ಹೊಸದಿಲ್ಲಿ: ಬಿಸಿಸಿಐ 2023-24ರ ದೇಶಿ ಕ್ರಿಕೆಟ್ ಪಂದ್ಯಾವಳಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದು ದುಲೀಪ್ ಟ್ರೋಫಿ ಪಂದ್ಯಾವಳಿಯೊಂದಿಗೆ ಜೂ. 28ರಂದು ಮೊದಲ್ಗೊಳ್ಳಲಿದೆ.
ಆದರೆ ಪ್ರತಿಷ್ಠಿತ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಮುಂದಿನ ವರ್ಷದ ತನಕ ಕಾಯಬೇಕು. ಇದು ಜನವರಿ 5ರಂದು ಆರಂಭವಾಗುತ್ತದೆ.
ದುಲೀಪ್ ಟ್ರೋಫಿ ಪಂದ್ಯಾವಳಿ 6 ವಲಯಗಳ ತಂಡಗಳ ನಡುವೆ ಸಾಗಲಿದೆ. ಬಳಿಕ ದೇವಧರ್ ಟ್ರೋಫಿ ಕ್ರಿಕೆಟ್ (ಜು. 24-ಆ. 3). ಇರಾನಿ ಕಪ್ (ಅ. 1-15), ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ (ಅ. 16.-ನ. 6) ಮತ್ತು ವಿಜಯ್ ಹಜಾರೆ ಟ್ರೋಫಿ (ನ. 23-ಡಿ. 15) ಪಂದ್ಯಾವಳಿಯನ್ನು ಆಡಲಾಗುವುದು.
ರಣಜಿ ಟ್ರೋಫಿ ಎಂದಿನಂತೆ ಎಲೈಟ್ ಹಾಗೂ ಪ್ಲೇಟ್ ಗ್ರೂಪ್ ಮಾದರಿಯಲ್ಲಿ ನಡೆಯಲಿದೆ. ಎಲೈಟ್ ಲೀಗ್ ಪಂದ್ಯಗಳು ಜ. 5ರಿಂದ ಫೆ. 19ರ ತನಕ, ನಾಕೌಟ್ ಪಂದ್ಯಗಳು ಫೆ. 23ರಿಂದ ಮಾ. 14ರ ತನಕ ಸಾಗಲಿವೆ. ಪಂದ್ಯಾವಳಿಯ ಅವಧಿ 70 ದಿನಗಳು. 4 ಎಲೈಟ್ ಗ್ರೂಪ್‌ಗ್ಳಲ್ಲಿ ತಲಾ 8 ತಂಡಗಳು, ಏಕೈಕ ಪ್ಲೇಟ್ ಗ್ರೂಪ್‌ನಲ್ಲಿ 6 ತಂಡಗಳಿವೆ.