Advertisement

Dollar Earnings: ಭಾರತದಲ್ಲಿ ಗೌತಮ್‌ ಅದಾನಿ ನಂ.1, ಮೌಲ್ಯ 9.62 ಲಕ್ಷ ಕೋಟಿ

01:33 AM Oct 11, 2024 | |

ಹೊಸದಿಲ್ಲಿ: ಫೋರ್ಬ್ಸ್ 100 ಮಂದಿ ಭಾರತೀಯ ಉದ್ಯಮಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಗೌತಮ್‌ ಅದಾನಿ ಗರಿಷ್ಠ ಡಾಲರ್‌ ಗಳಿಕೆದಾರ ಎನಿಸಿಕೊಂಡಿದ್ದಾರೆ. ಅದಾನಿ ಕುಟುಂಬದ ಮೌಲ್ಯ 9.62 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಸೋದರ ವಿನೋದ್‌ ಅದಾನಿ ಅವರ ಜತೆ ಸೇರಿ ಗೌತಮ್‌ ಅದಾನಿ ಅವರ ಮೌಲ್ಯ ಒಂದೇ ದಿನ 3.83 ಲಕ್ಷ ಕೋಟಿ ರೂ. ಏರಿಕೆಯಾಗಿದ್ದು, 2ನೇ ಸ್ಥಾನಕ್ಕೇರಿದ್ದಾರೆ.

Advertisement

9.91 ಲಕ್ಷ ಕೋಟಿ ರೂ. ಮೌಲ್ಯ ಹೊಂದಿರುವ ಮುಖೇಶ್‌ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಅಮೆರಿಕದ ಹಿಂಡನ್‌ಬರ್ಗ್‌ ವರದಿ ಪ್ರಕಟವಾದ ಬಳಿಕ ಕುಸಿತ ಕಂಡಿದ್ದ ಅದಾನಿ ಮೌಲ್ಯ ಇದೀಗ ಮತ್ತೆ ಹಾದಿಗೆ ಮರಳಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತದ 100 ಮಂದಿ ಉದ್ಯಮಿಗಳ ಒಟ್ಟು ಮೌಲ್ಯ ಟ್ರಿಲಿಯನ್‌ ಡಾಲರ್‌ನ ಗಡಿ ದಾಟಿದ್ದು, ದೇಶದ ಶೇ.80ರಷ್ಟು ಶ್ರೀಮಂತರು ಕಳೆದ ವರ್ಷಕ್ಕಿಂತ ಹೆಚ್ಚು ಶ್ರೀಮಂತರಾಗಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next