ಹೊಸದಿಲ್ಲಿ: ಭಾರತೀಯ ಮದ್ಯ ಕಂಪೆನಿ ಗಳಿಗೆ ಸಂತೋಷ ನೀಡುವ ಅಂಕಿಸಂಖ್ಯೆ ಯೊಂದು ಹೊರಬಿದ್ದಿದೆ. 2023ರ ಮದ್ಯ ಮಾರಾಟದಲ್ಲಿ ಭಾರತೀಯ ಕಂಪೆನಿ ಗಳು, ವಿದೇಶಿ ಕಂಪೆನಿ ಗಳನ್ನು ಮೀರಿನಿಂತಿವೆ. ಕಳೆದ ವರ್ಷ ಭಾರತದಲ್ಲಿ ಮಾರಾಟವಾದ ಮದ್ಯ ದಲ್ಲಿ ಶೇ.53 ಪಾಲು ಭಾರತೀಯ ಕಂಪೆನಿಗಳಿಗೆ ಸೇರಿವೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹದ್ದೊಂದು ಸಾಧನೆ ದಾಖಲಾಗಿದೆ. ಜಾಗತಿಕ ದೈತ್ಯ ಕಂಪೆನಿಗಳಾದ ಗ್ಲೆನ್ಲಿವೆಟ್, ಮೆಕಾಲನ್, ಲಗಾವುಲಿನ್, ಟಾಲಿಸ್ಕರ್‌ನಂತಹ ದೈತ್ಯ ಕಂಪೆನಿಗಳನ್ನು ಭಾರತೀಯ ಕಂಪೆನಿಗಳು ಹಿಂದೆ ಹಾಕಿವೆ.
ಸಿಐಎಬಿಸಿ (ಭಾರತೀಯ ಮದ್ಯ ಕಂಪೆನಿಗಳ ಒಕ್ಕೂಟ) ಬಿಡುಗಡೆ ಮಾಡಿದ ಅಂಕಿಸಂಖ್ಯೆಗಳ ಪ್ರಕಾರ, ಒಟ್ಟು ದೇಶೀಯ ಮಾರಾಟದಲ್ಲಿ ಭಾರ ತೀಯ ಕಂಪೆನಿಗಳ ಪಾಲು ಶೇ.53. ಕಳೆದ ವರ್ಷ ಒಟ್ಟು 6,75,000 ಕೇಸ್‌ಗಳು (ಒಂದು ಕೇಸ್‌ನಲ್ಲಿ 9 ಲೀಟರ್ ಮದ್ಯವಿರುತ್ತದೆ) ಮಾ ರಾಟವಾಗಿವೆ. ಅದರಲ್ಲಿ 3,45,000 ಕೇಸ್‌ಗಳು ಭಾರತೀಯ ಕಂಪೆ ನಿಗಳಿಗೆ ಸೇರಿವೆ. ಉಳಿದ 3.3 ಲಕ್ಷ ಕೇಸ್‌ಗಳು ಸ್ಕಾಟ್ಲೆಂಡ್ ಮತ್ತು ಇತರ ದೇಶಗಳಿವೆ ಸೇರಿವೆ.
ಶೇ.23 ಏರಿಕೆ: ಸಿಐಎಬಿಸಿ ಪ್ರಧಾನ ಕಾರ್ಯದರ್ಶಿ ವಿನೋದ್ ಗಿರಿ ಈ ಬಗ್ಗೆ ಹಲವು ಮಹತ್ವದ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಭಾರತೀಯ ಕಂಪೆನಿಗಳ ಉತ್ಪನ್ನ ಮಾರಾಟ ಪ್ರಮಾಣ ಶೇ.23 ಹೆಚ್ಚಿದೆ. ಆಮದಾದ ಮದ್ಯದ ಮಾರಾಟ ಪ್ರಮಾಣ ಶೇ.11ರಷ್ಟು ಮಾತ್ರ ಹೆಚ್ಚಾಗಿದೆ ಎಂದು ವಿನೋದ್ ಗಿರಿ ಹೇಳಿದ್ದಾರೆ.