Advertisement
ಮಾ. 21ರಂದು ಡೊಂಬಿವಲಿ ಪಶ್ಚಿಮದ ಠಾಕೂರ್‌ವಾಡಿಯ ಕ್ಷಿತಿಜ ಬುದ್ಧಿಮಾಂದ್ಯ ಶಾಲಾ ಸಭಾಗೃಹದಲ್ಲಿ ನಡೆದ ಸಿರಿನಾಡ ವೆಲ್ಫೇರ್ ಅಸೋಸಿಯೇಶನ್ ಡೊಂಬಿವಲಿ ಇದರ 18ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇನ್ನೋರ್ವ ಅನಾರೋಗ್ಯ ಪೀಡಿತರೋರ್ವರು ಸಹಕರಿಸುವಂತೆ ಮನವಿ ಮಾಡಿದ್ದು, ಅವರಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸಲಾಗುವುದು. ಸಂಘದ ಸದಸ್ಯರೆಲ್ಲರೂ ಒಮ್ಮತದಿಂದ ಸಮಾಜಪರ ಕಾರ್ಯಗಳಿಗೆ ಕೈಜೋಡಿಸಬೇಕು ಎಂದರು.
Related Articles
Advertisement
ಗೌರವ ಪ್ರಧಾನ ಕಾರ್ಯದರ್ಶಿ ವಿಟ್ಠಲ್ ಅಮೀನ್ ವಾರ್ಷಿಕ ವರದಿ ಮತ್ತು ಗತ ವಾರ್ಷಿಕ ವರದಿ ವಾಚಿಸಿ, ಅಶೋಕ್ ಅಮೀನ್ ಸೂಚನೆಯೊಂದಿಗೆ ರಾಮಕೃಷ್ಣ ಕರ್ಕೇರ ಅವರ ಅನುಮೋದನೆಯೊಂದಿಗೆ ಅಂಗೀಕರಿಸಲಾಯಿತು. ಕೋಶಾಧಿಕಾರಿ ಸದಾಶಿವ ಸಾಲ್ಯಾನ್ ಅವರು ಲೆಕ್ಕಪತ್ರ ಮಂಡಿಸಿದ್ದು, ಧನಂಜಯ ಮೂಳೂರು ಸೂಚನೆ ಮತ್ತು ಭಾರತಿ ಶೆಟ್ಟಿ ಅವರ ಅನುಮೋದನೆಯೊಂದಿಗೆ ಅಂಗೀಕರಿಸಲಾಯಿತು. ಲೆಕ್ಕ ಪರಿಶೋಧಕರನ್ನಾಗಿ ನವೀನ್ ದೇಡಿಯಾ ಕಂಪೆನಿಯನ್ನು ಆಯ್ಕೆ ಮಾಡಲಾಯಿತು. ಆಂತರಿಕ ಲೆಕ್ಕ ಪರಿಶೋಧಕ ಶರತ್ ಕೆ. ಶೆಟ್ಟಿ ಅವರನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ಅಜೆಕಾರು ಜಯ ಶೆಟ್ಟಿ, ಕಾರ್ಯದರ್ಶಿ ವಿಟuಲ ಅಮೀನ್, ಕೋಶಾಧಿಕಾರಿ ಸದಾಶಿವ ಸಾಲ್ಯಾನ್, ಜತೆ ಕಾರ್ಯದರ್ಶಿ ರವೀಂದ್ರ ಶೆಟ್ಟಿ, ಜತೆ ಕೋಶಾಧಿಕಾರಿ ಕೆ. ಕೆ ಸಾಲ್ಯಾನ್, ಸಲಹೆಗಾರರಾದ ರಾಜೀವ ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉದಯಾ ಜೆ. ಶೆಟ್ಟಿ, ಕಾರ್ಯದರ್ಶಿ ಚಿತ್ರಾ ಸಾಲ್ಯಾನ್, ಕೋಶಾಧಿಕಾರಿ ಸುಮಂಗಲಾ ಸುವರ್ಣ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿನೋದ್ ಕರ್ಕೇರ, ಕಾರ್ಯದರ್ಶಿ ಸಚಿನ್ ಕೋಟ್ಯಾನ್ ಉಪಸ್ಥಿತರಿದ್ದರು. ದಾಮೋದರ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ವಿಟuಲ ಅಮೀನ್ ವಂದಿಸಿದರು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಜಾತಿ, ಮತ ಭೇದವಿಲ್ಲದೆ ಒಮ್ಮತದಿಂದ ಒಗ್ಗೂಡಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳನ್ನು ಶಿಸ್ತುಬದ್ಧವಾಗಿ ನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿರುವ ಈ ಸಂಸ್ಥೆಯ ಸಲಹೆಗಾರನಾಗಿ ಕಾರ್ಯನಿರ್ವಹಿಸಲು ನನಗೆ ಹೆಮ್ಮೆಯಾಗುತ್ತಿದೆ. ಕೊರೊನಾ ಸಂದರ್ಭದಲ್ಲೂ ಧೃತಿಗೆಡದೆ ಡೊಂಬಿವಲಿ ಪರಿಸರದ ಆರ್ಥಿಕವಾಗಿ ಹಿಂದುಳಿದ ತುಳು, ಕನ್ನಡಿಗರಿಗೆ ಸಹಕರಿಸಿ ಮಾನವೀಯತೆ ಮೆರೆದಿದೆ. ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷನಾಗಿ ಪುನರಾಯ್ಕೆಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ನನ್ನಿಂದಾಗುವ ಎಲ್ಲ ರೀತಿಯ ಸಹಾಯ, ಸಹಕಾರ ಸಂಸ್ಥೆಗೆ ಸದಾಯಿದೆ. –ಇಂದ್ರಾಳಿ ದಿವಾಕರ ಶೆಟ್ಟಿ , ಸಲಹೆಗಾರರು, ಸಿರಿನಾಡ ವೆಲ್ಫೇ ರ್ ಅಸೋಸಿಯೇಶನ್
ಸಮಾಜಪರ ಕೆಲಸಗಳಿಂದ ಎಲ್ಲರ ಮನೆ ಮಾತಾಗಿರುವ ಸಿರಿನಾಡ ವೆಲ್ಫೆàರ್ ಅಸೋಸಿಯೇಶನ್‌ನ ಪ್ರಗತಿಗೆ ಕಾರಣಕರ್ತರಾದ ಪದಾಧಿಕಾರಿಗಳು, ಸದಸ್ಯರು ಅಭಿನಂದನಾರ್ಹರು. ಸಂಸ್ಥೆಗಳ ಉಪಸಮಿತಿಗಳು ಪ್ರಧಾನ ಸಮಿತಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು, ಸದಸ್ಯರೆಲ್ಲರು ಒಂದೇ ತಾಯಿಯ ಮಕ್ಕಳಂತೆ ಸಹಬಾಳ್ವೆಯೊಂದಿಗೆ ಸಂಸ್ಥೆಯನ್ನು ಒಗ್ಗಟ್ಟಿನಿಂದ ಮುನ್ನಡೆಸೋಣ. ಇತ್ತೀಚೆಗೆ ಬಂಟರ ಸಂಘದ ಜತೆ ಕಾರ್ಯದರ್ಶಿಯಾಗಿ ಆಯ್ಕೆಯಾದ ಇಂದ್ರಾಳಿ ದಿವಾಕರ ಶೆಟ್ಟಿ ಮತ್ತು ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಸುಕುಮಾರ್ ಎನ್. ಶೆಟ್ಟಿ ಅವರಿಗೆ ಅಭಿನಂದನೆಗಳು. –ವಸಂತ್ ಸುವರ್ಣ, ಸಲಹೆಗಾರರು ಸಿರಿನಾಡ ವೆಲ್ಫೇರ್ ಅಸೋಸಿಯೇಶನ್