ಮೈಸೂರು: ನಾನಾ ಬಣ್ಣದ, ಸಣ್ಣ ಗಾತ್ರದಿಂದ ಆಳೆತ್ತರದವರೆಗಿನ ವಿಭಿನ್ನ ತಳಿಯ ಶ್ವಾನಗಳ ಲೋಕ ನಗರದ ಮೈಸೂರು ವಿಶ್ವವಿದ್ಯಾ ಲಯದ ನ್ಪೋರ್ಟ್ಸ್ ಅಂಡ್ ಫೆವಿಲಿಯನ್ ಮೈದಾನದಲ್ಲಿ ಅನಾವರಣಗೊಂಡಿತ್ತು.
ತರಹೇವಾರಿ ತಳಿಯ ನಾಯಿಗಳು ತಮ್ಮ ಒಡೆಯನೊಂದಿಗೆ ಇಡೀ ಮೈದಾನದಲ್ಲಿ ಅತ್ತಿಂದಿತ್ತ ಬಿಂಕು ಬಿನ್ನಾಣದಿಂದ ಓಡಾಡುತ್ತಾ ಶ್ವಾನ ಪ್ರಿಯರ ಮನಸೂರೆಗೊಳಿಸುವ ದೃಶ್ಯ ಒಂದೆಡೆಯಾದರೆ, ಮೈದಾನಕ್ಕೆ ಆಗಮಿಸಿದ್ದ ನೂರಾರು ಯುವತಿಯರು ಮುದ್ದಾದ ಶ್ವಾನಗಳ ವಯ್ನಾರ, ನಜೂಕಿಗೆ ಮನಸೋತು ತಬ್ಬಿ, ಮುದ್ದಾಡುವ ದೃಶ್ಯ ನೋಡುಗರಿಗೆ ಶ್ವಾನ ಪ್ರೇಮವನ್ನು ಇಮ್ಮಡಿಯಾಗಿಸುವಂತಿತ್ತು. ನಾಡಹಬ್ಬ ಮೈಸೂರು ದಸರಾ ಉತ್ಸವ ಅಂಗವಾಗಿ ರೈತ ದಸರಾ ಉಪಸಮಿತಿಯಿಂದ ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಅಂಡ್ ಫೆವಿಲಿಯನ್ ಮೈದಾನದಲ್ಲಿ ಆಯೋಜಿಸಿದ್ದ ಸಾಕು ಪ್ರಾಣಿ ಗಳ ಪ್ರದರ್ಶನದಲ್ಲಿ ಮೈಸೂರು ನಗರ, ಗ್ರಾಮೀಣ ಭಾಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ 23 ತಳಿಯ, ಸಾವಿರಕ್ಕೂ ಹೆಚ್ಚು ಶ್ವಾನಗಳು ಹಾಗೂ 50ಕ್ಕೂ ಹೆಚ್ಚು ಬಗೆ ಬಗೆಯ ತಳಿಯ ಬೆಕ್ಕುಗಳು ಗಮನ ಸೆಳೆದವು.
ಗಮನ ಸೆಳೆದ ಚಾರ್ಲಿ: ಇತ್ತೀಚೆಗೆ ತೆರೆಕಂಡ ಚಾರ್ಲಿ 777 ಚಲನ ಚಿತ್ರದ ಶ್ವಾನ ಚಾರ್ಲಿ ಸಾಕು ಪ್ರಾಣಿಗಳ ಪ್ರದರ್ಶನ ಕಾರ್ಯಕ್ರಮ ದಲ್ಲಿ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಚಿತ್ರನಟ, ನಟಿ ಯರು ಹಾಗೂ ಸೆಲಿಬ್ರೆಟಿಗಳಿನ್ನು ನೋಡಲು ಜನ ಮುಗಿಬೀಳುವ ದೃಶ್ಯ ಸಾಮಾನ್ಯ. ಚಾರ್ಲಿ ಕಂಡೊಂಡನೆ ನೂರಾರು ಮಂದಿ ಅದ ರೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದರೆ, ಇನ್ನೂ ಕೆಲವರು ಚಾರ್ಲಿಯನ್ನು ಸ್ಪರ್ಶಿಸಿ, ಮೈದಡವಿ ಸಂಭ್ರಮಿಸಿದರು.
