ತೀರ್ಥಹಳ್ಳಿ: ಕೇಂದ್ರ ಸರ್ಕಾರ ವಿರೋಧ ಪಕ್ಷದವರ ಮನೆಯ ಮೇಲೆ ರೈಡ್ ಮಾಡುವ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಂಡಿದೆ.
ಇಂದು ಬೆಳಿಗ್ಗೆ ನಡೆದ ಇಡಿ ದಾಳಿ ಕೂಡ ಅದರ ಒಂದು ಭಾಗ. ದೇಶಾದ್ಯಂತ ಬಿಜೆಪಿ ಜೊತೆ ಸೇರದಿದ್ದವರ ಕಚೇರಿ, ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಆ. 5ರ ಗುರುವಾರ ತೀರ್ಥಹಳ್ಳಿಯಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು ಇಡಿ ದಾಳಿ ಮಾಡಿಸುವುದು ಬಿಜೆಪಿಯ ಹುನ್ನಾರ ಹಾಗೂ ಚುನಾವಣೆಯ ಸಂದರ್ಭದಲ್ಲಿ ಕೋಮು ಗಲಭೆಯ ತಾಲೀಮು ಮಾಡುತ್ತಿದ್ದಾರೆ. ಬಡವರಿಗೆ ತಲುಪಿಸುವ ಆರ್ಥಿಕ ಕಾರ್ಯಕ್ರಮ ಯಾವುದು ಮಾಡುವುದಿಲ್ಲ. ಜ್ಞಾನೇಂದ್ರ ಕೂಡ ನಂದಿತಾ ಪ್ರಕರಣವನ್ನು ಮಾಡಿದ್ದರು. ದೇಶಾದ್ಯಂತ ಧರ್ಮದ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದರು.
ರಾಮಲಿಂಗ ರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿ, ಶಿವಮೊಗ್ಗ ಒಂದೇ ವಿಚಾರವನ್ನು ಅವರು ಹೇಳಿಲ್ಲ. ಎಲ್ಲ ಕಡೆ ಇದೇ ರೀತಿ ಮಾಡುತ್ತಿದ್ದಾರೆ. ಹಿಂದೆ ಶಿವಮೊಗ್ಗದಲ್ಲಿ ಮಣ್ಣಿನ ಬಾಂಬ್ ಹಾರಿಸಿ ಕೋಮು ಗಲಭೆ ಸೃಷ್ಟಿಸುವ ಪ್ರಯತ್ನ ನಡೆಸಿದ್ದರು. ನಂತರ ಅದು ಮುಸ್ಲಿಂನವರು ಮಾಡಿದಲ್ಲ, ಗಾಂಧಿ ಬಜಾರ್ ಹುಡುಗ ಮಾಡಿದ್ದು ಎಂದು ತಿಳಿದು ಬಂತು. ದೇಶದಲ್ಲಿ ಧರ್ಮ ಸಂಘರ್ಷ ನಡೆದಿದ್ದರೆ ಸ್ವತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಅದಕ್ಕೆ ಬಿಜೆಪಿಯೇ ಕಾರಣ. ಬಿಜೆಪಿ ಪರಿವಾರದಿಂದ ಈ ಕೆಲಸ ಆಗುತ್ತಿದೆ. ಬಿಜೆಪಿಯವರು ಬಾಂಬ್ ಹಾಕಬೇಕು ಎನ್ನುವುದಿಲ್ಲ., ಪ್ರಚೋದನೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ಲೋಕಸಭೆ ಚುನಾವಣೆಗೆ ಸಮ್ಮಿಶ್ರ ಸರ್ಕಾರದ ವಿಚಾರವಾಗಿ ಮಾತನಾಡಿ, ಈ ವಿಷಯದಲ್ಲಿ ಜೆಡಿಎಸ್ ನವರಿಗೆ ತೊಂದರೆ. ಹಿಂದೆಲ್ಲ ಸಮಿಶ್ರ ಸರ್ಕಾರ ಆಗಿತ್ತು. ಈಗಿನ ನೇರ ಹೊಂದಾಣಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.