Advertisement
ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿ ದಶಮಾನೋತ್ಸವದ ಅಂಗವಾಗಿ ಡೊಂಬಿವಲಿ ಪೂರ್ವದ ಶ್ರೀ ಗಣೇಶ ಮಂದಿರದ ವಿನಾಯಕ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಶ್ರೀ ಪುರಂದರದಾಸರ ಆರಾಧನೆ ಮತ್ತು ದಾಸರ ಪದಗಳ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನಾವು ಪರಮಾತ್ಮನ ದಾಸನಾಗಬೇಕಾದರೆ ಆತನನ್ನು ಸಂಪೂರ್ಣವಾಗಿ ಅರಿಯಬೇಕು. ಭಗವಂತನನ್ನು ಕಣ್ಣೀರು ಬೆರೆತು ಕೂಗಿದಾಗ ಆತ ನಮ್ಮನ್ನು ರಕ್ಷಿಸುತ್ತಾನೆ. ಲೋಭಿಯಾದವನಿಗೆ ತನ್ನವರು ಯಾರೂ ಇರುವುದಿಲ್ಲ. ನಾವೆಲ್ಲರು ಮೋಹ ಹಾಗೂ ಮಾಯೆಯಿಂದ ದೂರವಿದ್ದು, ಪರಿಶುದ್ಧ ಜೀವನ ಸಾಗಿಸಬೇಕು. ದಶಮಾನೋತ್ಸವ ಸಂಭ್ರಮ ದಲ್ಲಿರುವ ಮಹಾನಗರ ಕನ್ನಡ ಸಂಸ್ಥೆ ನಮ್ಮ ಕನ್ನಡ ನಾಡಿನ ಶ್ರೀಮಂತ ಸಾಹಿತ್ಯ ಸಂಸ್ಕೃತಿ, ಕಲೆ ಹಾಗೂ ಧರ್ಮ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಕಾರ್ಯದಲ್ಲಿ ಸಕ್ರಿಯವಾಗಿರಲಿ ಎಂದರು.
Related Articles
Advertisement
ಸಂಸ್ಥೆಯ ಉಪಾಧ್ಯಕ್ಷ ಡಾ| ಬಿ. ಆರ್. ದೇಶಪಾಂಡೆ, ವೆಂಕಟೇಶ್ ಕುಲಕರ್ಣಿ ಹಾಗೂ ಸೋಮಶೇಖರ ಮಸಳಿ ಗಣ್ಯರನ್ನು ಪರಿಚಯಿಸಿದರು, ಪ್ರಕಾಶ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ| ಅಜೀತ ಉಮರಾಣಿ ವಂದಿಸಿದರು. ಗಣ್ಯರಾದ ಗೋಪಾಲ್ ಶೆಟ್ಟಿ, ಹರೀಶ್ ಶೆಟ್ಟಿ, ಗುರುರಾಜ ನಾಯಕ್, ಡಾ| ವಿ. ಎಸ್. ಅಡಿಗಲ…, ಡಾ| ದಿಲೀಪ್ ಕೊಪರ್ಡೆ, ಪ್ರಕಾಶ ಭಟ್ ಕಾನಿಂಗೆ, ರಮೇಶ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಜೀವನದಲ್ಲಿ ಗುರಿ, ಗುರು ಅದರ ಜತೆಗೆ ಸಾಧಿಸುವ ಛಲವಿದ್ದರೆ ಯಾವ ಕಾರ್ಯವೂ ಅಸಾಧ್ಯವಲ್ಲ. ಒಂದು ಕಾಲದಲ್ಲಿ ಮಹಿಳೆ ಅಡುಗೆ ಕೋಣೆ ಹಾಗೂ ಮನೆಗೆಲಸಕ್ಕಷ್ಟೇ ಸೀಮಿತವಾಗಿದ್ದಳು. ಆದರೆ ಇಂದು ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ವಿಶಿಷ್ಟ ಸ್ಥಾನ ಹೊಂದಿದ್ದಾರೆ. ಇದಕ್ಕೆ ಪುರುಷರ ಪ್ರೋತ್ಸಾಹವೂ ಕಾರಣವಾಗಿದೆ. ಮಹಾನಗರ ಕನ್ನಡ
ಸಂಸ್ಥೆ ನೀಡಿದ ಈ ಪ್ರಶಸ್ತಿಯನ್ನು ಹೃದಯಪೂರ್ವಕವಾಗಿ ಸ್ವೀಕರಿಸಿ ನನ್ನ ಪರಿವಾರಕ್ಕೆ ಅರ್ಪಿಸುತ್ತೇನೆ. ದಶಮಾನೋತ್ಸವದ ಸಂಭ್ರಮದಲ್ಲಿರುವ ಮಹಾನಗರ ಕನ್ನಡ ಸಂಸ್ಥೆ ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಿ ಕನ್ನಡದ ಕೈಂಕರ್ಯಕ್ಕೆ ಸದಾ ಬದ್ದವಾಗಿರಲಿ.–ಪೂಜಾ ಉಮರಾಣಿ, ಸಮ್ಮಾನಿತರು
–ಚಿತ್ರ-ವರದಿ: ಗುರುರಾಜ ಪೋತನೀಸ್