ಅಪರೂಪದ ತಳಿಗಳ ದರ್ಶನ: ಮೈದಾನದಲ್ಲಿ ಜರ್ಮನ್ ಶಫರ್ಡ್, ಡಾಬರ್ ಮೆನ್, ಗೋಲ್ಡನ್ ರಿಟ್ರವರ್, ಲ್ಯಾಬ್, ಸೈಬೀರಿ ಯನ್ ಹಸ್ಕಿ, ರ್ಯಾಟ್‌ವ್ಹೀಲರ್ ತಳಿಯ ನೂರಾರು ಶ್ವಾನ ಗಳು ಕಂಡು ಬಂದವು. ಇವುಗಳ ಜೊತೆಗೆ ಚೈನೀಸ್ ತಳಿಯ ಪೀಕಿಂಗೀಸ್ ನಾಯಿ ಪ್ರಮುಖ ಆಕರ್ಷಣೆ ಯಾಗಿತ್ತು. ಮೈತುಂಬ ಉದ್ದದ ರೋಮಗ ಳೊಂದಿಗೆ ಆಕರ್ಷ ಮುಖ ಚಹರೆ ಹೊಂದಿದ್ದ ಈ ಶ್ವಾನ ಇಡೀ ಮೈಸೂರಿನಲ್ಲಿ ಇರುವುದು ಒದೊಂದೆ ಎಂಬುದು ಗಮನಾರ್ಹ.
ಗ್ರೇಟ್ ಡೆನ್, ಸೆಂಟ್ ಬರ್ನಾಡ್, ಅಮೆರಿಕನ್ ಬುಲ್ಲಿ, ಮಿನ್‌ಪಿನ್, ಬೀಗಲ್, ಫ್ರೆಂಚ್ ಬುಲ್, ಡೂಡಲ್ ರೆಡ್ ರಿಟನ್, ಮೆಲ್ಜಿಯನ್ ಮೆಲಿಯೋಸ್, ಡ್ಯಾಶೂಂಡ್, ಪೂಡಲ್, ಚೌ ಚೋ, ಶಿಟ್ಝೂ, ಲ್ಯಾಶೋಪ್ಸ್, ಪಿಟ್ ಬುಲ್, ಬೆಲ್ಜಿಯಂ ಶಫರ್ಡ್ ಪ್ರಮುಖ ಆಕರ್ಷಣೆಯಾಗಿದ್ದವು. ಇದರ ಜತೆಗೆ ದೇಶಿ ತಳಿಯಾದ ಮುಧೋಳ್ ಮತ್ತು ರಾಜುಪಲ್ಲಿ ನಾಯಿಗಳು ಗಮನ ಸೆಳದವು.
ಮಾರ್ಜಾಲಗಳ ವಯ್ನಾರ : ಸಾಕುಪ್ರಾಣಿಗಳ ಪ್ರದರ್ಶನದಲ್ಲಿ ಶ್ವಾನಗಳಷ್ಟೇ ಅಲ್ಲದೆ ಮನೆಯ ಮುದ್ದಿನ ಪ್ರಾಣಿ ಎಂದೇ ಹೆಸರಾದ ಬೆಕ್ಕುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ನೋಡುಗರನ್ನು ಬೆರಗುಗೊಳಿಸಿದವು. ಬೆಂಗಾಲ್ ಕ್ಯಾಟ್, ಬಾಂಬೆ ಕ್ಯಾಟ್, ಹಿಮಾಲಯನ್ ಕ್ಯಾಟ್, ಮೈನ್ ಕೂನ್, ಬ್ರಿಟೀಷ್ ಶಾರ್ಥಾçರ್, ಪಶಿಧಯನ್ ಕ್ಯಾಟ್ ಸೇರಿದಂತೆ ನಾಲ್ಕೈದು ತಳಿಯ 50ಕ್ಕೂ ಹೆಚ್ಚು ಬೆಕ್ಕುಗಳು ಬಿಂಕು, ಬಿನ್ನಾಣದಿಂದ ಓಡಾಡುತ್ತ ತಮ್ಮ ವಯ್ನಾರ ಪ್ರದರ್ಶಿಸಿದವು.
-ಸತೀಶ್ ದೇಪುರ