Advertisement
ನವರಾತ್ರಿ ಸಂಭ್ರಮನವರಾತ್ರಿಯ ಹಬ್ಬದ ಸಮಯದಲ್ಲಿ ಪಾರಂಪರಿಕ ಗೊಂಬೆಗಳನ್ನು ಮನೆ ಮನೆಗಳಲ್ಲಿ ಪ್ರದರ್ಶಿಸುವುದು ಸಂಪ್ರದಾಯ. ಅದನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಗೊಂಬೆ ಹಬ್ಬ, ಮಾಲ್‌ನಲ್ಲಿ ನವರಾತ್ರಿಯ ಸಂಭ್ರಮವನ್ನು ಸೃಷ್ಟಿಸಿದೆ. ಗೊಂಬೆಗಳ ಮೂಲಕ ಪೌರಾಣಿಕ ಹಾಗೂ ಐತಿಹಾಸಿಕ ಕತೆಗಳನ್ನು ಪ್ರಸ್ತುತಪಡಿಸುತ್ತಾ, ಯುವ ಪೀಳಿಗೆಗೆ ಭಾರತದ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ. ಈ ಗೊಂಬೆಗಳು ರಾಮಾಯಣ, ಮಹಾಭಾರತ, ಗ್ರಾಮೀಣ ಜೀವನ ಶೈಲಿ, ಮದುವೆ, ಕುಂಬಾರಿಕೆ, ಜನಪದ ನೃತ್ಯ, ಹಬ್ಬ ಹಾಗೂ ಸುಗ್ಗಿಯ ಸಂಭ್ರಮಗಳನ್ನು ಪ್ರಸ್ತುತಪಡಿಸುತ್ತಿವೆ.
ಸಂಸ್ಕೃತಿ ಗೊಂಬೆ ತಯಾರಿಕಾ ಸಂಸ್ಥೆಯ ಸದಸ್ಯರು ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಕರ್ನಾಟಕ ಹಾಗೂ ಇತರ ಪ್ರದೇಶಗಳಿಂದ ಬಂದವರಾಗಿದ್ದು, ಅವರು ತಮ್ಮೂರಿನ ಕರಕುಶಲ, ರೇಷ್ಮೆ ಮತ್ತು ಇತರೆ ಬಟ್ಟೆಗಳಿಂದ ತಯಾರಿಸಿದ ಅಪರೂಪದ ಗೊಂಬೆಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಗಿನ್ನಿಸ್ ದಾಖಲೆ
ಗುಡಿ ಕೈಗಾರಿಕೆಯಲ್ಲಿ ತಯಾರಾದ ಸುಮಾರು 3 ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನು ಒಂದೇ ಸೂರಿನಿಡಿ ಪ್ರದರ್ಶನಕ್ಕಿಡಲಾಗಿದ್ದು, ಸುಮಾರು 1,500 ಗೊಂಬೆಗಳು ಖರೀದಿಗೆ ಲಭ್ಯ ಇವೆ. ಈ ಮೂಲಕ ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿಸುವ ಗುರಿ ಇದೆ. ಜೊತೆಗೆ, ಪುಸ್ತಕ ಪ್ರಿಯರಿಗಾಗಿ ಸುಮಾರು 10 ಸಾವಿರಕ್ಕೂ ಹೆಚ್ಚು ಪುಸ್ತಕಗಳ, ವಿಶೇಷವಾಗಿ ಮಕ್ಕಳ ಪುಸ್ತಕಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ.
Related Articles
ನಟಿ ರಾಗಿಣಿ ದ್ವಿವೇದಿ ಸೇರಿದಂತೆ, ಬಾನುಲಿ ನಿರೂಪಕರು, ಕ್ರೀಡಾ ಪಟುಗಳು ಹಾಗೂ ಇತರ ಸೆಲೆಬ್ರಿಟಿಗಳು ಗೊಂಬೆಹಬ್ಬದಲ್ಲಿ ಭಾಗವಹಿಸಲಿದ್ದಾರೆ.
Advertisement
ಯಾವಾಗ?: ಆ.17-18ಎಲ್ಲಿ?: ಗರುಡಾ ಮಾಲ್