Advertisement

ಟೆರರಿಸ್ಟ್‌ ಟ್ರೇಲರ್‌ನಲ್ಲಿ ಡಾಲ್ಬಿ ಸೌಂಡ್‌

11:12 AM Sep 02, 2018 | Team Udayavani |

ರಾಗಿಣಿ ಮುಖ್ಯಭೂಮಿಕೆಯಲ್ಲಿರುವ “ಟೆರರಿಸ್ಟ್‌’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗುತ್ತಿದೆ. ಸೆಪ್ಟೆಂಬರ್‌ 02 ರಂದು ಚಿತ್ರದ ಟ್ರೇಲರ್‌ ನಗರದ ಮಂತ್ರಿಮಾಲ್‌ನಲ್ಲಿ ಬಿಡುಗಡೆಯಾಗುತ್ತಿದ್ದು, ನಟ ರಕ್ಷಿತ್‌ ಶೆಟ್ಟಿ ಬಿಡುಗಡೆ ಮಾಡುತ್ತಿದ್ದಾರೆ. ಇದು ನಿರ್ದೇಶಕ ಪಿ.ಸಿ.ಶೇಖರ್‌ಗೆ ಖುಷಿಕೊಟ್ಟಿದೆ. “ರಕ್ಷಿತ್‌ ಶೆಟ್ಟಿಯವರು ನನಗೆ ಆರಂಭದಿಂದಲೂ ಬೆಂಬಲ, ಪ್ರೋತ್ಸಾಹ ಕೊಡುತ್ತಲೇ ಬಂದಿದ್ದಾರೆ.

Advertisement

ಚಿತ್ರದ ಪೋಸ್ಟರ್‌ ಎಲ್ಲವೂ ಅವರಿಗೆ ಇಷ್ಟವಾಗಿದ್ದು, ಈಗ ಟ್ರೇಲರ್‌ ಬಿಡುಗಡೆ ಮಾಡುತ್ತಿದ್ದಾರೆ’ ಎನ್ನುತ್ತಾರೆ ಶೇಖರ್‌. ಶೇಖರ್‌ ಈ ಬಾರಿ ಟ್ರೇಲರ್‌ ನೋಡುವವರಿಗೆ ಸೌಂಡ್‌ ಎಫೆಕ್ಟ್ ಚೆನ್ನಾಗಿರಬೇಕೆಂಬ ಕಾರಣಕ್ಕೆ ಹೊಸ ಪ್ಲ್ರಾನ್‌ ಮಾಡಿದ್ದಾರೆ. ಅದು ಡಾಲ್ಬಿ ಸ್ಟಿರಿಯೋ ಸೌಂಡ್‌. ಚಿತ್ರಮಂದಿರಗಳಲ್ಲಿ ಡಾಲ್ಬಿ ಸೌಂಡ್‌  ಸಾಮಾನ್ಯ. ಆದರೆ ಯುಟ್ಯೂಬ್‌ನಲ್ಲಿ ಮಾತ್ರ ಅಪರೂಪ. ಈಗ “ಟೆರರಿಸ್ಟ್‌’ ಚಿತ್ರದ ಟ್ರೇಲರ್‌ ಅನ್ನು ಯುಟ್ಯೂಬ್‌ನಲ್ಲಿ ಡಾಲ್ಬಿ ಸ್ಟಿರಿಯೋ ಸೌಂಡ್‌ನೊಂದಿಗೆ ನೋಡಬಹುದು.

ಈ ಮೂಲಕ ಹೊಸ ತಂತ್ರಜ್ಞಾನದ ಮೊರೆ ಹೋಗಿದ್ದಾರೆ ನಿರ್ದೇಶಕ ಪಿ.ಸಿ.ಶೇಖರ್‌. “ಯುಟ್ಯೂಬ್‌ನಲ್ಲಿ ಟ್ರೇಲರ್‌ ನೋಡುವವರಿಗೂ ಒಳ್ಳೆಯ ಸೌಂಡ್‌ ಎಫೆಕ್ಟ್ ಸಿಗಬೇಕೆಂಬ ಕಾರಣಕ್ಕೆ ಈ ತಂತ್ರಜ್ಞಾನದ ಮೊರೆ ಹೋಗಿದ್ದೇವೆ’ ಎನ್ನುವುದು ಅವರ ಮಾತು.  ರಾಗಿಣಿ ಈ ಚಿತ್ರದಲ್ಲಿ ರೇಷ್ಮಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ರಾಗಿಣಿ ಸಾಕಷ್ಟು ತಯಾರಿ ಕೂಡಾ ಮಾಡಿಕೊಂಡಿದ್ದಾರಂತೆ.  

ಬಾಂಬ್‌ ಬ್ಲಾಸ್ಟ್‌ ಆದಾಗ ನಡೆಯುವ ಘಟನೆಗಳ ಸುತ್ತ ಈ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ರಾಗಿಣಿ ಬಹುತೇಕ ಒಂದೇ ಕಾಸ್ಟೂéಮ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹೆಚ್ಚು ಮಾತನಾಡುವ ರಾಗಿಣಿಗೆ ಇಲ್ಲಿ ಮಾತು ಕಡಿಮೆ. ಅವರ ಮೌನಕ್ಕೆ ಹಿನ್ನೆಲೆ ಸಂಗೀತದ ಮೂಲಕ ಅರ್ಥ ನೀಡಲಾಗಿದೆಯಂತೆ. ಚಿತ್ರವನ್ನು ಇನ್‌ವೆಂಚರ್‌ ಫಿಲಂಸ್‌ ಬ್ಯಾನರ್‌ ಅಡಿಯಲ್ಲಿ ಅಲಂಕಾರ ಸಂತಾನ ನಿರ್ಮಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next