Advertisement
ಹೆಚ್ಚಾಗಿ ನಾಯಿಗಳು ಮರಿ ಹಾಕುವ ಸಮಯದಲ್ಲಿ ಇದು ಕಂಡುಬರುತ್ತವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ವರ್ಷದ ಯಾವ ಸಮಯದಲ್ಲಿಯೂ ಈ ರೋಗ ನಾಯಿಗಳಿಗೆ ತಗಲಬಹುದು. ಪ್ರಾರಂಭದಲ್ಲಿ ಆ್ಯಂಟಿ ಬಯೋಟಿಕ್ ಚಿಕಿತ್ಸೆ ಮೂಲಕ ರೋಗ ಬಾರದಂತೆ ತಡೆಯಬಹುದಾಗಿದೆ. ವಾಂತಿ, ಭೇದಿ ಆರಂಭವಾದಲ್ಲಿ ನಾಯಿಗಳು ಬೇಗನೆ ಸಾವಿಗೀಡಾಗುತ್ತವೆ. ರೋಗ ಬಾರದಂತೆ ಆರಂಭದಲ್ಲಿ ಇಂತಿಷ್ಟು ದಿನಗಳ ಬಳಿಕ ಹಾಗೂ ದಿನಗಳ ಅಂತರದಲ್ಲಿ ಲಸಿಕೆ ನೀಡಿದಲ್ಲಿ ರೋಗವನ್ನು ನಿಯಂತ್ರಿಸಬಹುದು ಎನ್ನುತ್ತಾರೆ ತಜ್ಞರು.
ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಪಶುಪಾಲನ ಇಲಾಖೆಯ ಆಸ್ಪತ್ರೆಗಳಲ್ಲಿ ದಾಖಲಾದ ಶಂಕಿತ ಮೆದುಳು ಜ್ವರ (ಕೆನೈನ್ ಡಿಸ್ಟೆಂಪರ್) ಕೆಲ ತಿಂಗಳಿಂದ ಏರಿಕೆಯಾಗುತ್ತಿದೆ. ಪಶುಪಾಲನ ಆಸ್ಪತ್ರೆಗಳಲ್ಲಿ ದಾಖಲಿ ಸಿಲಾದ/ಹಾಜರುಪಡಿ ಸಲಾದ ನಾಯಿಗಳಲ್ಲಿ ತಪಾಸಣೆ ವೇಳೆ ಶಂಕಿತ ಮೆದುಳು ಜ್ವರ ಕಂಡುಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿಯಲ್ಲಿ 433, ಫೆಬ್ರವರಿಯಲ್ಲಿ 582 ಹಾಗೂ ಮಾರ್ಚ್‌ನಲ್ಲಿ 604 (ಮಂಗಳೂರು-128, ಬಂಟ್ವಾಳ-138, ಬೆಳ್ತಂಗಡಿ-66, ಪುತ್ತೂರು-46, ಸುಳ್ಯ-146, ಮೂಡುಬಿದಿರೆ-30, ಕಡಬ-10 ಉಳ್ಳಾಲ-17, ಮುಲ್ಕಿ 24) ಶಂಕಿತ ಪ್ರಕರಣಗಳು ದಾಖಲಾಗಿವೆ. ಸುಳ್ಯ, ಬಂಟ್ವಾಳ, ಮಂಗಳೂರಿನಲ್ಲಿ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಖಾಸಗಿ ಕ್ಲಿನಿಕ್, ಮೆಡಿಕಲ್ ಹಾಗೂ ಬೀದಿ ನಾಯಿಗಳಲ್ಲಿ ಈ ರೋಗಕ್ಕೆ ಔಷಧಿ ಪಡೆದಿರುತ್ತಾರೆ. ಈ ಬಗ್ಗೆ ಇಲಾಖೆಯಲ್ಲಿ ಮಾಹಿತಿ ಇಲ್ಲ. ಆದ್ದರಿಂದ ಇನ್ನೂ ಅಧಿಕ ಪ್ರಕರಣಗಳು ಪತ್ತೆಯಾಗಿರುವ ಶಂಕೆ ಇದ್ದು, ಹಲವು ನಾಯಿಗಳು ರೋಗದಿಂದ ಸಾವನ್ನಪ್ಪಿರುವ ಘಟನೆಯು ನಡೆದಿವೆ.
Related Articles
Advertisement
ನಾಯಿಗಳಲ್ಲಿ ಮೆದುಳು ಜ್ವರ ಎಂಬುದು ಸಾಮಾನ್ಯವಾಗಿ ಕಂಡುಬರುವ ರೋಗ. ಜಿಲ್ಲೆಯಲ್ಲೂ ನಾಯಿಗಳಲ್ಲಿ ಶಂಕಿತ ಮೆದುಳು ಜ್ವರ ಪ್ರಕರಣಗಳು ಪತ್ತೆಯಾಗಿವೆ. ಇದರ ನಿಯಂತ್ರಣ ಸಾಧ್ಯವಿದ್ದು, ಸ್ಥಳೀಯ ಪಶುಪಾಲನ ಇಲಾಖೆ ವೈದ್ಯರಲ್ಲಿ ಮಾಹಿತಿ ಪಡೆಯಬಹುದು.– ಡಾ| ಅರುಣ್ ಕುಮಾರ್ ಶೆಟ್ಟಿ, ಉಪನಿರ್ದೇಶಕರು
ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಂಗಳೂರು, ದ.ಕ. – ದಯಾನಂದ ಕಲ್ನಾರ್