Advertisement

ಡೊಂಬಿವಲಿ ಸಿರಿನಾಡ ವೆಲ್ಫೇರ್‌ ಅಸೋ.72ನೇ ಸ್ವಾತಂತ್ರ್ಯ ದಿನಾಚರಣೆ

04:00 PM Aug 23, 2018 | Team Udayavani |

ಡೊಂಬಿವಲಿ: ಸಿರಿನಾಡ ವೆಲ್ಫೇರ್‌ ಅಸೋಸಿಯೇಶನ್‌ ಡೊಂಬಿವಲಿ ವತಿಯಿಂದ 72ನೇ ಸ್ವಾತಂತ್ರ್ಯ ದಿನಾಚರಣೆಯು ಆ. 15ರಂದು ಸಂಘದ ಕಚೇರಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಸಿರಿನಾಡ ವೆಲ್ಫೆàರ್‌ ಅಸೋಸಿಯೇ ಶನ್‌ ಡೊಂಬಿವಲಿ ಇದರ ಅಧ್ಯಕ್ಷ ಆರ್‌. ಕೆ. ಸುವರ್ಣ ಅವರು ಧ್ವಜಾರೋಹಣಗೈದು ಶುಭಹಾರೈಸಿ ದರು. ಸಂಘದ ಪದಾಧಿಕಾರಿಗಳು, ಕನ್ನಡ ಕಲಿಕಾ ತರಗತಿಯ ವಿದ್ಯಾರ್ಥಿಗಳು ಸ್ವಾತಂತ್ರÂ ದಿನಾಚರಣೆಯ ಮಹತ್ವದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ದಾಮೋದರ ಸುವರ್ಣ, ಕೋಶಾಧಿಕಾರಿ ಸದಾಶಿವ ಸಾಲ್ಯಾನ್‌, ಜತೆ ಕೋಶಾಧಿಕಾರಿ ವಿಠಲ ಅಮೀನ್‌, ಸಲಹೆಗಾರರಾದ ರಮೇಶ್‌ ಕುಕ್ಯಾನ್‌, ಸಮಾಜ ಸೇವಕ ದಯಾನಂದ ಸುವರ್ಣ, ಮಹಿಳಾ ವಿಭಾಗದ ಪದಾಧಿಕಾರಿಗಳು, ಯುವ ವಿಭಾಗದ ಪದಾಧಿಕಾರಿಗಳು, ಸಂಘದ ಸದಸ್ಯರು, ಕನ್ನಡ ಕಲಿಕಾ ತರಗತಿಯ ಸದಸ್ಯರು ಉಪಸ್ಥಿತರಿದ್ದರು. ದಿ| ಎಸ್‌. ಎಂ. ಪಾಲನ್‌ ಅವರ ಧರ್ಮಪತ್ನಿ ಸುನೀತಾ ಪಾಲನ್‌ ಮತ್ತು ಮಕ್ಕಳ ವತಿಯಿಂದ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next