Advertisement

ಸೋಂಕಿತರ ಪತ್ತೆಗೆ ಸಿದ್ಧವಾಗುತ್ತಿದೆ ಶ್ವಾನಪಡೆ!

09:18 AM Mar 30, 2020 | sudhir |

ಲಂಡನ್‌: ವಾಸನೆ ಗ್ರಹಿಸಿ ಕಳ್ಳರನ್ನು ಹಿಡಿ ಯುವ ಶ್ವಾನಗಳು ತಮ್ಮ ಈ ವಿಶೇಷ ಸಾಮರ್ಥ್ಯದಿಂದ ಕೋವಿಡ್ ವೈರಸ್‌ ಸೋಂಕಿತರನ್ನು ಪತ್ತೆ ಹಚ್ಚ ಬಲ್ಲವೇ? ಇಂಥದೊಂದು ಪ್ರಶ್ನೆಗೆ ಇಂಗ್ಲೆಂಡ್‌ ವಿಜ್ಞಾನಿಗಳು ಉತ್ತರ ಹುಡುಕುತ್ತಿದ್ದಾರೆ.

Advertisement

ಮೆಡಿಕಲ್‌ ಡಿಟೆಕ್ಷನ್‌ ಡಾಗ್ಸ್‌ (ಎಂಡಿಡಿ), ಲಂಡನ್‌ ಸ್ಕೂಲ್‌ ಆಫ್ ಹೈಜೀನ್‌ ಆಂಡ್‌ ಟ್ರಾಪಿಕಲ್‌ ಮೆಡಿಸಿನ್‌ ಮತ್ತು ಡುರ್ಹಾಮ್‌ ವಿ.ವಿ. ಸಹಯೋಗದಲ್ಲಿ ಇಂಥದೊಂದು ಪ್ರಯತ್ನಕ್ಕೆ ಮುಂದಾಗಿದೆ. ಶ್ವಾನಗಳು ತಮ್ಮ ವಾಸನೆ ಗ್ರಹಿಕೆ ಸಾಮರ್ಥ್ಯದ ಮೂಲಕ ಮಲೇರಿಯಾ ರೋಗ ಪತ್ತೆ ಮಾಡಬಲ್ಲವೇ ಎಂಬ ಕುರಿತು ಈ ಹಿಂದೆ ಸಂಶೋಧನೆ ನಡೆದಿತ್ತು. ಇದರ ಆಧಾರದಲ್ಲೇ ಇದೀಗ ಕೊರೊನಾ ವೈರಸ್‌ ಸೋಂಕಿತರ ಪತ್ತೆಗೆ ಶ್ವಾನ ಪಡೆ ನೆರವಾಗಬಲ್ಲದೇ ಎಂಬ ಕುರಿತು ಪರೀಕ್ಷೆ ನಡೆಸಲಾಗುತ್ತಿದೆ.

ಶ್ವಾನಗಳಿಗೆ ಆರು ವಾರಗಳ ಕಾಲ ತರಬೇತಿ ನೀಡುವ ಆಲೋಚನೆಯಿದ್ದು, ಈ ಸಂಬಂಧ ಅಗತ್ಯ ಸಿದ್ಧತೆ ನಡೆಯುತ್ತಿದೆ. ಈ ಪ್ರಯೋಗ ಯಶಸ್ವಿಯಾದರೆ, ತ್ವರಿತ ರೋಗ ಪತ್ತೆ ಸಾಧ್ಯವಾಗಲಿದೆ. ಈ ಹಿಂದೆ ಕ್ಯಾನ್ಸರ್‌, ಪಾರ್ಕಿನ್ಸನ್‌ ರೋಗಿಗಳ ಪತ್ತೆಗೆ ಶ್ವಾನಗಳನ್ನು ಯಶಸ್ವಿಯಾಗಿ ತರಬೇತುಗೊಳಿಸಿರುವ ದತ್ತಿ ಸಂಸ್ಥೆಯೇ ಕೊರೊನಾ ವೈರಸ್‌ ಸೋಂಕಿತರ ಪತ್ತೆ ಕಾರ್ಯದಲ್ಲಿ ತೊಡಗಲಿರುವ ಶ್ವಾನಗಳಿಗೂ ತರಬೇತಿ ನೀಡಲಿದೆ ಎಂದು ಎಂಡಿಡಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next