು ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ. ಈ ವೇಳೆ ಭಾರತದಲ್ಲಿ ಅಮೆರಿಕದ ಉದ್ಯೋಗ ವೀಸಾಗಳಿಗೆ ಭಾರೀ ಬೇಡಿಕೆ ಇದೆ. ಅರ್ಜಿದಾರರು ತಮ್ಮ ಸ್ಲಾಟ್‌ಗಳಿಗಾಗಿ 6,8,12 ತಿಂಗಳುಗಳ ವರೆಗೆ ಕಾಯಬೇಕಾದ ಪರಿಸ್ಥಿತಿ ಇದೆ. ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮಾತ್ರವಲ್ಲದೇ, ನವೀಕರಣಕ್ಕೆ ಅರ್ಜಿ ಸಲ್ಲಿಸುವವರದ್ದು ಇದೇ ಪಾಡಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವೃತ್ತಿಪರರಿಗೆ, ವಲಸಿಗರಿಗೆ ಸಹಾಯವಾಗುವ ನಿಟ್ಟಿನಲ್ಲಿ ಅತ್ಯಂತ ವೇಗದಲ್ಲಿ ವೀಸಾ ನವೀಕರಣಕ್ಕೆ ಅನುವು ಮಾಡಿಕೊಡಲು ದೇಶಿಯವಾಗಿಯೇ ವೀಸಾ ನವೀಕರಣಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಅದರ ಭಾಗವಾಗಿಯೇ ಡಿಸೆಂಬರ್‌ನಲ್ಲಿ ಪ್ರಾಯೋಗಿಕ ಕಾರ್ಯಕ್ರಮ ನಡೆಯಲಿದೆ ಎಂದಿದ್ದಾರೆ.
ಭಾರತೀಯ ವೃತ್ತಿಪರರು ಭಾರತಕ್ಕೆ ಬಂದು ಅರ್ಜಿ ಸಲ್ಲಿಸಿ ವೀಸಾ ನವೀಕರಣಕ್ಕೆ ಕಾಯುವ ಬದಲು ಅಮೆರಿಕದಲ್ಲೇ ಅಲ್ಲಿನ ವಿದೇಶಾಂಗ ಸಚಿವಾಲಯ ವೀಸಾಗಳ ನವೀಕರಣವನ್ನು ನಡೆಸಲಿದೆ. ಇದಕ್ಕಾಗಿ ಡಿಸೆಂಬರ್‌ನಿಂದ 3 ತಿಂಗಳಿನವರೆಗೆ ಅಭಿಯಾನ ನಡೆಯಲಿದೆ. ಈ ವೇಳೆ ಒಟ್ಟು 20,000 ವಿದೇಶಿಗಳಿಗೆ ವೀಸಾ ನೀಡಲು ಯೋಜಿಸಲಾಗಿದೆ ಎಂದು ಜ್ಯೂಲಿ ತಿಳಿಸಿದ್ದಾರೆ.