ಡೊಂಬಿವಲಿ: ಇಂದಿನ ಮಕ್ಕಳೆ ನಾಳಿನ ಸತ್ಪ್ರಜೆಗಳಾಗಿದ್ದು, ಸಮೃದ್ಧ ಭಾರತ ನಿರ್ಮಾಣಕ್ಕಾಗಿ ಇಂದಿನಿಂದಲೇ ಅವರನ್ನು ಸುಸಂಸ್ಕೃತರನ್ನಾಗಿಸುವ ಪ್ರಯತ್ನವನ್ನು ಪಾಲಕರು ಹಾಗೂ ಶಿಕ್ಷಕರು ಮಾಡಬೇಕಾಗಿದ್ದು, ಪಾಲಕರು ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸಬೇಕು ಎಂದು ವೈದ್ಯ ಡಾ| ಸುನೀಲ್ ಪುಣತಾಂಬೇಕರ್ ನುಡಿದರು.
ಡಿ. 19 ರಂದು ಡೊಂಬಿವಲಿ ಪೂರ್ವದ ಸಾವಿತ್ರಿ ಭಾಯಿ ಫುಲೆ ಸಭಾಗೃಹದಲ್ಲಿ ಡೊಂಬಿವಲಿ ಕರ್ನಾಟಕ ಸಂಘ ಸಂಚಾಲಿತ ಮಂಜನಾಥ ವಿದ್ಯಾಲಯ ಪ್ರಾಥಮಿಕ ವಿಭಾಗದ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಇವರು, ಕನ್ನಡ ಮತ್ತು ಮರಾಠಿ ಭಾಷಿಕರ ಅವಿನಾಭಾವ ಸಂಬಂಧವನ್ನು ಕನ್ನಡಿಗರು ತಮ್ಮ ತಾಯ್ನಾಡಿನ ಸಂಸ್ಕೃತಿಯನ್ನು ಮರಾಠಿಗರಿಗೆ ಪರಿಚಯಿಸುವುದರ ಜೊತೆಗೆ ಮರಾಠಿ ಬಾಂಧವರೊಂದಿಗೆ ಸಾಮರಸ್ಯದ ಬದುಕು ಸಾಗಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಡೊಂಬಿವಲಿ ಕರ್ನಾಟಕ ಸಂಘ ಮರಾಠಿ ಮಣ್ಣಿನಲ್ಲಿ ಮಾಡುತ್ತಿರುವ ಜ್ಞಾನ ದಾಸೋಹದ ಕಾರ್ಯ ಅಭಿನಂದನೀಯ ಮತ್ತು ಅನುಕರಣೀಯವಾಗಿದೆ ಎಂದರು.
ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಅವರು ಮಾತನಾಡಿ, ಕಳೆದ ಐದು ದಶಕಗಳಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಮಂಜುನಾಥ ವಿದ್ಯಾಲಯ ಇವತ್ತು ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇದಕ್ಕೆ ಆಡಳಿತ ಮಂಡಳಿಯ ಜೊತೆಗೆ ಶಿಕ್ಷಕರ ಪರಿಶ್ರಮವು ಅಪಾರವಾಗಿದ್ದು, ಈ ಶಾಲೆಯಲ್ಲಿ ಜ್ಞಾನಾರ್ಜನೆ ಮಾಡಿದ ಮಕ್ಕಳು ನಾಳೆ ಉತ್ತಮ ಅಧಿಕಾರಿಗಳಾಗಿ ಉದ್ದಿಮೆದಾರರಾಗಿ ದೇಶಕ್ಕೆ ಹಾಗೂ ಹೆತ್ತವರಿಗೆ, ಕಲಿತ ಶಾಲೆಗೆ ಕೀರ್ತಿ ತರಬೇಕು ಎಂದು ಕರೆನೀಡಿದರು.
ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾ ಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸುವರ್ಣ ಮಹೋತ್ಸಸವ ಸಂಭ್ರಮದಲ್ಲಿರುವ ಡೊಂಬಿವಲಿ ಕರ್ನಾಟಕ ಸಂಘದ ಸಾಧನೆ ಪ್ರತಿಯೋರ್ವ ಕನ್ನಡಿಗರ ಕೊಡುಗೆಯಾಗಿದೆ. ಮುಂಬರುವ ದಿನಗಳಲ್ಲಿ ಈ-ಲರ್ನಿಂಗ್ ಪ್ರಾರಂಭಿ ಸುವ ಯೋಜನೆ ರೂಪು ಗೊಳ್ಳುತ್ತಿದ್ದು, ಆರ್ಥಿಕ ವಾಗಿ ಹಿಂದುಳಿದ ಮಕ್ಕಳಿಗೆ ನೆರವೆ ನೀಡುವ ಉದ್ದೇಶದಿಂದ ವಿದ್ಯಾ ನಿಧಿ ಯೋಜನೆಯನ್ನು ಶೀಘ್ರ ದಲ್ಲೇ ಪ್ರಾರಂಭವಾಗಲಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ರಶ್ಮೀ ವಾರ್ಷಿಕ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಗಣ್ಯರುಗಳನ್ನು ಗೌರವಿಸಲಾ ಯಿತು. ಸಂಘದ ಉಪಾಧ್ಯಕ್ಷ ಡಾ| ದಿಲೀಪ್ ಕೋಪರ್ಡೆ ಗಣ್ಯರುಗಳನ್ನು ಪರಿಚಯಿಸಿ ದರು. ವೇದಿಕೆಯಲ್ಲಿ ಡಾ| ದಿಲೀಪ್ ಕೋಪರ್ಡೆ, ಡಾ| ವಿಜಯ ಎಂ. ಶೆಟ್ಟಿ, ದೇವದಾಸ್ ಕುಲಾಲ್, ಲೋಕನಾಥ ಶೆಟ್ಟಿ, ರಮೇಶ್ ಕಾಖಂಡಕಿ, ಅಜಿತ್ ಉಮಾರಾಣಿ, ಜಾನಕಿ ಗೌಡ, ರತ್ರಾ ಮುರಳೀಧರನ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಜಗನ್ನಾಥ ಶೆಟ್ಟಿ, ರಾಜೀವ ಭಂಡಾರಿ, ಸುಷ್ಮಾ ಶೆಟ್ಟಿ, ಮಾಧುರಿಕಾ ಬಂಗೇರ, ಸತೀಶ್ ಶೆಟ್ಟಿ, ಶಾಲೆಯ ಗುರುವೃಂದದವರನ್ನು ಗೌರವಿಸಲಾಯಿತು. ಶಾಲಾ ಮಕ್ಕಳು ಪ್ರಾರ್ಥನೆಗೈದರು. ಗಣ್ಯರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಕಿ ನಿತಾ ಅಲೆಕರ ಕಾರRಕ್ರಮ ನಿರ್ವಹಿಸಿದರು. ಮುಖ್ಯ ಶಿಕ್ಷಕಿಯರುಗಳಾದ ಜಾನಕಿ ಗೌಡ ಮತ್ತು ರತ್ನಾ ಮುರಳೀಧರನ್ ಆಯಾಯ ವಿಭಾಗದ ವರದಿ ವಾಚಿಸಿದರು. ಭಾರತಿ ಕದಂ ವಂದಿಸಿದರು. ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳಿಂದ ನೃತ್ಯ ರೂಪಕ, ಗಾಯನ, ನೃತ್ಯ ವೈವಿಧ್ಯ ಪ್ರದರ್ಶನಗೊಂಡಿತು.
ಚಿತ್ರ-ವರದಿ : ಗುರುರಾಜ ಪೋತನೀಸ.