Advertisement

ಕೋವಿಡ್ 19 : ದೇಶೀಯ ವಿಮಾನಯಾನ ಇನ್ಮುಂದೆ ದುಬಾರಿ..!

02:41 PM May 30, 2021 | Team Udayavani |

ನವ ದೆಹಲಿ : ದೇಶೀಯ ವಿಮಾನಗಳ ಮೇಲಿನ ಕಡಿಮೆ ಅಂತರದ ಪ್ರಯಾಣ ದರದ ಮಿತಿಯನ್ನು ಶೇಕಡ 13 ರಿಂದ 16 ಕ್ಕೆ ಏರಿಸಲು ನಾಗರಿಕ ವಿಮಾನಯಾನ ಸಚಿವಾಲಯ  ನಿರ್ಧರಿಸಿದೆ.

Advertisement

ದೇಶದೊಳಗಿನ ವಿಮಾನಯಾನ ದುಬಾರಿಯಾಗಲಿದೆ. ನೂತನ ನೀತಿ ಜೂನ್ 1 ರಿಂದ ಜಾರಿಗೆ ಬರಲಿರುವ ಕಾರಣ ವಿಮಾನಯಾನ ಸಚಿವಾಲಯ ಈ ನಿರ್ಧಾರಕ್ಕೆ ಬಂದಿದೆ.

40 ನಿಮಿಷಗಳಿಂತ ಕಡಿಮೆ ಅವಧಿ ಇರುವ ದೇಶದ ಒಳಗಿನ ವಿಮಾನಯಾನದ ವೆಚ್ಚ ದುಬಾರಿಯಾಗಲಿದ್ದು, 2,300 ರೂಪಾಯಿಗಳಿಂದ 2,600 ರೂಪಾಯಿಗಳಿಗೆ ಏರಿಸಲಾಗಿದೆ. ಈಗಿರುವ ದರದ ಶೇಕಡಾ 13 ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ : ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ ಪ್ರೇಮಲೋಕದ ದೊರೆ  

2,900 ರೂ ವೆಚ್ಚದಲ್ಲಿ 40 ನಿಮಿಷದಿಂದ ಒಂದು ಗಂಟೆಯ ನಡುವಿನ ವಿಮಾನಯಾನವನ್ನು 3,300 ರೂ. ಗೆ ಏರಿಸಲಾಗಿದೆ.  ಇನ್ನು,  60 ರಿಂದ 90 ನಿಮಿಷಗಳ ನಡುವಿನ ವಿಮಾನಯಾನಕ್ಕೆ 4,000 ರೂ, 90 ರಿಂದ 120 ನಿಮಿಷಗಳ ವಿಮಾನಯಾನಕ್ಕೆ 4,700 ರೂ, 150 ರಿಂದ 180 ನಿಮಿಷಗಳ ವಿಮಾನ ಯಾನಕ್ಕೆ 6,100 ರೂ. ಹಾಗೂ 180 ರಿಂದ 210 ನಿಮಿಷಗಳ ವಿಮಾನಯಾನಕ್ಕೆ 7,400 ರೂ. ನಿಗದಿಪಡಿಸಲು ಸಚಿವಾಲಯ ನಿರ್ಧರಿಸಿದೆ.

Advertisement


ಈ ಬಗ್ಗೆ ಪ್ರತಿಕ್ರಿಯೆ ನಿಡಿದ ವಿಮಾನಯಾನ ಸಚಿವಾಲಯ, ಕೋವಿಡ್ ಸೋಂಕಿನ ಕಾರಣದಿಂದಾಗಿ ವಿಮಾನ ಮಾಡುವ  ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿರುವುದೇ ವಿಮಾನಯಾನ ದರದ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.

“ದೇಶಾದ್ಯಂತ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಹಠಾತ್ ಏರಿಕೆ, ಪ್ರಯಾಣಿಕರ ಸಂಖ್ಯೆ ಕುಸಿದಿರುವುದನ್ನು  ಗಮನದಲ್ಲಿಟ್ಟುಕೊಂಡು, ಈಗಿರುವ ಶೇಕಡಾ .80 ರಷ್ಟು ಸಾಮರ್ಥ್ಯದ ಕ್ಯಾಪ್ ನನ್ನು ಶೇಕಡಾ 50 ರಷ್ಟು ಸಾಮರ್ಥ್ಯ ಎಂದು ಪರಿಗಣಿಸಬಹುದು” ಎಂದು ಸಚಿವಾಲಯದ ಆದೇಶ ಹೇಳಿದೆ.

ಇದನ್ನೂ ಓದಿ :  ತೆಂಕಿಲ : ಮಹಿಳೆಯೋರ್ವರ ಕರಿಮಣಿ ಸರ ಎಳೆದು ಬೈಕ್ ನಲ್ಲಿ ಪರಾರಿಯಾದ ಅಪರಿಚಿತರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next