ಡೊಂಬಿವಲಿ, ಫೆ. 20: ಡೊಂಬಿವಲಿ ತುಳುಕೂಟದ ವತಿಯಿಂದ ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮವು ಫೆ. 12ರಂದು ಡೊಂಬಿವಲಿ ಪಶ್ಚಿಮದ ಜಾನಕಿ ಮಂಗಳ ಕಾರ್ಯಾ ಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಆರ್. ಬಿ. ಶೆಟ್ಟಿ ದಂಪತಿ ಹಾಗೂ ರವಿ ಸನಿಲ್, ಕುಶಾ ಸನಿಲ್ ಹಾಗೂ ನಿತೀಶ್ ಹಾಗೂ ಅಕ್ಷತಾ ಪೂಜಾರಿ ದಂಪತಿಗಳನ್ನು ಗಣ್ಯರ ಉಪಸ್ಥಿತಿಯಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.
ಗಾಯತ್ರಿ ಪರಿವಾರದ ಜಯ ಲಕ್ಷ್ಮೀ ಶೆಟ್ಟಿ, ಡೊಂಬಿವಲಿ ಕರ್ನಾಟಕ ಸಂಘದ ವಾಚನಾಲಯ ವಿಭಾಗ ಕಾರ್ಯಾಧ್ಯಕ್ಷೆ ವಿಮಲಾ ವಿ. ಶೆಟ್ಟಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕೃಷಿ¡ ಶೆಟ್ಟಿ, ಪೂರ್ಣಿಮಾ ಸತೀಶ್ ಶೆಟ್ಟಿ, ಸುಮಿತ್ರಾ ಆರ್.ಭಂಡಾರಿ, ಅನಿತಾ ಭಂಡಾರಿ, ಸೌಜನ್ಯಾ ಕೋಟ್ಯಾನ್, ಲತಾ ಆನಂದ ಶೆಟ್ಟಿ, ಕುಶಾ ಸನಿಲ್, ದಯಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಹೇಮಂತ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಗೀತಾ ಮೆಂಡನ್ ಮತ್ತು ಶೋಭಾ ಪೂಜಾರಿ ಪ್ರಾರ್ಥನೆ ಗೈದರು. ಡೊಂಬಿವಲಿ ತುಳುಕೂಟದ ಕಾರ್ಯದರ್ಶಿ ಸಂಜೀವ ಎಕ್ಕಾರು ಕಾರ್ಯ ಕ್ರಮ ನಿರ್ವಹಿಸಿದರು. ನ್ಯಾಯವಾದಿ ಆರ್. ಎಂ. ಭಂಡಾರಿ, ಹರೀಶ್ ಶೆಟ್ಟಿ, ಆನಂದ ಶೆಟ್ಟಿ ಎಕ್ಕಾರು, ಮಿತ್ರಪಟ್ಣ ನಾರಾಯಣ ಬಂಗೇರ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಉದಯಾ ಶೆಟ್ಟಿ, ದಯಾ ಶೆಟ್ಟಿ, ಗೀತಾ ಮೆಂಡನ್, ಶೋಭಾ ಪೂಜಾರಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.